Asianet Suvarna News Asianet Suvarna News

ರಾಮಲಲ್ಲಾ ಪ್ರತಿಷ್ಠಾಪನೆಗೆ 100 ಕ್ವಿಂಟಲ್ ಅಕ್ಷತೆ ಬಳಕೆ, ಪೂಜೆ ಬಳಿಕ ದೇಶಾದ್ಯಂತ ಭಕ್ತರಿಗೆ ವಿತರಣೆ!

ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗುತ್ತಿದೆ. ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳ ತಯಾರಿ ನಡೆಯುತ್ತಿದೆ. ದೇಶದ ಇತಿಹಾಸದಲ್ಲೇ ವಿಶೇಷ ಹಾಗೂ ಸ್ಮರಣೀಯ ರೀತಿಯಲ್ಲಿ ಶ್ರೀರಾಮ ಮಂದಿ ಉದ್ಘಾಟನೆಯಾಗಲಿದೆ. ರಾಮಲ್ಲಾ ಪ್ರತಿಷ್ಠಾಪನೆಗೆ 100 ಕ್ವಿಂಟನ್ ಅಕ್ಕಿ ಆರ್ಡರ್ ಮಾಡಲಾಗಿದೆ. ಪೂಜೆಯಲ್ಲಿ ಬಳಸವ ಈ ಅಕ್ಷತೆಯನ್ನು ದೇಶದ ಮೂಲೆ ಮೂಲೆಗೆ ತಲುಪಿಸಲಾಗುತ್ತದೆ.

Ram Janmbhoomi Teerth Kshetra trust ordered 100 quintal akshat for ram lalla pran pratishtha ckm
Author
First Published Nov 1, 2023, 9:27 PM IST

ಆಯೋಧ್ಯೆ(ನ.01) ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದೆ. ಜನವರಿ 16ರಿಂದ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ರಾಮ ಮಂದಿರ ಉದ್ಘಾಟನೆ ಭಾರತದ ಇತಿಹಾಸದಲ್ಲಿ ಸ್ಮರಣೀಯವಾಗಲಿದೆ. ಬರೋಬ್ಬರಿ 500 ವರ್ಷಗಳಿಂದ ಶ್ರೀರಾಮ ಮಂದಿರಕ್ಕಾಗಿ ಪರಿತಪಿಸಿದ ಹಿಂದೂಗಳಿಗೆ ಶ್ರೀರಾಮ ಮಂದಿರ ಪ್ರತಿ ಪೂಜಾ ಕೈಂಕರ್ಯದ ಪ್ರಸಾದ ತಲುಪಿಸಲು ಯೋಜನೆ ಸಿದ್ಧವಾಗಿದೆ. ಇದೀಗ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ವೇಳೆ ಅಕ್ಷತೆಯಾಗಿ 100 ಕ್ವಿಂಟಲ್ ಅಕ್ಕಿ ಬಳಕೆ ಮಾಡಲಾಗುತ್ತದೆ. ಈ ಅಕ್ಷತೆ ಪ್ರಸಾದವನ್ನು ದೇಶದ ಮೂಲೆ ಮೂಲೆಗೆ ವಿತರಣೆ ಮಾಡಲಾಗುತ್ತದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶ್ರೀರಾಮ ಭಕ್ತರಿಗೆ ಅಕ್ಷತೆಗಾಗಿ 100 ಕ್ವಿಂಟಾಲ್ ಅಕ್ಕಿಗೆ ಆರ್ಡರ್ ಮಾಡಿದೆ. ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಆಯೋಧ್ಯೆಯ ಪ್ರಸಾದವನ್ನು ದೇಶದ ಪ್ರತಿಯೊಬ್ಬ ರಾಮ ಭಕ್ತನಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ.  ಇದರೊಂದಿಗೆ, ಒಂದು ಕ್ವಿಂಟಾಲ್ ಅರಿಶಿನ ಮತ್ತು ದೇಸಿ ತುಪ್ಪವನ್ನು ಸಹ ಆರ್ಡರ್ ಮಾಡಲಾಗಿದೆ. ಅಕ್ಕಿಯ ಜತೆ ಅವನ್ನು ಬೆರೆಸಿ ಅಕ್ಷತೆ ಸಿದ್ಧಪಡಿಸಲಾಗುತ್ತದೆ. ಅದನ್ನು ಹಿತ್ತಾಳೆಯ ‘ಕಲಶ’ ದಲ್ಲಿ ನ.5ರಂದು ಪೂಜೆಯ ಸಮಯದಲ್ಲಿ ಭಗವಾನ್ ರಾಮನ ಆಸ್ಥಾನದ ಮುಂದೆ ಇಡಲಾಗುತ್ತದೆ. ನಂತರ ಅಕ್ಕಿಯನ್ನು ವಿಶ್ವ ಹಿಂದೂ ಪರಿಷತ್ತಿನ ಮೂಲಕ ವಿತರಿಸಲಾಗುತ್ತದೆ.

 

ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟನೆಗೆ ಜಮೀಯತ ಉಲೇಮಾ ಮುಸ್ಲಿಂ ಸಂಘಟನೆ ವಿರೋಧ!

ವಿವಿಧ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ 2 ಕೋಟಿಗೂ ಹೆಚ್ಚು ಕರಪತ್ರಗಳನ್ನು ಮುದ್ರಿಸಲಾಗಿದೆ. ಈ ಕರಪತ್ರಗಳನ್ನು ಅಕ್ಷತೆಯ ಜೊತೆಗೆ ದೇಶದ ಪ್ರತಿ ಮನೆಗೂ ಕಳುಹಿಸಲಾಗುವುದು ಎಂದು ರಾಮಜನ್ಮಭೂಮಿ ಟ್ರಸ್ಟ್‌ ಹೇಳಿದೆ. ನ.5ರಂದು ಪ್ರತಿಯೊಬ್ಬ ಪ್ರತಿನಿಧಿಗೆ ಐದು ಕೆಜಿ ಅಕ್ಕಿ ನೀಡಲಾಗುವುದು. ಜ.1 ರಿಂದ 15ರವರೆಗೆ ದೇಶದ 5 ಲಕ್ಷ ಹಳ್ಳಿಗಳಲ್ಲಿ ‘ಪೂಜಿತ ಅಕ್ಷತೆ’ ವಿತರಿಸಲಾಗುತ್ತದೆ.

ಏತನ್ಮಧ್ಯೆ, ದೇಶಾದ್ಯಂತದ ರಾಮನ ಭಕ್ತರು ಲೈವ್ ಫೀಡ್ ಮೂಲಕ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯದ ಟ್ರಸ್ಟ್ ಗ್ರಾಮ ಮತ್ತು ಪಟ್ಟಣಗಳಲ್ಲಿನ ದೇವಾಲಯಗಳಲ್ಲಿ ಟೀವಿ ಪರದೆಗಳನ್ನು ಅಳವಡಿಸಲು ವ್ಯವಸ್ಥೆ ಮಾಡಿದೆ. ಇದರಿಂದ ಅಯೋಧ್ಯೆ ಜನಸಂದಣಿ ನಿಯಂತ್ರಣಕ್ಕೆ ಬರಲಿದೆ ಎಂದು ಟ್ರಸ್ಟ್‌ ಹೇಳಿದೆ.

ಜನವರಿ 16 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ತಯಾರಿ ಆರಂಭಗೊಳ್ಳಲಿದೆ. 16ರಿಂದಲೇ ಪೂಜೆ ಆರಂಭಗೊಳ್ಳುತ್ತಿದೆ. ಇನ್ನು ಜ.17ರಂದು ಅಯೋಧ್ಯೆ ಧಾಮದಲ್ಲಿ ರಾಮಲಲ್ಲಾ ಮೂರ್ತಿಯ ಬೃಹತ್‌ ಶೋಭಾಯಾತ್ರೆ ನಡೆಯಲಿದೆ. ಇದಕ್ಕೆ ಸಂಪೂರ್ಣ ತಯಾರಿ ನಡೆಸಲಾಗಿದೆ. ಪೊಲೀಸ್ ಭಗಿಭದ್ರತೆ ಕುರಿತು ಚರ್ಚೆ ನಡೆದಿದೆ. ಹೆಚ್ಚುವರಿ ಪೊಲೀಸ್ ಸೇರಿದಂತೆ ಭದ್ರತಾ ಪಡೆಗಳು ಈಗಾಗಲೇ ಹಲವು ಸುತ್ತಿನ ಚರ್ಚೆ ನಡೆಸಿದೆ.

ಆಯೋಧ್ಯೆ ಭವ್ಯ ರಾಮ ಮಂದಿರದೊಳಗೆ ಏನೇನಿದೆ? ಫೋಟೋ ಹಂಚಿಕೊಂಡ ಜನ್ಮಭೂಮಿ ಟ್ರಸ್ಟ್!

ಜ.18ರಂದು  ಪ್ರಾಣ ಪ್ರತಿಷ್ಠಾಪನೆ ವಿಧಾನ ಆರಂಭಗೊಳ್ಳಲಿದೆ. ವಾಯು ಮತ್ತು ವರುಣ ಪೂಜೆ ಇದೇ ದಿನ ನಡೆಯಲಿದೆ. ಇನ್ನು ಜ.19ರಂದು ಅಗ್ನಿ ಸ್ಥಾಪನಾ ವಿಧಿ ಆಚರಣೆ,ವಾಸ್ತು ಶಾಂತಿಯೂ ನೆರವೇರಲಿದೆ. ಇನ್ನು ಜನವರಿ 20 ರಂದು ಗರ್ಭಗುಡಿ ಶುದ್ಧೀಕರಣ ಕಾರ್ಯಗಳು ನಡೆಯಲಿದೆ.  ಜನವರಿ 21 ರಂದು ರಾಮಲಲ್ಲಾ ಮೂರ್ತಿಗೆ 125 ಕಲಶಾಭಿಷೇಕ ನೆರವೇರಿಸಲಾಗುತ್ತದೆ. ಇನ್ನು ಜನವರಿ 22 ರಂದು ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಪ್ರಧಾನಿ ಮೋದಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

Follow Us:
Download App:
  • android
  • ios