ಹೊಸ ವರ್ಷ ಬರಮಾಡಿಕೊಳ್ಳಲು ಕೆಲ ದಿನಗಳು ಮಾತ್ರ. ಆದರೆ Netflix ಬಳಕೆದಾರರಿಗೆ ಶಾಕ್ ನೀಡಿದೆ. ಇಷ್ಟು ದಿನ ಇದ್ದ ಪಾಸ್‌ವರ್ಡ್ ಶೇರಿಂಗ್ ಫೀಚರ್ ಅಂತ್ಯಗೊಳಿಸುತ್ತಿದೆ.

ನವದೆಹಲಿ(ಡಿ.22):  ಸ್ಟ್ರೀಮಿಂಗ್ ದಿಗ್ಗಜ ನೆಟ್‌ಫ್ಲಿಕ್ಸ್ ಹೊಸ ವರ್ಷಕ್ಕೆ ಹೊಸ ನಿಯಮ ಜಾರಿಗೆ ತರುತ್ತಿದೆ. ಇಷ್ಟು ದಿನ ಬಳಕೆದಾರರಿಗೆ ಹಲವು ಉಚಿತ ಆಫರ್, ಸೌಲಭ್ಯ ನೀಡಿದ್ದ ನೆಟ್‌ಫ್ಲಿಕ್ಸ್ ಇದೀಗ ಒಂದೊಂದೆ ಫೀಚರ್ ಕಟ್ ಮಾಡುತ್ತಿದೆ. ಹೊಸ ವರ್ಷದಿಂದ ಅಂದರೆ ಜನವರಿ 1 ರಿಂದ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಅವಕಾಶ ಲಭ್ಯವಿಲ್ಲ. ಡಿಸೆಂಬರ್ 31ಕ್ಕೆ ಈ ಫೀಚರ್ ಅಂತ್ಯಗೊಳ್ಳುತ್ತಿದೆ. ಪಾಸ್‌ವರ್ಡ್ ಶೇರಿಂಗ್ ಫೀಚರ್‌ನಿಂದ 2021-22ರ ಸಾಲಿನಲ್ಲಿ ನೆಟ್‌ಫ್ಲಿಕ್ಸ್ ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ. ಕಳೆದೆರಡು ವರ್ಷದಿಂದ ನೆಟ್‌ಪ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಫೀಚರ್ ಅಂತ್ಯಗೊಳಿಸುವ ಕುರಿತು ಕಂಪನಿ ಹಲವು ಬಾರಿ ಚರ್ಚೆ ನಡೆಸಿದೆ. ಇದೀಗ ಅಂತಿಮವಾಗಿ 2023ರ ಜನವರಿಯಿಂದ ಪಾಸ್‌ವರ್ಡ್ ಶೇರಿಂಗ್ ಆಯ್ಕೆಯನ್ನು ಅಂತ್ಯಗೊಳಿಸುತ್ತಿದೆ.

ಪಾಸ್‌ವರ್ಡ್ ಶೇರಿಂಗ್ ಫೀಚರ್‌ನಿಂದ 2020ರಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯಲ್ಲಿ ಏರಿಕೆಯಾಗಿತ್ತು. ಹೀಗಾಗಿ ಈ ಆಯ್ಕೆಯನ್ನು ದಿಢೀರ್ ಅಂತ್ಯಗೊಳಿಸಲು Netflix ಹಿಂದೇಟು ಹಾಕಿತ್ತು. ಆದರೆ 2022ರಲ್ಲಿ Netflix ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ. ಇಷ್ಟೇ ಅಲ್ಲ ಇದರಿಂದ ಚಂದಾದಾರಿಕೆಯೂ ಇಳಿಕೆಯಾಗಿದೆ. ಹೀಗಾಗಿ ಪಾಸ್‌ವರ್ಡ್ ಶೇರಿಂಗ್ ಫೀಚರ್ ಈ ತಿಂಗಳು ಮಾತ್ರ ಲಭ್ಯವಿದೆ. ಅಂದರೆ ಇನ್ನು ಕೆಲ ದಿನ ಮಾತ್ರ ಲಭ್ಯವಿದೆ.

ಸಾರ್ವಕಾಲಿಕ ಅತಿ ಹೆಚ್ಚು IMDb ರೇಟಿಂಗ್ ಪಡೆದ ಭಾರತೀಯ ಚಿತ್ರಗಳ ಮೊದಲ ಸ್ಥಾನದಲ್ಲಿ ಕಾಂತಾರ

ಹೊಸ ವರ್ಷದಿಂದ Netflix ಬಳಕೆದಾರರು ತಮ್ಮ ಖಾತೆಯನ್ನು ಇತರರೊಂದಿಗೆ ಹಂಚಲು ಬಯಸಿದರೆ ಅವರೂ ಕೂಡ ಅದೇ ಮೊತ್ತವನ್ನು ಪಾವತಿಸಬೇಕು. 2022ರ ಅಕ್ಟೋಬರ್ ತಿಂಗಳಲ್ಲೇ ಪಾಸ್‌ವರ್ಡ್ ಶೇರಿಂಗ್ ಫೀಚರ್ಸ್ ನಿಯಂತ್ರಿಸವು ಫೀಚರ್ಸ್ ಪರಿಚಯಿಸಿತ್ತು. ಇದೀಗ 2023ರಿಂದ ವಿಶ್ವದೆಲ್ಲಡೆ ಜಾರಿಯಾಗುತ್ತಿದೆ.

ಡಿಸೆಂಬರ್ 30ಕ್ಕೆ Netflix ನೈಕ್ ಟ್ರೈನಿಂಗ್ ಕ್ಲಬ್ ಲಾಂಚ್ ಮಾಡುತ್ತಿದೆ. ಈ ಮೂಲಕ Netflix ಬಳಕೆದಾರರು ಫಿಟ್ನೆಸ್ ಸ್ಟ್ರೀಮಿಂಗ್ ಅವಕಾಶ ಪಡೆಯಲಿದ್ದಾರೆ ಎಂದಿದೆ.

ನೆಟ್‌ಫ್ಲಿಕ್ಸ್‌ಗೆ 2 ಲಕ್ಷ ಚಂದಾರರ ನಷ್ಟ: 10 ವರ್ಷಗಳಲ್ಲಿ ಇದೇ ಮೊದಲು
ಜಗತ್ತಿನ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಒಟಿಟಿ ವೇದಿಕೆಯಾದ ನೆಟ್‌ಫ್ಲಿಕ್ಸ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಬರೋಬ್ಬರಿ 2 ಲಕ್ಷ ಮಂದಿ ಚಂದಾದಾರನ್ನು ಕಳೆದುಕೊಂಡಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ಚಂದಾದರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಎರಡನೇ ತ್ರೈಮಾಸಿಕದ ವೇಳೆಗೆ 20 ಲಕ್ಷ ಚಂದಾದಾರನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ನೆಟ್‌ಫ್ಲಿಕ್ಸ್‌ನ ಚಂದಾಚಾರರು ಇಳಿಕೆಯಾಗಿದ್ದು ಇದೇ ಮೊದಲು.

ನೆಟ್‌ಫ್ಲಿಕ್ಸ್‌‌ನಲ್ಲಿ ಬರ್ತಿದೆ ಹೊಸ ರಿಯಾಲಿಟಿ ಶೋ; ಗೆದ್ದವರಿಗೆ ಸಿಕ್ತಿದೆ ಬರೋಬ್ಬರಿ 35 ಕೋಟಿ ರೂಪಾಯಿ

ಜಾಗತಿಕವಾಗಿ 22.2 ಕೋಟಿ ಚಂದಾದಾರನ್ನು ಹೊಂದಿರುವ ನೆಟ್‌ಫ್ಲಿಕ್ಸ್‌ ಅಮೆರಿಕ ಮತ್ತು ಕೆನಡಾದಲ್ಲಿ ಬರೋಬ್ಬರಿ 60,000 ಚಂದಾದಾರನ್ನು ಕಳೆದುಕೊಂಡಿದೆ. ಭಾರತ ಮತ್ತು ಇತರ ಭಾಗಗಳಲ್ಲಿ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಉಕ್ರೇನ್‌-ರಷ್ಯಾ ಯುದ್ಧದ ಕಾರಣದಿಂದ ಉಳಿದ 70 ಲಕ್ಷ ಚಂದಾರಾದರು ನೆಟ್‌ಫ್ಲಿಕ್ಸ್‌ ತ್ಯಜಿಸಿರಬಹುದು ಎಂದು ಕಂಪನಿ ತಿಳಿಸಿದೆ. ಸಬ್‌ಸ್ಕೆ್ರೖಬ​ರ್‍ಸ್ ಕಳೆದುಕೊಳ್ಳಲು ಶುಲ್ಕ ಹೆಚ್ಚಳ ಮಾಡಿದ್ದು ಮತ್ತು ಪಾಸ್‌ವರ್ಡ್‌ ಹಂಚಿಕೆಗೆ ನಿರ್ಬಂಧ ಹೇರುವ ಬಗ್ಗೆ ನೆಟ್‌ಫ್ಲಿಕ್ಸ್‌ ಯೋಚಿಸುತ್ತಿರುವುದು ಕಾರಣವಿರಬಹುದು ಎನ್ನಲಾಗಿದೆ.