Asianet Suvarna News Asianet Suvarna News

Viral Video: ಲೋಕಸಭೆಯಲ್ಲಿ ಹನುಮಾನ್‌ ಚಾಲಿಸಾ ಹಾಡಿದ ಮಹಾ ಸಿಎಂ ಏಕ್‌ನಾಥ್‌ ಶಿಂಧೆ ಪುತ್ರ

ಮೊದಲು ನಿಮಗೆ ಹನುಮಾನ್‌ ಚಾಲಿಸಾ ಬರುತ್ತಾ ನೋಡ್ಕೊಳ್ಳಿ ಎಂದು ಕಿಚಾಯಿಸಿದ ಸಂಸದರಿಗೆ ಉತ್ತರ ಎನ್ನುವಂತೆ ಶಿವಸೇನಾ (ಏಕನಾಥ್‌ ಶಿಂಧೆ ಬಣ) ಸಂಸದ ಹಾಗೂ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಪುತ್ರ ಲೋಕಸಭೆಯಲ್ಲಿ ಇಡೀ ಹನುಮಾನ್‌ ಚಾಲೀಸಾ ಹಾಡಿದ್ದಾರೆ.
 

Shiv Sena MP shrikant shinde recites Hanuman Chalisa during the debate in Lok Sabha san
Author
First Published Aug 8, 2023, 5:24 PM IST

ನವದೆಹಲಿ (ಆ.8): ಮಣಿಪುರ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಲೋಕಸಭೆಯಲ್ಲಿ ಈ ವಿಷಯದ ಚರ್ಚೆ ಆರಂಭವಾಗಿದೆ. ವಿರೋಧ ಪಕ್ಷದವರ ಆರೋಪಗಳಿಗೆ ಆಡಳಿತ ಪಕ್ಷದ ಸಂಸದರೂ ಕೂಡ ತಿರುಗೇಟು ನೀಡುತ್ತಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಟೀಕಿಸುತ್ತಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಶ್ರೀಕಾಂತ್‌ ಶಿಂಧೆ ವಿವರಿಸುತ್ತಿದ್ದರು. ಶ್ರೀಕಾಂತ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಪುತ್ರ, 'ಉದ್ಧವ್‌ ಠಾಕ್ರೆ ಸರ್ಕಾರವಿದ್ದಾಗ ಹನುಮಾನ್‌ ಚಾಲೀಸಾ ಪಠಣ ಮಾಡಿದವರನ್ನು ಜೈಲಿಗೆ ಅಟ್ಟಲಾಗುತ್ತಿತ್ತು' ಎಂದು ಟೀಕೆ ಮಾಡುವ ವೇಳೆ, ವಿರೋಧ ಪಕ್ಷದ ಸಂಸದರೊಬ್ಬರು, ನಿಮಗೆ ಬರುತ್ತಾ ಮೊದಲು ನೋಡಿಕೊಳ್ಳಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಕಾಂತ್‌ ಶಿಂಧೆ, ನನಗೆ ಗೊತ್ತು ಅಲ್ಲ... ಇಡೀ ಹನುಮಾನ್‌ ಚಾಲೀಸಾ ಹಾಡ್ತೇನೆ ನೋಡಿ.. ಎಂದು ಹೇಳುವ ಬೆನ್ನಲ್ಲೇ, ಹನುಮಾನ್‌ ಚಾಲೀಸಾ ಪಠಿಸಲು ಆರಂಭಿಸುತ್ತಾರೆ. ಲೋಕಸಭೆಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಇಂದು ವಿಶ್ವದಲ್ಲಿಯೇ ಐದನೇ ದೊಡ್ಡ ಆರ್ಥಿಕತೆಯಾಗಿ ಭಾರತ ಬೆಳೆದಿದೆ. ಕಳೆದ 9 ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ದೇಶ ಅಭಿವೃದ್ಧಿ ಕಂಡಿದೆ. ನಾನು ಮಹಾರಾಷ್ಟ್ರದ ಸಂಸದ. ಮಹಾರಾಷ್ಟ್ರದ ಕೆಲವೊಂದು ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಇಂದು ಮಹಾರಾಷ್ಟ್ರದಲ್ಲಿ ಆಗಿರೋ ವಿಚಾರಗಳನ್ನು ನೀವ್ಯಾರು ಊಹಿಸಿಕೊಳ್ಳೋಕೇ ಸಾಧ್ಯವಿಲ್ಲ. ತಮ್ಮ ಸ್ವಹಿತಾಸಕ್ತಿಗಾಗಿ ಕಾಂಗ್ರೆಸ್‌ ಹಾಗೂ ಶಿವಸೇನೆ ಒಂದಾಗಿದ್ದವು. ಮಹಾ ವಿಕಾಸ್‌ ಅಘಾಡಿ ಸರ್ಕಾರ ಮಹಾರಾಷ್ಟ್ರದಲ್ಲಿ ಬಂದಾಗ, ಬುಲೆಟ್‌ ಟ್ರೇನ್‌, ಮೆಟ್ರೋ, ಸಮೃದ್ಧಿ ಎಕ್ಸ್‌ಪ್ರೆಸ್‌ ವೇ ಯಂಥ ಯೋಜನೆಗಳನ್ನು ನಿಲ್ಲಿಸಲಾಗಿತ್ತು. ಅರೇ ಅರಣ್ಯದಲ್ಲಿ ಮೆಟ್ರೋ ಕಾರ್‌ಶೆಡ್‌ಗೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಮೆಟ್ರೋದ ವೆಚ್ಚ 10 ಸಾವಿರ ಕೋಟಿ ಏರಿಕೆಯಾಯಿತು. ಉದ್ಧವ್‌ ಠಾಕ್ರೆಗೆ ಈ ಯೋಜನೆ ಬೇಕಾಗಿರಲಿಲ್ಲ. ಯಾಕೆಂದರೆ, ಅವರು ಮನೆ ಬಿಟ್ಟು ಹೊರಗೆ ಬರುತ್ತಿರಲಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉದ್ಧವ್‌ ಠಾಕ್ರೆ ಒಂದು ದಾಖಲೆ ಮಾಡಿದ್ದರು. ತಮ್ಮ ಎರಡೂವರೆ ವರ್ಷದ ಅವಧಿಯಲ್ಲಿ ಅವರು ಎರಡೂವರೆ ದಿನಗಳ ಕಾಲ ಮಾತ್ರವೇ ತಮ್ಮ ಸಚಿವಾಲಯಕ್ಕೆ ಹೋಗಿದ್ದರು ಎಂದು ಆರೋಪಿಸಿದ್ದಾರೆ.

"ಇಂದು ಕೆಲವರು ಇಲ್ಲಿ ಅಮಿತ್ ಶಾ ದೇಶದ್ರೋಹಿಗಳ ನಡುವೆ ಕುಳಿತಿದ್ದಾರೆ ಎಂದು ಹೇಳುತ್ತಿದ್ದಾರೆ, 2019 ರ ಚುನಾವಣೆಯಲ್ಲಿ ಯಾರ ಫೋಟೋ ಬಳಸಿ ಸ್ಪರ್ಧಿಸಿದ್ದೀರಿ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ, ಜನರು ಬಿಜೆಪಿ ಮತ್ತು ಶಿವಸೇನೆಗೆ ಮತ ಹಾಕಿದರು. ಬಾಳಾಸಾಹೇಬ್ ಠಾಕ್ರೆ ಅವರ ಅಭಿಪ್ರಾಯಗಳನ್ನು ಬದಿಗಿಟ್ಟು ಮಹಾವಿಕಾಸ್ ಅಘಾಡಿ ಸ್ಥಾಪಿಸಲಾಯಿತು.ಉದ್ಧವ್ ಠಾಕ್ರೆ ಬಾಳಾಸಾಹೇಬರ ಚಿಂತನೆಗಳಿಂದ ದೂರವಾದರು.ಚುನಾವಣೆಯು ಬಿಜೆಪಿಯೊಂದಿಗೆ ಹೋರಾಡಲಾಯಿತು ಮತ್ತು ಕುರ್ಚಿಗಾಗಿ ಬಾಳಾಸಾಹೇಬ್ ಅವರ ಆಲೋಚನೆಗಳನ್ನು ಉದ್ಧವ್ ಠಾಕ್ರೆ ತಳ್ಳಿ ಹಾಕಿದರು' ಎಂದು ದೂರಿದಿದ್ದಾರೆ.

ದಿನಕ್ಕೆ 10 ಗಂಟೆ ನಿದ್ರೆ ಮಾಡಿ, ಮದುವೆಯಾಗಿದ್ರೆ ಆರೋಗ್ಯಕರ ಸೆಕ್ಸ್‌ ಮಾಡಿ, ನಟ ಪ್ರಥಮ್‌ 'ಒಳ್ಳೆ' ಸಲಹೆ!

“ನಾವು ಬಾಳಾಸಾಹೇಬ್ ಠಾಕ್ರೆ ಅವರ ಆಲೋಚನೆಗಳನ್ನು ಪಾಲಿಸುತ್ತಿದ್ದೇವೆ. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಪಠಿಸಿದವರನ್ನು ಜೈಲಿಗೆ ಹಾಕಲಾಗಿತ್ತು. ಶ್ರೀಕಾಂತ್ ಶಿಂಧೆ ಈ ವಾಕ್ಯವನ್ನು ಹೇಳಿದಾಗ, ಪ್ರತಿಪಕ್ಷದ ಪೀಠಗಳಿಂದ ಧ್ವನಿ, ನೀವು ಹನುಮಾನ್ ಚಾಲೀಸಾ ಹೇಳಬಹುದೇ? ಈ ಬಗ್ಗೆ ಶ್ರೀಕಾಂತ್ ಶಿಂಧೆ ಅವರು ಹೌದು ನಾನು ಪೂರ್ಣ ಹನುಮಾನ್ ಚಾಲೀಸಾವನ್ನು ಹೇಳುತ್ತೇನೆ ಎಂದು ಹನುಮಾನ್‌ ಚಾಲೀಸಾ ಪಠಣ ಮಾಡಿದರು. ಈ ವೇಳೆ ಶಿವಸೇನೆ ಹಾಗೂ ಬಿಜೆಪಿಯ ಸಂಸದರು ಮೇಜು ಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ, ನಾವು ಬಾಳಾಸಾಹೇಬರ ವಿಚಾರಗಳನ್ನು ಪಾಲಿಸುವ ಶಿವಸೈನಿಕರು, ಅವರ ಹೆಸರಿನಲ್ಲಿ ನಾವು ಕೇವಲ ರಾಜಕಾರಣಿಗಳಲ್ಲ ಎಂದು ಶ್ರೀಕಾಂತ್ ಶಿಂಧೆ ಹೇಳಿದರು. 

No Trust Debate: ವಿಪಿ ಸಿಂಗ್‌, ಎಚ್‌ಡಿ ದೇವೇಗೌಡ, ವಾಜಪೇಯಿ 'ಅವಿಶ್ವಾಸ'ಕ್ಕೆ ಅಧಿಕಾರ ಕಳೆದುಕೊಂಡ ನಾಯಕರು!

Follow Us:
Download App:
  • android
  • ios