ಒಟಿಟಿ ಸಬ್‌ಸಕ್ರಿಪ್ಷನ್ ಪಡೆದುಕೊಂಡವರು ಅದರ ಪಾಸ್‌ವರ್ಡ್‌ಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್ ಅನ್ನು ಹಂಚುವುದನ್ನು ಬ್ರಿಟನ್‌ನಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತಿದೆ.
ಲಂಡನ್: ಒಟಿಟಿ ಸಬ್‌ಸಕ್ರಿಪ್ಷನ್ ಪಡೆದುಕೊಂಡವರು ಅದರ ಪಾಸ್‌ವರ್ಡ್‌ಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್ ಅನ್ನು ಹಂಚುವುದನ್ನು ಬ್ರಿಟನ್‌ನಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಪಾಸ್‌ವರ್ಡ್ ಹಂಚಿಕೆಗಳನ್ನು ಕಾಪಿರೈಟ್ ಉಲ್ಲಂಘನೆ ಎಂದು ಬ್ರಿಟನ್‌ನ ಇಂಟೆಲೆಕ್ಚುವಲ್ ಪ್ರಾಪರ್ಟಿ ಆಫೀಸ್ ಹೇಳಿದೆ. ಸಬ್‌ಸ್ಕ್ರಿಪ್ಷನ್‌ಗೆ ನೀಡಬೇಕಾಗಿರುವ ಹಣವನ್ನು ಪಾವತಿ ಮಾಡದೇ ಯಾವುದೇ ಸಿನಿಮಾ, ವಿಡಿಯೋ, ಕ್ರೀಡೆಗಳನ್ನು ಸ್ಟ್ರೀಮ್ ಮಾಡುವುದು ಕಾಪಿರೈಟ್‌ನ ಉಲ್ಲಂಘನೆ. ಅದೇ ರೀತಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್‌ನ್ನು ಹಂಚಿಕೊಳ್ಳುವುದನ್ನು ಸಹ ಕಾಪಿರೈಟ್ ಅಡಿಯಲ್ಲಿ ಸೇರಿಸಲಾಗಿದೆ. ಹಾಗಾಗಿ ಇದರ ಉಲ್ಲಂಘನೆ ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಐಪಿಒ ಹೇಳಿದೆ.
Netflix ಬಳಕೆದಾರರಿಗೆ ಹೊಸ ವರ್ಷದ ಶಾಕ್, ಪಾಸ್‌ವರ್ಡ್ ಶೇರಿಂಗ್ ಫೀಚರ್ ಅಂತ್ಯ!
