No Trust Debate: ವಿಪಿ ಸಿಂಗ್‌, ಎಚ್‌ಡಿ ದೇವೇಗೌಡ, ವಾಜಪೇಯಿ 'ಅವಿಶ್ವಾಸ'ಕ್ಕೆ ಅಧಿಕಾರ ಕಳೆದುಕೊಂಡ ನಾಯಕರು!

ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ಸಂಸತ್ತಿನಲ್ಲಿ ಆರಂಭವಾಗಿದೆ. ಈ ಹಂತದಲ್ಲಿ ಈವರೆಗೂ ಅವಿಶ್ವಾಸ ನಿರ್ಣಯದಿಂದ ಅಧಿಕಾರ ಕಳೆದುಕೊಂಡ ಮೂರು ಪ್ರಧಾನಿಗಳ ಮಾಹಿತಿಗಳನ್ನು ನೀಡಲಾಗಿದೆ.
 

no confidence motion Debate in parliament Session Look Back to VP Singh HD Deve Gowda and Atal Bihari Vajpayee san

ನವದೆಹಲಿ (ಆ.8): ಮಣಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿ ವಿಪಕ್ಷಗಳು ಸಲ್ಲಿಕೆ ಮಾಡಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ಮಂಗಳವಾರ ಸಂಸತ್ತಿನ ಕೆಳಮನೆ ಅಂದರೆ ಲೋಕಸಭೆಯಲ್ಲಿ ಆರಂಭವಾಯಿತು.  ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಚರ್ಚೆಯನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿ ಉಪನಾಮ ಕೇಸ್‌ನಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್‌ ಕೋರ್ಟ್‌ ನೀಡಿದ್ದ ಎರಡು ವರ್ಷದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆ ನೀಡಿದ ಬಳಿಕ ರಾಹುಲ್‌ ಗಾಂಧಿ ಅವರು ಸಂಸದ ಸ್ಥಾನವನ್ನು ಮರಳಿ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಅವರು ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲೆ ಟೀಕಾಪ್ರಹಾರ ಮಾಡಲಿದ್ದಾರೆ.  ಮಂಗಳವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭವಾಗಲಿದೆ. ಚರ್ಚೆಗೆ 12 ಗಂಟೆ ಸಮಯ ನಿಗದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಯಕ ಆಗಸ್ಟ್ 10 ರಂದು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ.

ವಿಪಕ್ಷಗಳ ಮೂತ್ರಿ ಐಎನ್‌ಡಿಐಎ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಳೆದ ವಾರ ಅಂಗೀಕರಿಸಿದ್ದರು. ಭಾರತದಲ್ಲಿನ ಅವಿಶ್ವಾಸ ನಿರ್ಣಯಗಳ ಇತಿಹಾಸ ನೋಡುವುದಾದರೆ, ಹೆಚ್ಚಿನ ಸಮಯದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಅವಿಶ್ವಾಸ ನಿರ್ಣಯವನ್ನು 'ವಿರೋಧದ ಅಸ್ತ್ರ' ಎಂದೇ ಕರೆಯಲಾಗುತ್ತದೆ. ಯಾಕೆಂದರೆ, ಇದೇ ನಿರ್ಣಯಕ್ಕೆ ಮೂರು ಸರ್ಕಾರಗಳು ಸೋಲು ಕಂಡಿದ್ದವು. ಅವಿಶ್ವಾಸ ನಿರ್ಣಯದ ಮೂಲ ಉದ್ದೇಶವು ಸರ್ಕಾರವು ಬಹುಮತವನ್ನು ಹೊಂದಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರೀಕ್ಷೆ ಮಾಡುವ ನಿರ್ಣಯ.

1990ರಲ್ಲಿ ರಾಮಮಂದಿರಕ್ಕೆ ಸೋತ ವಿಪಿ ಸಿಂಗ್‌: ವಿಪಿ ಸಿಂಗ್ ಎಂದೇ ಖ್ಯಾತರಾಗಿದ್ದ ಜನತಾ ದಳದ ರಾಜಕಾರಣಿ ವಿಶ್ವನಾಥ್‌ ಪ್ರತಾಪ್‌ ಸಿಂಗ್‌ 1989ರಿಂದ 1990ರವರೆಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. ಬಿಜೆಪಿಯಿಂದ ಬೆಂಬಲ ಹೊಂದಿದ್ದ ನ್ಯಾಷನಲ್‌ ಫ್ರಂಟ್‌ ಎನ್ನುವ ಸಮ್ಮಿಶ್ರ ಸರ್ಕಾರದ ನೇತೃತ್ವವನ್ನು ವಹಿಸಿಕೊಂಡಿದ್ದರು. ರಾಮಮಂದಿರ ವಿಚಾರದಲ್ಲಿ ಬಿಜೆಪಿ ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ಬಳಿಕ 1990ರ ನವೆಂಬರ್‌ 10 ರಂದು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು.  ಮಾಜಿ ಪ್ರಧಾನಿ ಅವರು ಲೋಕಸಭೆಯಲ್ಲಿ 142 ಮತಗಳನ್ನು ಪಡೆದುಕೊಂಡರೆ, ಅವರ ವಿರುದ್ಧ 346 ಮತಗಳು ಬಿದ್ದಿದ್ದವು. ಎಂಟು ಸಂಸದರು ಗೈರು ಹಾಜರಾಗಿದ್ದರು. ಅವರ ಸರ್ಕಾರ ಉಳಿಯಲು 261 ಮತಗಳ ಅಗತ್ಯವಿತ್ತು.ಬಿಜೆಪಿ ಬೆಂಬಲವನ್ನು ಹಿಂತೆಗೆದುಕೊಳ್ಳುವ ಮೊದಲು ಅವರು ಕೇವಲ 11 ತಿಂಗಳ ಕಾಲ ಆಡಳಿತ ನಡೆಸಿದರು.

1997ರಲ್ಲಿ ದೇವೇಗೌಡರಿಗೆ ಅಧಿಕಾರ ನೀಡದ ಕಾಂಗ್ರೆಸ್: ಜನತಾ ದಳದ ನಾಯಕ ಹಾಗೂ ಕರ್ನಾಟಕದ ಪ್ರಸಿದ್ಧ ರಾಜಕಾರಣಿ ಎಚ್‌ಡಿ ದೇವೇಗೌಡ 1996ರಲ್ಲಿ ಪ್ರಧಾನಿ ಆಗಿದದ್ದರು. ಕಾಂಗ್ರೆಸ್‌ ಬೆಂಬಲಿತ ಯುನೈಟೆಡ್‌ ಫ್ರಂಟ್‌ ಸಮ್ಮಿಶ್ರ ಸರ್ಕಾರಕ್ಕೆ ದೇವೇಗೌಡರು ನಾಯಕರಾಗಿದ್ದರು. ಸುಮಾರು 10 ತಿಂಗಳ ನಂತರ ಸೀತಾರಾಮ್ ಕೇಸರಿ ನೇತೃತ್ವದ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡರು. 11 ಏಪ್ರಿಲ್ 1997 ರಂದು ನಡೆದ ಅವಿಶ್ವಾಸ ನಿರ್ಣಯದಲ್ಲಿ ದೇವೇಗೌಡರ 13-ಪಕ್ಷಗಳ ಒಕ್ಕೂಟವು ಲೋಕಸಭೆಯ 545 ಸ್ಥಾನಗಳಲ್ಲಿ 158 ಮತಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.

ಇಂದಿನಿಂದ ಪಿಎಂ ಮೋದಿ ವಿರುದ್ಧ 3 ದಿನ ಅವಿಶ್ವಾಸ ನಿರ್ಣಯ ಚರ್ಚೆ, ಭಾರಿ ಮಾತಿನ ಸಮರ ಪಕ್ಕಾ

1999ರಲ್ಲಿ ಒಂದೇ ಮತದಿಂದ ಸೋತಿದ್ದ ವಾಜಪೇಯಿ: ರಾಷ್ಟ್ರ ರಾಜಕಾರಣದ ಮುತ್ಸದ್ದಿ ಹಾಗೂ ಬಿಜೆಪಿ ಅನುಭವಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ತಾವು ಪ್ರಧಾನಿಯಾಗಿದ್ದ ಅವಧಿಯಲ್ಲಿ ಎರಡು ಅವಿಶ್ವಾಸ ನಿರ್ಣಯಗಳನ್ನು ಎದುರಿಸಿದ್ದರು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಅವರ ಸರ್ಕಾರವು 17 ಏಪ್ರಿಲ್ 1999 ರಂದು ಒಂದೇ ಮತದಿಂದ ಅವಿಶ್ವಾಸ ಸೋತಿತು. ಸರ್ಕಾರದ ವಿರುದ್ಧ 270 ಮತಗಳು ಬಿದ್ದರೆ, ಸರ್ಕಾರದ ಪರ 269 ಮತಗಳು ಬಂದಿದ್ದವು. ಆದರೆ, ವಾಜಪೇಯಿ ತಮ್ಮ ಚಾಣಾಕ್ಷ ರಾಜಕಾರಣದಿಂದ ಕೆಲವೇ ತಿಂಗಳಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ಏರಿಸಿದರು. 2003 ರಲ್ಲಿ ಅವರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮತ್ತೊಂದು ಅವಿಶ್ವಾಸ ನಿರ್ಣಯವನ್ನು ತಂದಾಗ, ಅದು 312 ರಿಂದ 186 ಮತಗಳ ಬಹುಮತದಿಂದ ಜಯಿಸಿತು.

4 ತಿಂಗಳ ನಂತರ ಮತ್ತೆ ಸಂಸತ್‌ ಭವನಕ್ಕೆ ಕಾಲಿಟ್ಟ ರಾಹುಲ್‌ ಗಾಂಧಿ: ಅವಿಶ್ವಾಸ ನಿರ್ಣಯಕ್ಕೂ ಮುನ್ನ ಕಾಂಗ್ರೆಸ್‌ಗೆ ಮತ್ತಷ್ಟು ಬಲ!

Latest Videos
Follow Us:
Download App:
  • android
  • ios