Kerala Human Sacrifice Case: ಕೊಂದ ನಂತರ ಮಾನವ ಶವದ ಮಾಂಸ ಬೇಯಿಸಿ ತಿಂದ ಆರೋಪಿಗಳು

Kerala Human sacrifice case latest news: ಕೇರಳದಲ್ಲಿ ನಡೆದ ನರಬಲಿ ಪ್ರಕರಣದಲ್ಲಿ ಶಾಕಿಂಗ್‌ ಸತ್ಯ ಬೆಳಕಿಗೆ ಬಂದಿದೆ. ಸಂತ್ರಸ್ಥರನ್ನು ಕೊಂದ ಬಳಿಕ ಆರೋಪಿಗಳು ಮಾಂಸವನ್ನು ಬೇಯಿಸಿ ತಿಂದಿದ್ದಾರೆ. ಇದರಿಂದ ಚಿರ ಯೌವನ ಸಿಗುವುದೆಂದು ಆರೋಪಿಗಳು ನಂಬಿದ್ದರು ಎನ್ನಲಾಗಿದೆ.

shocking revealation in kerala human sacrificing case accused have eaten human meat after killing

ಕೊಚ್ಚಿ: ಕೇರಳದ ಕೊಚ್ಚಿ ಸಮೀಪದಲ್ಲಿ ನಡೆದಿದ್ದ ನರಬಲಿ ಪ್ರಕರಣದಲ್ಲಿ ಬೆಚ್ಚಿ ಬೀಳಿಸುವ ಸತ್ಯ ಹೊರಬಿದ್ದಿದೆ. ಯೌವ್ವನ ಕಾಪಾಡಿಕೊಳ್ಳಲು ನಡೆಸಿದ್ದ ಈ ನರಬಲಿಯ ನಂತರ ಆರೋಪಿಗಳು ಶವದ ಮಾಂಸವನ್ನು ಸೇವನೆ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಕೇಳಿ ಬಂದ ಎರಡನೇ ಮೌಢ್ಯಾಚರಣೆಯ ಪ್ರಕರಣ ಇದಾಗಿದ್ದು, ಒಟ್ಟೂ ಮೂವರು ವ್ಯಕ್ತಿಗಳನ್ನು ವಂಚಿಸಿ ನರಬಲಿ ಕೊಡಲಾಗಿದೆ. ಕೊಚ್ಚಿ ಸಮೀಪದ ಪಥನಾಮ್ತಿತ್ತ ಜಿಲ್ಲೆಯ ಎಲಂತೂರ್‌ ಗ್ರಾಮದಲ್ಲಿ ಈ ನರಬಲಿ ಕೃತ್ಯ ನಡೆದಿದೆ. ಪ್ರಕರಣ ಸಂಬಂಧ ದಂಪತಿ ಸೇರಿ ಒಟ್ಟೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭಗವಾಲ್‌ ಸಿಂಗ್‌, ಸ್ಥಳೀಯ ನಾಟಿ ಮಸಾಜ್‌ ವೈದ್ಯ, ಆತನ ಹೆಂಡತಿ ಲೈಲಾ ಮತ್ತು ರಶೀದ್‌ ಅಲಿಯಾಸ್‌ ಮುಹಮ್ಮದ್‌ ಶಫಿ ಎಂದು ಗುರುತಿಸಲಾಗಿದೆ. 

ನಬಲಿಯ ಮೌಢ್ಯಾಚರಣೆಗೆ ಬಲಿಯಾದ ಸಂತ್ರಸ್ಥರನ್ನು ಪದ್ಮಾ ಮತ್ತು ರೋಸ್ಲಿನ್‌ ಎಂದು ಗುರುತಿಸಲಾಗಿದೆ. ಮೃತ ಪದ್ಮಾ ಮತ್ತು ರೋಸ್ಲಿನ್‌ ಇಬ್ಬರೂ ಜೀವನಕ್ಕಾಗಿ ರಸ್ತೆ ಬದಿಗಳಲ್ಲಿ ಲಾಟರಿ ಟಿಕೆಟ್‌ ಮಾರುತ್ತಿದ್ದವರು. ಯೌವನ, ಹಣಕಾಸು ಸಮಸ್ಯೆ ನಿವಾರಣೆ ಮತ್ತು ಜೀವನದಲ್ಲಿ ಸುಖ ಸಂತೋಷ ಸಿಗಲೆಂದು ಈ ಇಬ್ಬರು ಅಮಾಯಕರ ಕತ್ತು ಸೀಳಿ ಆರೋಪಿಗಳು ನರಬಲಿ ಮಾಡಿದ್ದಾರೆ. ಮಂಗಳವಾರ ಕತ್ತರಿಸಿದ ಶವದ ಭಾಗಗಳು ದಂಪತಿಗಳ ಮನೆಯಲ್ಲಿ ಸಿಕ್ಕಿದ್ದವು. ಮನುಷ್ಯರನ್ನು ಬಲಿ ನೀಡಿ ಅವರ ಮಾಂಸವನ್ನು ಬೇಯಿಸಿ ತಿಂದರೆ ಯೌವನ ಸಿಗುತ್ತದೆ ಎಂದು ಆರೋಪಿ ರಶೀದ್‌ ದಂಪತಿಗೆ ಹೇಳಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: Human Sacrifice In Kerala: ಸುಶಿಕ್ಷಿತ ಕೇರಳದ ದೇವಸ್ಥಾನದಲ್ಲಿ ಎರಡು ಮಹಿಳೆಯರ ಬಲಿ!

ನರಬಲಿಯ ಅಂಗವಾಗಿ ಕೊಲೆ ಮಾಡಿದ ನಂತರ ಮಾಂಸವನ್ನು ದಂಪತಿಗಳು ಸೇವಿಸಿದ್ದರು ಎಂಬುದನ್ನು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೋಸ್ಲಿನ್‌ರ ಪಕ್ಕೆಲುಬಿನ ಬಳಿ ಕತ್ತರಿಸಲಾಗಿದ್ದು ಅದನ್ನೇ ತಿಂದಿರುವ ಸಾಧ್ಯತೆಯಿದೆ. ಈ ಇಡೀ ಮೌಢ್ಯಾಚರಣೆಯನ್ನು ರಶೀದ್‌ ಮುಂದೆ ನಿಂತು ಮಾಡಿಸಿದ್ದ. ಕೊಲೆ ಮಾಡಿದ ಮೇಲೆ ಮಾಂಸವನ್ನು ತಿನ್ನುವಂತೆ ಹೇಳಿದ್ದ, ಅವನೇ ಇಡೀ ಪ್ರಕರಣದ ಕಾರಣಕರ್ತ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ. ಪೊಲೀಸರ ಮಾಹಿತಿ ಪ್ರಕಾರ ಸಂತ್ರಸ್ಥರಿಬ್ಬರೂ 50 ವರ್ಷದ ಆಸುಪಾಸಿನವರಾಗಿದ್ದು, ಕೊಚ್ಚಿ ಮತ್ತು ಕಾಲಡಿ ಬಳಿಯ ನಿವಾಸಿಗಳಾಗಿದ್ದಾರೆ. ಇದೇ ವರ್ಷದ ಜೂನ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಇಬ್ಬರೂ ಸಂತ್ರಸ್ತರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಮಿಸ್ಸಿಂಗ್‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್‌ ಟವರ್‌ ಲೊಕೇಷನ್‌ ಟ್ರಾಕ್‌ ಮಾಡಿಕೊಂಡು ಬಂದಾಗ ಅದು ದಂಪತಿಗಳ ಮನೆಗೆ ಬಂದು ತಲುಪಿದೆ. ಅಲ್ಲಿ ಹುಡುಕಾಟ ನಡೆಸಿದಾಗ ಕತ್ತರಿಸಿದ ಮೃತ ದೇಹದ ಭಾಗಗಳು ಸಿಕ್ಕಿವೆ. ಮೊದಲ ಮಹಿಳೆ ಕಾಣೆಯಾದ ನಂತರ ಆಗಸ್ಟ್‌ 17ರಂದು ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದಳು. ಅದರ ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. 

ಇನ್ನೊಬ್ಬರು ಸಂತ್ರಸ್ಥೆ ಮೂಲತಃ ತಮಿಳುನಾಡಿನ ಧರ್ಮಪುರಿಯವರಾಗಿದ್ದು ಆಗಸ್ಟ್‌ 17ರಂದು ಕಾಣೆಯಾಗಿದ್ದರು. ಅದಾದ ನಂತರ ಆಕೆಯ ಸಹೋದರಿ ದೂರು ನೀಡಿದ್ದರು. ಇಬ್ಬರನ್ನೂ ಬಲಿ ನೀಡಿದ ಬಳಿಕ ದೇಹಗಳನ್ನು ತುಂಡುತುಂಡಾಗಿ ಕತ್ತಿರಿಸಿ ಎರಡು ಪ್ರತ್ಯೇ ಸ್ಥಳಗಳಲ್ಲಿ ಹುಗಿಯಲಾಗಿತ್ತು. ಪೊಲೀಸರ ತನಿಖೆ ವೇಳೆ ಸತ್ಯವನ್ನು ಬಿಚ್ಚಿಟ್ಟ ನಂತರ ಪೊಲೀಸರು ಶವವನ್ನು ಹೂತಿಟ್ಟ ಸ್ಥಳದಿಂದ ಹೊರತೆಗೆದಿದ್ದರು. 

ಇದನ್ನೂ ಓದಿ: ನೆಲಮಂಗಲ: ಬಾಲಕಿಯನ್ನು ನರಬಲಿ ನೀಡಲು ಪೂಜೆ ನಡೆಸಿರುವ ಶಂಕೆ, ಸ್ಥಳೀಯರಿಂದ ರಕ್ಷಣೆ

ಈ ಭೀಕರ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇವಲ ಹೀನ ಮನಸ್ಥಿತಿಯವರು ಮಾತ್ರ ಇಂತಾ ಕೃತ್ಯ ಮಾಡಲು ಸಾಧ್ಯ ಎಂದಿದ್ದಾರೆ. ಜತೆಗೆ ಮಾಟ ಮಂತ್ರ ಮತ್ತು ಮೌಢ್ಯಾಚರಣೆ ನಾಗರಿಕ ಸಂಸ್ಕೃತಿಗೆ ದೊಡ್ಡ ಕಳಂಕ ಎಂದು ಆತಂಕ ವ್ಯಕ್ತಪಡಿಸಿದರು. 

Latest Videos
Follow Us:
Download App:
  • android
  • ios