ದಿನಕ್ಕೆ 10 ಗಂಟೆ ನಿದ್ರೆ ಮಾಡಿ, ಮದುವೆಯಾಗಿದ್ರೆ ಆರೋಗ್ಯಕರ ಸೆಕ್ಸ್‌ ಮಾಡಿ, ನಟ ಪ್ರಥಮ್‌ 'ಒಳ್ಳೆ' ಸಲಹೆ!

ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಸಾವಿನ ಬೆನ್ನಲ್ಲಿಯೇ ಜಿಮ್‌ಗೆ ಹೋಗೋದು, ಡಯಟ್‌ ಮಾಡೋದು ಕೂಡ ಅಪಾಯ ಎಂದನಿಸಿದೆ. ಇದರ ನಡುವೆ ಬಿಗ್‌ ಬಾಸ್‌ ವಿನ್ನರ್‌ ಒಳ್ಳೆ ಹುಡುಗ ಪ್ರಥಮ್‌, ಜಿಮ್‌-ಡಯಟ್‌ ಎನ್ನುವವರಿಗೆ ಸಲಹೆ ನೀಡಿ ಟ್ವೀಟ್‌ ಮಾಡಿದ್ದಾರೆ.
 

spandana vijay raghavendra heart attack Olle Huduga pratham advice to young generation san

ಬೆಂಗಳೂರು (ಆ.8): ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿನೊಂದಿಗೆ ಮತ್ತೊಮ್ಮೆ ಎಲ್ಲರಿಗೂ ಜಿಮ್‌-ಡಯಟ್‌ ಎನ್ನುವ ವಿಚಾರದ ಮೇಲೆ ಅನುಮಾನ ಬರಲು ಆರಂಭವಾಗಿದೆ. ಅದರಲ್ಲೂ ಕೋವಿಡ್‌ ಬಳಿಕ 40-50 ವರ್ಷದ ವ್ಯಕ್ತಿಗಳು ತೀರಾ ಸಲೀಸಾಗಿ ಹಾರ್ಟ್‌ ಅಟ್ಯಾಕ್‌, ಕಾರ್ಡಿಯಾಕ್‌ ಅರೆಸ್ಟ್‌ಗೆ ಬಲಿಯಾಗುತ್ತಿದ್ದಾರ. ಪುನೀತ್‌ ರಾಜ್‌ಕುಮಾರ್‌, ಚಿರಂಜೀವಿ ಸರ್ಜಾರ ಹಾರ್ಟ್‌ ಅಟ್ಯಾಕ್‌ಗಳನ್ನು ಎದುರಿಸಿದ್ದ ಚಂದನವನಕ್ಕೆ ಈಗ ಮತ್ತೊಂದು ಸಿಡಿಲಿನಂತೆ ಅಪ್ಪಳಿಸಿರುವುದು ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಸಾವು. ಬ್ಯಾಂಕಾಂಕ್‌ ಪ್ರವಾಸದಲ್ಲಿ ಸ್ಪಂದನಾ, ಹೋಟೆಲ್‌ನಲ್ಲಿ ಮಲಗಿದ್ದವರು ಹೃದಯಾಘಾತಕ್ಕೆ ಒಳಗಾಗಿ ಸಾವು ಕಂಡಿದ್ದರು. ಇದರ ಬೆನ್ನಲ್ಲಿಯೇ ಅವರು ತೂಕ ಇಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ 16 ಕೆಜಿ ಕಡಿಮೆಯಾಗಿದ್ದರು ಎನ್ನುವ ಮಾಹಿತಿಗಳು ಬಂದಿವೆ. ಕೆಲವರು ಆಕೆ, ಡಯಟ್‌ ಏನೂ ಮಾಡುತ್ತಿರಲಿಲ್ಲ ಎಂದು ಹೇಳಿದ್ದರೆ, ಇನ್ನೂ ಕೆಲವರು ಆಕೆ ಕೀಟೋ ಡಯಟ್‌ ಮಾಡುತ್ತಿದ್ದರು. ಇದರಿಂದಾಗಿಯೇ ಅವರು ತೂಕ ಕಡಿಮೆ ಮಾಡಿಕೊಂಡಿದ್ದರು ಎಂದಿದ್ದಾರೆ. ಈ ನಡುವೆ ಬಿಗ್‌ ಬಾಸ್‌ ಪ್ರಥಮ್‌, ಜಿಮ್‌-ಡಯಟ್‌ ಎನ್ನುವ ವ್ಯಕ್ತಿಗಳಿಗೆ ಸಲಹೆ ನೀಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

'ನಮಗೆ ಇಷ್ಟು ದುಃಖವಾಗಿದೆ. ಇನ್ನು ವಿಜಯಣ್ಣರಿಗೆ ಹೇಗಾಗಿರಬೇಡ? ಇವತ್ತಿಗೂ ನನಗೆ ಸ್ಫೂರ್ತಿದಾಯಕ ದಂಪತಿಗಳಲ್ಲಿ ಇವರೂ ಕೂಡ. ಮತ್ತೆ ಇನ್ಯಾವಗಲೂ ಈ ರೀತಿ ನೋಡೋಕಾಗಲ್ಲ ಅನ್ನೋದನ್ನ ನೆನೆಸಿಕೊಂಡರೆ ತೀವ್ರ ಬೇಸರವಾಗುತ್ತದೆ. ನಿಮ್ಮ ಆತ್ಮಕ್ಕೆ ಈಶ್ವರ ಮುಕ್ತಿ ನೀಡಲಿ..ನಮ್ಮ #ವಿಜಯ್_ರಾಗಣ್ಣ ದುಃಖ ತಡೆದುಕೊಳ್ಳೋ ಶಕ್ತಿ ಚಾಮುಂಡೇಶ್ವರಿ ಕರುಣಿಸಲಿ' ಎಂದು ವಿಜಯ್‌ ರಾಘವೇಂದ್ರ ದಂಪತಿಗಳ ಜೊತೆಗಿನ ಫೋಟೋವನ್ನು ಪ್ರಥಮ್‌ ಹಂಚಿಕೊಂಡಿದ್ದಾರೆ. 

ಅದರ ಬೆನ್ನಲ್ಲಿಯೇ ಸಲಹೆ ಎನ್ನುವ ರೀತಿಯಲ್ಲಿ ಪ್ರಥಮ್‌ ಇನ್ನೊಂದು ಪೋಸ್ಟ್‌ ಮಾಡಿದ್ದಾರೆ. 'ಬೇಗ ಸ್ಲಿಮ್‌ ಆಗ್ಬೇಕು ಅಂತ ಅತಿಯಾಗಿ ಜಿಮ್‌ ಹೋದ್ರೆ ಹೃದಯ ಢಂ ಅನ್ನಬಹುದು. ಚೆನ್ನಾಗಿ ವಾಕ್‌ ಮಾಡಿ. ವ್ಯಾಯಾಮ ಮಾಡಿ. ನಿದ್ರೆ ಸರಿಯಾಗಿ ಮಾಡಿ. ಸಾಧ್ಯವಾದಷ್ಟು(ಮನೆ ಊಟ ಸೇವಿಸಿ 10 ಗಂಟೆ ನಿದ್ರೆ ಮಾಡಿ; ಮನಸಿನ ಆರೋಗ್ಯಕ್ಕೆ ಧ್ಯಾನ ಮಾಡಿ. ಸುಮ್ನೆ ಅತಿಯಾದ ಡಯಟ್‌ ಬೇಡ. ಇದ್ಯಾವುದು ಮಾಡದೇ ನಿಮ್ಮಪ್ಪ ತಾತ ಚೆನ್ನಾಗಿದ್ರು ಅನ್ನೋದ ಮರೀಬೇಡಿ. ಒಳ್ಳೇದನ್ನ ಕೇಳಿ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಮತ್ತೊಂದು ಪೋಸ್ಟ್‌ ಹಂಚಿಕೊಂಡಿರುವ ಅವರು, 'ನಾನು ಜನರಿಗೆ ಒಳ್ಳೇದನ್ನೇ ಹೇಳೋದು. ಜಾಸ್ತಿ ನೀರು ಕುಡಿಯಿರಿ. ನಿದ್ರೆ ಮಾಡಿ. ಮದುವೆಯಾಗಿದ್ರೆ ಆರೋಗ್ಯಕರ ಸೆಕ್ಸ್‌ ಮಾಡಿ. ಎಣ್ಣೆ ಪದಾರ್ಥ ಹೆಚ್ಚಾಗಿ ತಿನ್ನಬೇಡಿ. ನಿದ್ರೆ ಮಾಡಿ. ಇದಿಷ್ಟು ಮಾಡಿದ್ರೆ ಆರೋಗ್ಯವಂತರಾಗಿ ಚೆನ್ನಾಗಿರ್ತೀರಾ. ಫಿಟ್‌ ಆಗಿ ಇರ್ಬೇಕು ಅಂತ ಪ್ರೋಟೀನ್ಸ್‌ ಅದು ಇದು ಯಾವುದು ಬೇಡ...ಸುಮ್ನೆ ಯಾರದೋ ಬಾಡಿ ನೋಡ್ಕೊಂಡು ನಾನು ಅಂಗೆ ಆಗೋಗ್ತೀನಿ ಅಂತ ನಿಮ್ಮ ಆಹಾರ ಪ್ರಕ್ರಿಯೆ ಬದಲಿಸಿಕೊಳ್ಳಬೇಡಿ...ನನ್ನ ಮಾತನ್ನ ಕೇಳಿ...; ಆರೋಗ್ಯವಂತರಾಗಿ ಬಾಳ್ತೀರಾ.. ಅತೀಯಾದ ಎನರ್ಜಿ ಡ್ರಿಂಕ್‌, ಪ್ರೋಟೀನ್ಸ್‌ ಅಂತ ಹೋದ್ರೆ ದೇವ್ರಾಣೆ ಕಷ್ಟ' ಎಂದು ಬರೆದುಕೊಂಡಿದ್ದಾರೆ.

spandana vijay raghavendra heart attack Olle Huduga pratham advice to young generation san

ಹೀರೋಯಿನ್‌ಗಳ ಜೊತೆ ಸಂಸಾರ ಮಾಡೋಕೆ ಆಗಲ್ಲ ನನ್ನವಳು ಹಳ್ಳಿ ಹುಡುಗಿ ಹೊಂದಿಕೊಳ್ಳುತ್ತಾರೆ: ಒಳ್ಳೆ ಹುಡುಗ ಪ್ರಥಮ್

'ಸಾವು ಮೊದಲೇ ಬರೆದ ಅಧ್ಯಾಯ.... ಹೇಗೆ, ಎಲ್ಲಿ, ಯಾವಾಗ ಯಾವೂದೂ ಯಾರಿಗೂ ತಿಳಿದಿಲ್ಲ...ಇಷ್ಟೊಂದು ಬುದ್ದಿ ಮಾತು ಹೇಳಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದೆಲ್ಲವೂ ಸರಿಯಾಗಿದೆ..ಬಟ್ ಯಾರಿಗೆ ಗೊತ್ತು....ಹೃದಯಾಘಾತದ ಬಗ್ಗೆ ಇಷ್ಟೆಲ್ಲಾ ವಿಷಯ ಜ್ಞಾನ ಇರುವ ನಿಮ್ಮನ್ನೂ, ಮತ್ತು ಏನೂ ತಿಳಿಯದ ಈ ಪಾಮರನನ್ನೂ ಆ ಭಗವಂತ ಮುಂದ್ಯಾವತ್ತೋ ಒಂದು ದಿನ ಈ ನೆಪದಲ್ಲೇ ತನ್ನತ್ತ ಕರೆದುಕೊಳ್ಳಬಹುದಲ್ವಾ?' ಎಂದು ಪ್ರಥಮ್‌ ಪೋಸ್ಟ್‌ಗೆ ಸುಧಿ ಆಚಾರ್ಯ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

ನನ್ನ ಹುಡ್ಗಿ ಮೊಬೈಲೇ ಬಳಸಲ್ಲ, ಮದ್ವೆ ಆದ್ಮೇಲೆ ಎಲ್ರಿಗೂ ಆಗೋತರ ನಂಗು ಮಗು ಆಗುತ್ತೆ: ಒಳ್ಳೆ ಹುಡುಗ ಪ್ರಥಮ್

ಇದಕ್ಕೆ ಮತ್ತಷ್ಟು ಕಿಡಿಯಾಗಿ ಪ್ರತಿಕ್ರಿಯೆ ಮಾಡಿರುವ ಪ್ರಥಮ್‌, 'ಹಾಗಂತ ಎಚ್ಚರಿಕೆ ತಗೆದುಕೊಳ್ಳೋದು ತಪ್ಪೇನಪ್ಪ?ಎಚ್ಚರಿಸೋದು ತಪ್ಪಾ? ಹುಟ್ಟಿದ ಮನುಷ್ಯ ಸಾಯ್ತಾನೆ ಅಂತ ಸ್ಮಶಾನದಲ್ಲಿ ಮನೆ ಕಟ್ಟೋ ಕಾಗುತ್ತಾ? ಹುಟ್ಟಿದಮೇಲೆ ಸಾಯ್ತೀವಿ ಅಂತ ಗೊತ್ತಿದ್ಮೇಲೆ ಡಾಕ್ಟರ್ ಹತ್ತಿರ ಹೋಗೋದ್ಯಾಕೆ? ಪ್ರಿಕಾಷನ್ಸ್‌ ಇಲ್ಲದೇ ಬದುಕು ತಮ್ಮ...ಎಲ್ಲವೂ ನಿಮ್ಮ ಹಣೆಬರಹ ಅಂತ...; ಒಳ್ಳೇದನ್ನ ಮಾಡಿ ಅಂತ ಹೇಳಿದ್ರೂ ಅತೀ ಬುದ್ಧಿವಂತಿಕೆ,ಅದರಲ್ಲೂ ಕೊಂಕ ಇಟ್ಕೊಂಡು ಬಂದ್ರೆ ನಾನ್ ಸುಮ್ನೆ ಇರ್ತೀನೇನಪ್ಪ?? ನಿಮ್ಮ‌ಮಾತಿನ ಪ್ರಕಾರ ನಿಮಗೆ ಬೇಕಿದ್ರೆ ಹೃದಯಾಘಾತ ಆಗ್ಲಿ, ಬೇರೆಯವರ ಹಣೆಬರಹದ ಚಿಣ್ತೆ ನಿಮಗ್ಯಾಕಪ್ಪ ಮಾತಿನ ವೀರ...ಒಳ್ಳೇದನ್ನಷ್ಟೇ ನೋಡು.ಅತೀ ಬುದ್ಧಿವಂತಿಕೆ,ವ್ಯಂಗ್ಯ,ಕೊಂಕ ಇದೆಲ್ಲಾ ಬೇಡ... ನಾನು ನಮ್ಮ ಜನರನ್ನ ಎಚ್ಚರಿಸಬೇಕು.ಎಚ್ಚರಿಸಿದ್ದೀನಿ. ಸೈಲೆಂಟ್‌ ಆಗಿ ಮಲ್ಕೋಳಪ್ಪ...' ಎಂದು ಪ್ರಥಮ್‌ ತಿವಿದಿದ್ದಾರೆ.

Latest Videos
Follow Us:
Download App:
  • android
  • ios