ಮುಂಬೈ(ನ.19):  ಬಾಂದ್ರಾದಲ್ಲಿರುವ ಕರಾಚಿ ಸ್ವೀಟ್ಸ್ ಅತ್ಯಂತ ಜನಪ್ರೀಯ ಸಿಹಿ ತಿನಿಸು ಮಳಿಗೆಯಾಗಿದೆ. ಪ್ರತಿ ದಿನ ಸಾವಿರಾರು ಮಂದಿ ಇಲ್ಲಿ ಸಿಹಿ ತಿನಿಸು ಖರೀದಿಸುತ್ತಾರೆ. ಕರಾಚಿ ಸ್ವೀಟ್ಸ್ ಹೆಸರಿನಿಂದ ಹಿಂದೆ ಇತಿಹಾಸವೂ ಇದೆ. ಆದರೆ ಇದೀಗ ಶಿವಸೇನಾ ನಾಯಕ ನಿತಿನ್ ಮಧುಕರ್ ನಂದಗಾಂವ್ಕರ್, ಕರಾಚಿ ಸ್ವೀಟ್ಸ್ ಮಳಿಗೆ ಹೆಸರನ್ನು ಬದಲಾಯಿಸಿ ಮರಾಠಿ ಹೆಸರಿಡಲು ಸೂಚಿಸಿದ್ದಾರೆ. 

ನೌಕಾ ಪಡೆಯ ಮಾಜಿ ಅಧಿಕಾರಿಗೆ ಥಳಿತ; ಶಿವಸೇನಾ ಮುಖಂಡ ಸೇರಿ 6 ಮಂದಿ ಅರೆಸ್ಟ್!

15 ದಿನ ಸಮಯ ನೀಡುತ್ತೇನೆ. ಅಷ್ಟರೊಳಗೆ ಕರಾಚಿ ಸ್ವೀಟ್ಸ್ ಹೆಸರು ಬದಲಾಯಿಸಬೇಕು ಎಂದು ಧಮ್ಕಿ ಹಾಕಿದ್ದಾನೆ. ಹೆಸರು ಬದಲಾಯಿಸಲು ಸೂಚಿಸಿದ ವೇಳೆ ಕರಾಚಿ ಸ್ವೀಟ್ಸ್ ಮಾಲೀಕ ಪರಿಪರಿಯಾಗಿ ಶಿವಸೇನಾ ನಾಯಕನಿಗೆ ಹೆಸರಿನ ಮಹತ್ವ ತಿಳಿಸಲು ಪ್ರಯತ್ನಿಸಿದ್ದಾರೆ.

 

ಭಾರತ -ಪಾಕಿಸ್ತಾನ ಇಬ್ಬಾಗವಾದ ಸಂದರ್ಭದಲ್ಲಿ ಕರಾಚಿ ಸ್ವೀಟ್ಸ್ ಮಾಲೀಕನ ಪೂರ್ವಜರು ಕರಾಚಿಯಿಂದ ಜೀವಭಯದಿಂದ ಮುಂಬೈಗೆ ಆಗಮಿಸಿದ್ದಾರೆ. ಬಳಿಕ ಕರಾಚಿಯಲ್ಲಿ ತಮಗೆ ಇದ್ದ ಸ್ವೀಟ್ಸ್ ವ್ಯಾಪಾರವನ್ನು ಮುಂಬೈನ ಬಾಂದ್ರಾದಲ್ಲಿ ಆರಂಭಿಸಿದ್ದಾರೆ. ಈ ವೇಳೆ ತಾವು ಕರಾಚಿಯಿಂದ ಭಾರತಕ್ಕೆ ಆಗಮಿಸಿದ ಕಾರಣ ಕರಾಚಿ ಸ್ವೀಟ್ಸ್ ಅನ್ನೋ ಹೆಸರಿಟ್ಟಿದ್ದಾರೆ. ಈ ಕುರಿತು ಸ್ವೀಟ್ಸ್ ಮಾಲೀಕ ನಿತಿನ್‌ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಮುಂಬೈ=ಪಾಕ್, ಕಂಗನಾಗೆ ಟ್ವೀಟ್ ನಂತರ ಪಾಕಿಸ್ತಾನದಲ್ಲೇನಾಯ್ತು?.

ಈ ವೇಳೆ ಶಿವಸೇನಾ ನಾಯಕ ಕರಾಚಿ ಹೆಸರು ಪಾಕಿಸ್ತಾನದ್ದಾಗಿದೆ. ಭಯೋತ್ಪಾದಕರನ್ನು ಪೋಷಿಸುವ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಈ ಹೆಸರು ಬೇಡ. ಇದರ ಬದಲು ಮರಾಠಿ ಹೆಸರಿಡಿ. 15 ದಿನ ಸಮಯ ನೀಡುತ್ತೇನೆ. 15 ದಿನ ಮರಳಿ ಬರುವಾಗ ಹೆಸರು ಬದಲಾಗಿರಬೇಕು ಎಂದು ಸೂಚಿಸಿದ್ದಾನೆ.

 

ಸದ್ಯ ಕರಾಚಿ ಸ್ವೀಟ್ಸ್ ಮಾಲೀಕ ಮಳಿಗೆ ಕರಾಚಿ ಹೆಸರನ್ನು ಪೇಪಲ್ ಮೂಲಕ ಮುಚ್ಚಿದ್ದಾರೆ. ಇದೀಗ ಕೇವಲ ಸ್ವೀಟ್ಸ್ ಅನ್ನೋ ಹೆಸರು ಮಾತ್ರ ಕಾಣುತ್ತಿದೆ. ಆದರೆ ಶಿವಸೇನಾ ನಾಯಕ ಸಂಜಯ್ ರಾವತ್ ಹೆಸರು ಬದಲಾಯಿಸಲು ಹೇಳಿರುವುದು ಶಿವಸೇನಾ ಅಧೀಕೃತ  ವ್ಯಕ್ತಿಗಳಲ್ಲ. ಇದು ಶಿವಸೇನಾದ ನಿಲುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ಇದೀಗ ಸ್ವತಂತ್ರ್ಯ ನಂತರ ತಲೆ ಎತ್ತಿದ ಕರಾಚಿ ಸ್ವೀಟ್ಸ್ ಇದೀಗ ಹೆಸರು ಬದಲಾಯಿಸುತ್ತಾ ಅಥವಾ ಕಾನೂನು ಹೋರಾಟ ಮಾಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.