Asianet Suvarna News Asianet Suvarna News

ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ಥ್ಯಾಂಕ್ಸ್ ಎಂದ ಸ್ವರ ಭಾಸ್ಕರ್!

ಪ್ರವಾಸಿ ಮೊಹಮದ್ ಪೈಗಂಬರ್ ಕುರಿತಾಗಿ ಮಾತನಾಡಿದ್ದಕ್ಕೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಹಾಗೂ ಭಾರತ ಸರ್ಕಾರದ ವಿರುದ್ಧ ಗಲ್ಫ್ ರಾಷ್ಟ್ರಗಳು ಕಿಡಿಕಾರಿವೆ. ಇದರ ಬೆನ್ನಲ್ಲಿಯೇ ಮಾತನಾಡಿರುವ ನಟಿ ಸ್ವರ ಭಾಸ್ಕರ್, ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ ಗಲ್ಫ್ ರಾಷ್ಟ್ರಕ್ಕೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ.

we must thank the Gulf countries for reminding our government its dharma says Swara Bhasker san
Author
Bengaluru, First Published Jun 7, 2022, 10:31 PM IST

ಬೆಂಗಳೂರು (ಜೂನ್ 7): ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ (Nupur Sharma) ಪ್ರವಾದಿ ಮೊಹಮದ್ ಪೈಗಂಬರ್(Prophet Muhammad)ಕುರಿತಾಗಿ ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ವಿವಾದಕ್ಕೆ(international controversy) ಕಾರಣವಾದ ಬಗ್ಗೆ ಹಾಗೂ ಅದಕ್ಕೆ ಸರ್ಕಾರದ ಕ್ರಮದ ಬಗ್ಗೆ ಮಾತನಾಡಿರುವ ನಟಿ ಸ್ವರ ಭಾಸ್ಕರ್ (Swara Bhasker ), "ನಮ್ಮ ಸರ್ಕಾರದ ಧರ್ಮವನ್ನು ನೆನಪು ಮಾಡಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು' ಎಂದಿದ್ದಾರೆ.

ಭಾರತದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿ (BJP) ನೂಪುರ್ ಶರ್ಮ ಅವರನ್ನು ಆರು ವರ್ಷಗಳ ಕಾಲ ಅಮಾನತು ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವರ ಭಾಸ್ಕರ್, ನಮ್ಮ ಸರ್ಕಾರದ ಧರ್ಮವನ್ನು ಗಲ್ಫ್ ರಾಷ್ಟ್ರಗಳು ನೆನಪಿಸಿವೆ. ಅದಕ್ಕಾಗಿ ಆ ರಾಷ್ಟ್ರಗಳಿಗೆ ನಾವು ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ. ಬಿಜೆಪಿ ದ್ವೇಷ ಭಾಷಣವನ್ನೇ ಚುನಾವಣೆಯನ್ನು ಗೆಲ್ಲುವ ಟೂಲ್ ಆಗಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

ನಾನು ಯಾವುದೇ ರಾಜಕೀಯ ವಿಶ್ಲೇಷಕಿಯಾಗಿ ಮಾತನಾಡೋದಿಲ್ಲ. ದೇಶದ ಒಬ್ಬ ಮತದಾರಳಾಗಿ, ದೇಶದ ಪ್ರಜೆಯಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ. ಇಂದು ನಾವು ಯಾವ ಸ್ಥಿತಿಯಲ್ಲಿದ್ದೇವೆಂದರೆ, ದ್ವೇಷ ಹಾಗೂ ದ್ವೇಷ ಭಾಷಣ ನಮ್ಮ ನಡುವೆ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ  ದೇಶದಲ್ಲಿ ಆಡಳಿತದಲ್ಲಿರುವ ಪಕ್ಷ ಪ್ರಮುಖವಾಗಿ ಕಾರಣ. ಬಿಜೆಪಿ ತನ್ನ ಚುನಾವಣೆಗಳನ್ನು ಗೆಲ್ಲಲು ದ್ವೇಷ ಭಾಷಣವನ್ನು ಟೂಲ್ ಆಗಿ ಮಾಡಿಕೊಂಡಿದೆ. ಟಿಆರ್ ಪಿ ಹಿಂದೆ ಬಿದ್ದಿರುವ ಮಾಧ್ಯಮಗಳೂ ಕೂಡ ಇಂಥ ದ್ವೇಷ ಭಾಷಣಕ್ಕೆ ದೊಡ್ಡ ಮಟ್ಟದಲ್ಲಿ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿದೆ ಎಂದು ಸ್ವರ ಭಾಸ್ಕರ್ ಹೇಳಿದ್ದಾರೆ.

ಟಿವಿ ಮಾಧ್ಯಮಗಳ ಪ್ಯಾನೆಲ್ ಗಳಿಗೆ ಬರುವ ವಕ್ತಾರು ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಬಹುಶಃ ಅವರಿಗೆ ಚಾನೆಲ್ ಗಳು ಹಣವನ್ನೂ ನೀಡುತ್ತಿರಬಹುದು ಅಥವಾ ಹೆಸರು ಗಳಿಸುವ ಕಾರಣಕ್ಕಾಗಿ ವಕ್ತಾರರೇ  ಟಿವಿಗಳಿಗೆ ಬರುತ್ತಿರಬಹುದು. ಇಂಥ ದ್ವೇಷ ಭಾಷಣವನ್ನು ಟಿವಿಗಳ ಮೂಲಕ ನಿರಂತರವಾಗಿ ಮುನ್ನಡೆಸಿದ್ದಾರೆ. ಸಂವಿಧಾನವನ್ನು ನಮಗೆ ಯಾವ ಹಕ್ಕುಗಳನ್ನು ನೀಡಿದೆ ಎನ್ನುವುದರ ಬಗ್ಗೆಯೂ ಅರಿವಿಲ್ಲ. ನಮ್ಮ ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆ ಕೂಡ ಇದನ್ನು ನೋಡುತ್ತಾ ಸುಮ್ಮನೆ ಕುಳಿತಿದೆ. ಇದಕ್ಕೆಲ್ಲಾ ಮುಖ್ಯವಾಗಿ ಕಾರಣವಾಗಿರುವುದು ಸರ್ಕಾರ ಎಂದು ಸ್ವರ ಭಾಸ್ಕರ್ ಹೇಳಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯದ ಕುರಿತು ಭಾರತಕ್ಕೆ ಪಾಠ ಮಾಡಿದ ತಾಲಿಬಾನ್!

ದ್ವೇಷ ಭಾಷಣದ ಮೂಲಕ ಚುನಾವಣೆಗಳನ್ನು ಗೆಲ್ಲಬಹುದು ಎನ್ನುವ ಉಪಾಯವನನು ಬಿಜೆಪಿಗೆ ನೀಡಿದವರು ಯಾರು? ನಮ್ಮ ಮತದಾರರೇ ತಾನೇ. ಇದನ್ನು ನಾವು ತಿರಸ್ಕರಿಸಿದರೆ ಖಂಡಿತವಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು. ಭಾರತ ಇಂದು ವಿಶ್ವದ ಮುಂದೆ ತಲೆತಗ್ಗಿಸಿರುವ ಪರಿಸ್ಥಿತಿಗೆ ಒಂದಲ್ಲ ಒಂದು ರೂಪದಲ್ಲಿ ಕಾಣಿಕೆ ನೀಡಿರುವವರು ನಾವೇ. ದ್ವೇಷ ಭಾಷಣದಿಂದ ದ್ವಿಪಕ್ಷೀಯ ಸಂಬಂಧಗಳೂ ಹದಗೆಡಬಹುದು ಎನ್ನುವುದು ನಮಗೀಗ ಅರ್ಥವಾಗಿದೆ. ಇನ್ನು ಸಾಮಾಜಿಕ ಮಾಧ್ಯಮಗಳು ಕೂಡ ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಫೇಸ್ ಬುಕ್ ನ ಪಾತ್ರ ಇಲ್ಲಿ ದೊಡ್ಡದಾಗಿದೆ. ದೆಹಲಿ ಗಲಭೆಯಲ್ಲಿ ಫೇಸ್ ಬುಕ್ ನ ಪಾತ್ರದ ಬಗ್ಗೆ ಈಗಲೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಸ್ವರ ಭಾಸ್ಕರ್ ಹೇಳಿದ್ದಾರೆ.

Boycott Qatar Airways ಸೇಡಿಗೆ ಸೇಡು, ಭಾರತದಲ್ಲಿ ಖತಾರ್ ಏರ್‌ವೇಸ್ ಬಹಿಷ್ಕರಿಸಲು ಕರೆ!

ಇನ್ನೊಂದೆಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತೆ ಮಾಡಿದ ನೂಪುರ್ ಶರ್ಮ ಅವರನ್ನು ಬಂಧನ ಮಾಡುವಂತೆ ವಿರೋಧ ಪಕ್ಷಗಳು ಒತ್ತಾಯ ಮಾಡಿದ್ದರೆ, ಪೊಲೀಸರು ಕೂಡ ನೂಪುರ್ ಶರ್ಮ ಅವರ ಹೇಳಿಕೆಗಳ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ.  ಈವರೆಗೂ ಒಟ್ಟು 15 ಗಲ್ಫ್ ರಾಷ್ಟ್ರಗಳು ನೂಪುರ್ ಶರ್ಮ ಅವರ ಹೇಳಿಕೆಯನ್ನು ವಿರೋಧಿಸಿವೆ.

Follow Us:
Download App:
  • android
  • ios