ನಗರ, ಪಟ್ಟಣ, ದಾರಿ ಹೆಸರು ಬದಲಾಯಿಸುವುದರಲ್ಲಿ ಉತ್ತರ ಪ್ರದೇಶ ಸರ್ಕಾರ ಮುಂದಿದೆ. ಇದೀಗ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಮೈತ್ರಿ ಪಕ್ಷ ಶಿವಸೇನೆ ಈ ರೀತಿಯ ಹೆಜ್ಜೆ ಇಟ್ಟಿದೆ. ಆದರೆ ಶಿವಸೇನೆ ನಿರ್ಧಾರಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಮುಂಬೈ(ಜ.01): ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿಯಲ್ಲಿ ಒಡಕು ಮೋಡಿದೆಯಾ ಅನ್ನೋ ಅನುಮಾನ ಬಲವಾಗುತ್ತಿದೆ. ಇದೀಗ ಹೆಸರು ಬದಲಾವಣೆ ವಿಚಾರದಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ಮನಸ್ತಾಪಕ್ಕೆ ಕಾರಣವಾಗಿದೆ. ಮುಂಬೈನಿಂದ 361 ಕಿ.ಮೀ ದೂರದಲ್ಲಿರುವ ಔರಂಗಬಾದ್ ನಗರದ ಹೆಸರನ್ನು ಬದಲಿಸಲು ಶಿವಸೇನೆ ಮುಂದಾಗಿದೆ.
ರೈತರ ಪ್ರತಿಭಟನೆ ನಡುವೆ ಸದ್ದು ಮಾಡಿದ ಶಿವಸೇನಾ ನಾಯಕನ ಸರ್ಜಿಕಲ್ ಸ್ಟ್ರೈಕ್!
ಛತ್ರಪತಿ ಶಿವಾಜಿ ಮಹರಾಜ್ ಪುತ್ರ ಸಂಬಾಜಿ ಮಹರಾಜ್ ಈಗಿನ ಔರಂಗಬಾದ್ ನಗರ ಆಳುತ್ತಿದ್ದ. ಆದರೆ ಮೊಘಲ್ ದೊರೆ ಔರಂಗಬೇಜ್ ದಾಳಿ ಮಾಡಿ ಸಂಪೂರ್ಣ ಕೊಳ್ಳೆ ಹೊಡೆದಿದ್ದ. ಬಳಿಕ ಈ ನಗರಕ್ಕೆ ಔರಂಗಬಾದ್ ಎಂದು ಮರುನಾಮಕರಣ ಮಾಡಿದ್ದ. ಬಳಿಕ ಇದು ಔರಂಗಬಾದ್ ನಗರ ಎಂದೇ ಪ್ರಖ್ಯಾತಿಗೊಂಡಿದೆ. ಇದೀಗ ಶಿವಸೇನೆ ಇದೇ ಔರಂಗಬಾದ್ ನಗರವನ್ನು ಸಂಬಾಜಿ ನಗರ್ ಎಂದು ಮರುನಾಮಕರಣ ಮಾಡಲು ಮುಂದಾಗಿದೆ.
ಕರಾಚಿ ಸ್ವೀಟ್ಸ್ ಮಳಿಗೆ ಹೆಸರು ಬದಲಿಸಲು ಶಿವಸೇನಾ ನಾಯಕನ ಧಮ್ಕಿ, ವಿಡಿಯೋ ವೈರಲ್.
ಶಿವಸೇನೆ ಪ್ರಸ್ತಾವನೆಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಉತ್ತರ ಪ್ರದೇಶ ಸರ್ಕಾರದ ಈ ನಡೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಇದೀಗ ತಮ್ಮದೇ ಸರ್ಕಾರ ಈ ಬದಲಾವಣೆಗೆ ಮುಂದಾದರೆ ಕಾಂಗ್ರೆಸ್ ಇಬ್ಬಗೆಯ ನಿಲುವು ಪಕ್ಷಕ್ಕೆ ಮುಳುವಾಗಬಹುದು ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಔರಂಗಾಬಾದ್ ನಗರ ಪಾಲಿಕೆ ಚುನಾವಣೆಗೆ ಸನಿಹದಲ್ಲಿ ಈ ರೀತಿಯ ಹೆಸರು ಬದಲಾವಣೆ ರಾಜಕೀಯ ನಡೆಯುತ್ತಲೇ ಇದೆ. ಈ ಹಿಂದೆ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಪಕ್ಷವಿದ್ದಾಗಲೂ ಇದೇ ರೀತಿಯ ಪ್ರಯತ್ನ ನಡೆದಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 1, 2021, 9:31 PM IST