ಮೋದಿ ಹೋದ್ರೆ, ಗುಜರಾತ್ ಕೂಡ ಹೋಗುತ್ತೆ ಅಂತಾ ಆಡ್ವಾಣಿಗೆ ಹೇಳಿದ್ರು ಬಾಳಾಸಾಹೇಬ್ ಠಾಕ್ರೆ!

ಧ್ವನಿವರ್ಧಕ ವಿಚಾರ ಮತ್ತು ಹಿಂದುತ್ವದ ಬಗ್ಗೆ ಶಿವಸೇನೆಯ ನಿಲುವಿನ ಪ್ರಶ್ನೆಗಳ ನಡುವೆ, ಗೋದ್ರಾ ಗಲಭೆಯ ನಂತರ ಬಾಳ್ ಠಾಕ್ರೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹೇಗೆ ಸಮರ್ಥಿಸಿಕೊಂಡರು ಎಂಬುದರ ಕುರಿತು ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.
 

Uddhav Thackeray narrated the story of balasaheb thackeray and LK Advani regard Narendra Modi after Godhra san

ಮುಂಬೈ (ಮೇ.1): ಧ್ವನಿವರ್ಧಕ (Loudspeakers) ಹಾಗೂ ಹನುಮಾನ್ ಚಾಲಿಸಾ (Hanuman Chalisa) ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ (Maharashtra ) ಉದ್ಧವ್ ಠಾಕ್ರೆ (Uddhav Thackeray ) ಸರ್ಕಾರದ ವಿರುದ್ಧ ವಿರೋಧಪಕ್ಷಗಳು ನಿರಂತರವಾಗಿ ದಾಳಿ ನಡೆಸಿವೆ. ಆದರೆ, ಈ ಎರಡೂ ವಿಚಾರಗಳ ಕುರಿತಾಗಿ ಮಹಾರಾಷ್ಟ್ರ ಸರ್ಕಾರ ಆಕ್ರಮಣಕಾರಿ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಉದ್ಧವ್ ಠಾಕ್ರೆ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ (Raj Thackeray ) ಮೇಲೆ ವಾಗ್ದಾಳಿ ನಡೆಸಿದ್ದು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವಿಚಾರವಾಗಿ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋದ್ರಾ ಗಲಭೆಯ ವೇಳೆ "ಮೋದಿ ಹಟಾವೋ" ಅಭಿಯಾನ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಈ ವೇಳೆ ರಾಷ್ಟ್ರ ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಲಾಲ್ ಕೃಷ್ಣ ಆಡ್ವಾಣಿ ಸಮಾವೇಶದಲ್ಲಿ ಮಾತನಡುವ ಸಲುವಾಗಿ ಮುಂಬೈಗೆ ಬಂದಿದ್ದರು. ಆಗ, ಎಲ್ ಕೆ ಆಡ್ವಾಣಿ, ಗುಜರಾತ್ ನಲ್ಲಿ ಮೋದಿ ಅವರನ್ನು ಅಧಿಕಾರದಿಂದ ತೆಗೆಯುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದರು. ಆದರೆ, ಆಗ ನೇರ ಮಾತುಗಳಲ್ಲಿ ಉತ್ತರ ನೀಡಿದ ಶಿವಸೇನೆ ಮುಖ್ಯಸ್ಥೆ ಬಾಳಾಸಾಹೇಬ್ ಠಾಕ್ರೆ, "ಮೋದಿಯನ್ನು ಮುಟ್ಟೋಕೆ ಹೋಗ್ಬೇಡಿ, ಮೋದಿ ಹೋದ್ರೆ ಗುಜರಾತ್ ಕೂಡ ಹೋಗುತ್ತೆ (ಉನೇ ಮತ್ ಚುವೋ, ಮೋದಿ ಗಯಾ ತೋ ಗುಜರಾತ್ ಗಯಾ)" ಎಂದು ಎಚ್ಚರಿಸಿದ್ದರು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಅಂದು ಮೋದಿ ಮುಂದೊಂದು ದಿನ ಪ್ರಧಾನಿ ಅಭ್ಯರ್ಥಿಯಾಗಬಲ್ಲರು ಎನ್ನುವ ಯಾವ ಸೂಚನೆಗಳೂ ಇರಲಿಲ್ಲ. ಆದರೆ, ಅವರ ಹಿಂದುತ್ವದ ಸಲುವಾಗಿ ಬಾಳಾ ಠಾಕ್ರೆ ಬೆಂಬಲ ನೀಡಿದ್ದರು ಎಂದಿದ್ದಾರೆ.

ನಾನು ಈಗಲೂ ಮೋದಿಯವರೊಂದಿಗೆ ಸಂಪರ್ಕ ಹೊಂದಿದ್ದೇನೆ. ಹಾಗೆಂದ ಮಾತ್ರಕ್ಕೆ ನಮ್ಮ ನಡುವೆ ಮೈತ್ರಿ ಇರುತ್ತದೆ ಎಂದರ್ಥವಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಸಯುವ ವಿಚಾರದಲ್ಲಿ ಹಾಗೂ ಹನುಮಾನ್ ಚಾಲೀಸಾ ಕುರಿತಾದ ಗದ್ದಲದ ವಿಚಾರದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಶಿವಸೇನೆಯ ಹಿಂದುತ್ವದ ನಿಲುವಿನ ಕುರಿತಾಗಿಯೇ ಪ್ರಶ್ನೆ ಮಾಡಿತ್ತು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳನ್ನು ತನ್ನ ಇಷ್ಟಕ್ಕೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ಪಶ್ಚಿಮ ಬಂಗಾಳ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಈ ಸಂಸ್ಥೆಗಳು ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Maharashtra Politics: ಶಿವಸೇನೆ- ಬಿಜೆಪಿ ಹಿಂದುತ್ವ ಜಟಾಪಟಿ

ಸಿಬಿಐ ಹಾಗೂ ಇಡಿ ರಾಜ್ಯ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನದಲ್ಲಿದೆ. ದೇಶದ ವಿರೋಧಿಗಳ ವಿರುದ್ಧ ಈ ಸಂಸ್ಥೆಗಳು ಹೋರಾಟ ನಡೆಸಬೇಕು. ಆದರೆ, ಅದಾಗುತ್ತಿಲ್ಲ. ಈ ಏಳು ವರ್ಷಗಳಲ್ಲಿ ಚೀನಾ ವಿರುದ್ಧ ಧೈರ್ಯವಾಗಿ ನಾವು ಒಂದೇ ಒಂದು ಮಾತು ಆಡಿಲ್ಲ.ಚೀನಾ ನಮ್ಮ ನೆಲವನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಸರ್ಕಾರ ಏನೂ ಹೇಳುತ್ತಿಲ್ಲ. ಕೇವಲ ಪಾಕಿಸ್ತಾನದ ಮೇಲೆ ಮಾತ್ರವೇ ನಮ್ಮ ಪ್ರತಾಪ ತೋರುತ್ತಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Election Result 2022 ಮಾಯಾವತಿ, ಓವೈಸಿಗೆ ಪದ್ಮಭೂಷಣ, ಭಾರತ ರತ್ನ ನೀಡಿ ಎಂದ ಶಿವಸೇನೆ!

ಉತ್ತರ ಪ್ರದೇಶದಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕಿದ ಕ್ರಮದ ಬಗ್ಗೆ ಮಾತನಾಡಿದ ಉದ್ಧವ್ ಠಾಕ್ರೆ, ಉತ್ತರ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ದಾರೆ ಎನ್ನುವುದು ತಿಳಿದಿದೆ. ಕೋವಿಡ್ ಸಮಯದಲ್ಲಿ ಶವಗಳು ಗಂಗಾ ನದಿಯಲ್ಲಿ ತೇಲುತ್ತಿದ್ದವು. ಉತ್ತರ ಪ್ರದೇಶದಲ್ಲಿ ಕೋವಿಡ್ ನಿಂದಾಗಿ ಎಷ್ಟು ಜನ ಸತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಈಗಲೂ ಸರ್ಕಾರದಲ್ಲಿಲ್ಲ. ಕೋವಿಡ್ ಪರಿಸ್ಥಿತಿ ನಿಭಾಯಿಸುವ ಬದಲು ಸರ್ಕಾರ ಧ್ವನಿವರ್ಧಕಗಳನ್ನು ತೆಗೆಯಲು ಮುಂದಾಗಿದೆ ಎಂದು ಟೀಕಿಸಿದ್ದಾರೆ.

Latest Videos
Follow Us:
Download App:
  • android
  • ios