ದೆಹಲಿಯಲ್ಲಿ ಕಾರು ಮೂಲಕ ಸುಮಾರು 12 ಕಿ.ಮೀ. ಎಳೆದೊಯ್ದು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಅಂಜಲಿ ಪರಿವಾರಕ್ಕೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಸಂಸ್ಥೆ ಮೀರ್‌ ಫೌಂಡೇಶನ್‌ ಧನ ಸಹಾಯ ಒದಗಿಸಿದೆ.

ನವದೆಹಲಿ: ದೆಹಲಿಯಲ್ಲಿ ಕಾರು ಮೂಲಕ ಸುಮಾರು 12 ಕಿ.ಮೀ. ಎಳೆದೊಯ್ದು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಅಂಜಲಿ ಪರಿವಾರಕ್ಕೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಸಂಸ್ಥೆ ಮೀರ್‌ ಫೌಂಡೇಶನ್‌ ಧನ ಸಹಾಯ ಒದಗಿಸಿದೆ. ಆದರೆ ಹಣದ ಮೊತ್ತ ತಿಳಿದು ಬಂದಿಲ್ಲ. ಶಾರುಖ್‌ ಖಾನ್‌ ತಂದೆ ಮೀರ್‌ ತಾಜ್‌ ಮೊಹ್ಮಮದ್‌ ಖಾನ್‌ ಹೆಸರಿನಲ್ಲಿರುವ ಮೀರ್‌ ಸಂಸ್ಥೆಯು ಅಂಜಲಿ ತಾಯಿ ಚಿಕಿತ್ಸೆಗೆ ಹಾಗೂ ಅಂಜಲಿ ಸಹೋದರಿ ವಿದ್ಯಾಭ್ಯಾಸಕ್ಕೆ ಹಣ ಸಹಾಯ ಒದಗಿಸಿದೆ. ತಳಮಟ್ಟದಲ್ಲಿ ಸುಧಾರಣೆಗೆ ಹಾಗೂ ಮಹಿಳೆಯರ ಬೆಳವಣಿಗೆಗೆ ಆಸರೆಯಾಗಲು ಹಣ ಸಹಾಯ ಮಾಡಲಾಗಿದೆ’ ಎಂದು ಸಂಸ್ಥೆ ತಿಳಿಸಿದೆ. ಜ.1ರಂದು ಸ್ಕೂಟಿ ಚಲಾಯಿಸುತ್ತಿದ್ದ ಅಂಜಲಿ ಕಾರು ಕೆಳಗೆ ಸಿಲುಕಿಕೊಂಡಿದ್ದು, ಕಾರು ಆಕೆಯನ್ನು 12 ಕಿ.ಮೀ ವರೆಗೆ ಎಳೆದೊಯ್ದ ಹಿನ್ನೆಲೆಯಲ್ಲಿ ಆಕೆ ಮೃತಪಟ್ಟಿದ್ದ ಘಟನೆ ನಡೆದಿತ್ತು. ಅಂಜಲಿ ಸಿಲುಕಿದ್ದ ಕಾರೊಳಗಿದ್ದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುವತಿಯ ಕಾರು ಎಳೆದೊಯ್ದ ಪ್ರಕರಣ: ಅಪಘಾತದ ತೀವ್ರತೆಗೆ ಮೆದುಳು, ಶ್ವಾಸಕೋಶ ಹೊರಕ್ಕೆ

Delhi Accident: ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ 3 ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು: ಚಾಲಕ ಬಂಧನ