Asianet Suvarna News Asianet Suvarna News

ದುಬೈನಲ್ಲಿ ಪ್ರಭಾವಿ ಶಾಸಕ ಸಾವು, ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ ನಾಯಕ!

* ಮಹಾರಾಷ್ಟ್ರದ ಪ್ರಭಾವಿ ಶಾಸಕ ಹಠಾತ್ ನಿಧನ

* ದುಬೈಗೆ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ ನಾಯಕ

* ಮನೆಯವರು ಶಾಪಿಂಗ್‌ಗೆ ತೆರಳಿದ್ದಾಗ ಶಾಸಕರನ್ನು ಕಾಡಿದ ಅನಾರೋಗ್ಯ

Shiv Sena MLA From Mumbai Dies During Family Vacation In Dubai pod
Author
Bengaluru, First Published May 12, 2022, 3:49 PM IST | Last Updated May 12, 2022, 3:50 PM IST

ಮುಂಬೈ(ಮೇ.12): ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಕೆಟ್ಟ ಸುದ್ದಿಯೊಂದು ಸದ್ದು ಮಾಡಿದೆ. ಹೌದು ಮುಂಬೈನ ಅಂಧೇರಿ ಪೂರ್ವದ ಶಿವಸೇನೆ ಶಾಸಕ ರಮೇಶ್ ಲತ್ತೆ ನಿಧನರಾಗಿದ್ದಾರೆ. ಅವರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅವರ ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬುಧವಾರ ಶಾಸಕರು ದುಬೈಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಇಂದು ಸಂಜೆ ವೇಳೆಗೆ ಅವರ ಪಾರ್ಥಿವ ಶರೀರ ಮುಂಬೈಗೆ ಆಗಮಿಸಲಿದ್ದು, ನಾಳೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಮನೆಯವರು ಶಾಪಿಂಗ್‌ಗೆ ತೆರಳಿದ್ದಾಗ ಶಾಸಕರನ್ನು ಕಾಡಿದ ಅನಾರೋಗ್ಯ

ವಾಸ್ತವವಾಗಿ, ಶಿವಸೇನೆ ಶಾಸಕ ರಮೇಶ್ ಲತ್ತೆ ತಮ್ಮ ಕುಟುಂಬದ ಸ್ನೇಹಿತರನ್ನು ಭೇಟಿ ಮಾಡಲು ದುಬೈಗೆ ಹೋಗಿದ್ದರು. ಈ ನಡುವೆ ಬುಧವಾರ ಅವರ ಕುಟುಂಬದವರು ಶಾಪಿಂಗ್‌ಗೆ ತೆರಳಿದ್ದರು. ಆಗ ಅವರಿಗೆ ಹಠಾತ್ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ. ಶಾಸಕರ ಪಾರ್ಥಿವ ಶರೀರವನ್ನು ಮುಂಬೈಗೆ ತರಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಆರಂಭಿಸಿದೆ.

ಮೋದಿ ಹೋದ್ರೆ, ಗುಜರಾತ್ ಕೂಡ ಹೋಗುತ್ತೆ ಅಂತಾ ಆಡ್ವಾಣಿಗೆ ಹೇಳಿದ್ರು ಬಾಳಾಸಾಹೇಬ್ ಠಾಕ್ರೆ!

ಯಾರು ಶಾಸಕ ರಮೇಶ ಲತ್ತೆ?

2014 ರಲ್ಲಿ ಕಾಂಗ್ರೆಸ್‌ನ ಸುರೇಶ್ ಶೆಟ್ಟಿ ಅವರನ್ನು ಸೋಲಿಸಿದ ನಂತರ ರಮೇಶ್ ಲತ್ತೆ ಅವರು ಮೊದಲ ಬಾರಿಗೆ ಅಂಧೇರಿ ಪೂರ್ವದಿಂದ ಮಹಾರಾಷ್ಟ್ರ ವಿಧಾನಸಭೆಗೆ ತಲುಪಿದ್ದರು. ನಂತರ ಅವರು 2019 ರಲ್ಲಿ ಸ್ವತಂತ್ರ ಅಭ್ಯರ್ಥಿ ಎಂ ಪಟೇಲ್ ಅವರನ್ನು ಸೋಲಿಸಿದರು ಮತ್ತು ಎರಡನೇ ಬಾರಿಗೆ ಶಿವಸೇನೆ ಶಾಸಕರಾದರು. ಇದರೊಂದಿಗೆ ಮುಂಬೈ ಬಿಎಂಸಿಯಲ್ಲಿ ಹಲವು ಬಾರಿ ಕೌನ್ಸಿಲರ್ ಕೂಡ ಆಗಿದ್ದಾರೆ. ಅವರು ಶಿವಸೇನೆಯ  ಪ್ರಭಾವಿ ನಾಯಕರಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಅವರ ಸಾವಿನ ಸುದ್ದಿ ಬಿಎಂಸಿ ಚುನಾವಣೆಗೂ ಮುನ್ನ ಶಿವಸೇನೆಗೆ ದೊಡ್ಡ ಹೊಡೆತ ನೀಡಿದೆ.

Hanuman chalisa row ಹನುಮಾನ್ ಚಾಲೀಸಾ ವಿವಾದ, ರಾಣಾ ದಂಪತಿ ವಿರುದ್ಧ ದೇಶದ್ರೋಹ ಕೇಸು!

ಶಿವಸೇನೆಯಲ್ಲಿ ಶೋಕದ ಅಲೆ

ಶಾಸಕ ಲತ್ತೆ ಅವರ ಹಠಾತ್ ನಿಧನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಶಿವಸೇನೆಯಲ್ಲಿ ಶೋಕದ ಅಲೆ ಎದ್ದಿದೆ. ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ರಾಜ್ಯಸಭಾ ಸಂಸದೆ ಹಾಗೂ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, “ರಮೇಶ್ ಲತ್ತೆ ಅವರ ನಿಧನದ ಸುದ್ದಿ ಕೇಳಿ ದುಃಖ ಮತ್ತು ಆಘಾತವಾಗಿದೆ. ಅವರ ಪಟ್ಟುಬಿಡದ ಶಕ್ತಿ, ಕೋವಿಡ್ ಸಮಯದಲ್ಲಿ ಅವರ ಸಮರ್ಪಿತ ಕೆಲಸ ಮತ್ತು ಕ್ಷೇತ್ರದೊಂದಿಗಿನ ಅವರ ಒಡನಾಟ ಅಪಾರವಾಗಿತ್ತು. ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.

Latest Videos
Follow Us:
Download App:
  • android
  • ios