* ಹಿಂದಿ ಕಿರುತೆರೆಯ ಜನಪ್ರಿಯ ನಟ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ* ತೀವ್ರ ಹೃದಯಾಘಾತದಿಂದ ಮೃತಪಟ್ಟ ನಟ* Bigg Boss ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ

ಮುಂಬೈ(ಸೆ.02): ಹಿಂದಿ ಕಿರುತೆರೆಯ ಜನಪ್ರಿಯ ನಟ, ಬಿಗ್‌ ಬಾಸ್‌ 13ನೇ ಆವೃತ್ತಿಯ ವಿಜೇತ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. 

40 ವರ್ಷದ ಸಿದ್ಧಾರ್ಥ್‌ ಶುಕ್ಲಾರವರಿಗೆ ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಬಳಿಕ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. ಇವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

'ಹುಡುಗಿ ಕತ್ತಲೆ ಕೋಣೆಯಲ್ಲಿ ನಿಮ್ಮ ಜತೆ ಇದ್ದರೂ ಆಕೆಗೆ ಸೇಫ್ ಎನ್ನಿಸಬೇಕು'

Scroll to load tweet…

ಹಿಂದಿಯ ಜನಪ್ರಿಯ ಧಾರಾವಾಹಿ ‘ಬಾಲಿಕಾ ವಧು’ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿದ್ದ ಸಿದ್ಧಾರ್ಥ್‌ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇತ್ತೀಚೆಗಷ್ಟೇ ನಡೆದಿದ್ದ ರಿಯಾಲಿಟಿ ಶೋಗಳಾದ ಬಿಗ್‌ ಬಾಸ್‌ ಒಟಿಟಿ ಹಾಗೂ ಡಾನ್ಸ್‌ ದಿವಾನೆ 3ರಲ್ಲೂ ಕಾಣಿಸಿಕೊಂಡಿದ್ದರು. ಹೀಗಿರುವಾಗ ಸಿದ್ಧಾರ್ಥ್‌ ಶುಕ್ಲಾರವರ ಅಕಾಲಿಕ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

ಸೈಲೆಂಟ್‌ ಹುಡುಗ ಗಿಣಿರಾಮದ ರಿತ್ವಿಕ್‌ಗೆ ಇದೆಂಥಾ ಹವ್ಯಾಸ!

1980ರ ಡಿಸೆಂಬರ್ 12ರಂದು ಮುಂಬೈನಲ್ಲಿ ಜನಿಸಿದ್ದ ಸಿದ್ಧಾರ್ಥ್ ಶುಕ್ಲಾರ ತಂದೆ, ತಾಯಿ ಮೂಲತಂ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು. ಸಿದ್ಧಾರ್ಥ್‌ ಶುಕ್ಲಾ ಮಾಡೆಲ್ ಆಗಿ ವೃತ್ತಿ ಆರಂಭಿಸಿದರು. 2004 ರಲ್ಲಿ, ಅವರು ಧಾರವಾಹಿ ಮೂಲಕ ತಮ್ಮ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಬಾಲಿಕಾ ವಧು ಸೀರಿಯಲ್ ಮೂಲಕ ವೀಕ್ಷಕರ ಹೃದಯ ಗೆದ್ದಿದ್ದ ಶುಕ್ಲಾ, 2008 ರಲ್ಲಿ, 'ಬಾಬುಲ್ ಕಾ ಆಂಗನ್ ಛೋಟೆ ನಾ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. 

ಬಾಲಿವುಡ್‌ಗೂ ಎಂಟ್ರಿ 

ಕಿರುತೆರೆ ಬಳಿಕ ಸಿದ್ಧಾರ್ಥ್ ಶುಕ್ಲಾ ಬಾಲಿವುಡ್‌ನಲ್ಲಿ ಕೆಲಸ ಆರಂಭಿಸಿದ್ದರು. ಅವರು 2014 ರಲ್ಲಿ ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅದೇ ವರ್ಷದಲ್ಲಿ, ಬ್ರೋಕನ್ ಬಟ್ ಬ್ಯೂಟಿಫುಲ್ ಎಂಬ ಅವರ ವೆಬ್ ಸರಣಿ ಕೂಡಾ ರಿಲೀಸ್ ಆಗಿತ್ತು.