Asianet Suvarna News Asianet Suvarna News

ಮಾಲ್ಡೀವ್ಸ್‌ಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್, ಲಕ್ಷದ್ವೀಪದ ನೀರು ಯೋಜನೆ ಆರಂಭಿಸಿದ ಇಸ್ರೇಲ್!

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಬೆನ್ನಲ್ಲೇ ಮಾಲ್ಡೀವ್ಸ್ ಹೊತ್ತಿ ಉರಿದಿದೆ. ಭಾರತದ ವಿರುದ್ಧ ನಿಂದಿಸಿ ಸಚಿವರು ಅಮಾನತ್ತಾಗಿದ್ದಾರೆ. ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ್ದಾರೆ. ಈ ಎಲ್ಲಾ ಹೊಡೆತದ ಬಳಿಕ ಇದೀಗ ಇಸ್ರೇಲ್ ಸರ್ಕಾರ ಮಾಲ್ಡೀವ್ಸ್‌ಗೆ ಶಾಕ್ ನೀಡಿದೆ. ನಾಳೆಯಿಂದಲೇ ಲಕ್ಷದ್ವೀಪದಲ್ಲಿ ಕಾಮಗಾರಿ ಆರಂಭಿಸುವುದಾಗಿ ಘೋಷಿಸಿದೆ.

Set back for Maldives Israel Announces ready to commence working Lakshadweep desalination project from Jan 9th ckm
Author
First Published Jan 8, 2024, 4:30 PM IST

ನವದೆಹಲಿ(ಜ.08) ಭಾರತವನ್ನು ಕೆಣಕಿದ ಮಾಲ್ಡೀವ್ಸ್ ಇದೀಗ ಕಂಗಾಲಾಗಿದೆ. ಒಂದೆಡೆ ಭಾರತ ಹಾಗೂ ಭಾರತೀಯರ ವಿರೋಧ, ಮತ್ತೊಂದೆಡೆ ಮಾಲ್ಡೀವ್ಸ್ ಪ್ರವಾಸೋದ್ಯಮ ನೆಲಕಚ್ಚುವ ಭೀತಿ ಎದುರಾಗಿದೆ. ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬೆಳವಣಿಗೆ ನಡುವೆ ಕೇಂದ್ರ ಸರ್ಕಾರ ಲಕ್ಷದ್ವೀಪದ ಅಗತ್ತಿಯಲ್ಲಿರುವ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಸೂಚನೆ ನೀಡಲಾಗಿದೆ. ಇದೀಗ ಮಾಲ್ಡೀವ್ಸ್‌ಗೆ ಇಸ್ರೇಲ್ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆ. ಲಕ್ಷದ್ವೀಪದಲ್ಲಿ ಇಸ್ರೇಲ್‌ಗೆ ನೀಡಿದ್ದ ನೀರು ಕಾಮಗಾರಿ ಯೋಜನೆಯನ್ನು ನಾಳೆಯಿಂದಲೇ ಆರಂಭಿಸುವುದಾಗಿ ಇಸ್ರೇಲ್ ರಾಯಭಾರ ಕಚೇರಿ ಘೋಷಿಸಿದೆ.

ಸುತ್ತಲೂ ಸಮುದ್ರ ನೀರು. ಸುಂದರ ತಾಣ, ಸೌಂದರ್ಯದ ಖನಿಯಾಗಿರುವ ಲಕ್ಷದ್ವೀಪದಲ್ಲಿ ಕುಡಿಯುವ ನೀರು ಸೇರಿದಂತೆ ಇತರ ಬಳಕೆಗೆ ನೀರಿನ ಅಗತ್ಯವಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ನೀರಿನ ಅಭಾವ ಸೃಷ್ಟಿಯಾಗಬಾರದು ಅನ್ನೋ ಕಾರಣಕ್ಕೆ ಕೇಂದ್ರ ಸರ್ಕಾರ ಕಳೆದ ವರ್ಷ ಇಸ್ರೇಲ್ ಅಧಿಕಾರಿಗಳನ್ನು ಲಕ್ಷದ್ವೀಪಕ್ಕೆ ಕಳುಹಿಸಿತ್ತು. ಬಳಿಕ ಇಲ್ಲಿನ ಸಮುದ್ರ ನೀರನ್ನು ಕುಡಿಯುವ ಹಾಗೂ ಇತರ ಬಳಕೆಗೆ ನೀರಾಗಿ ಪರಿವರ್ತಿಸುವ ಯೋಜನೆ ಜವಾಬ್ದಾರಿಯನ್ನು ನೀಡಿತ್ತು. ಇದೀಗ ಲಕ್ಷದ್ವೀಪ ಪ್ರವಾಸೋದ್ಯಮ ಭಾರಿ ಟ್ರೆಂಡ್ ಆಗುತ್ತಿರುವ ಬೆನ್ನಲ್ಲೇ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಘೋಷಣೆ ಮಾಡಿದೆ. ನಾಳೆಯಿಂದ(ಜ.09) ಲಕ್ಷದ್ವೀಪದಲ್ಲಿ ಉಪ್ಪು ನೀರನ್ನು ಶುದ್ಧ ನೀರಾಗಿ ಪರಿವರ್ತಿಸುವ ಯೋಜನಾ ಕಾಮಗಾರಿ ಆರಂಭಗೊಳ್ಳಲಿದೆ ಎಂದಿದೆ.

ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ಸೆಹ್ವಾಗ್!

ಇದೇ ವೇಳೆ ಲಕ್ಷದ್ವೀಪದ ಸೌಂದರ್ಯ ನೋಡಿಲ್ಲದಿದ್ದರೆ, ಸೌಂದರ್ಯ, ನೀರಿನಡಿಯಲ್ಲಿರುವ ಸಂಪತ್ತು, ಪ್ರಾಕೃತಿ ತಾಣದ ಸವಿ ಆನಂದಿಸಿ ಎಂದು ಇಸ್ರೇಲ್ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಭಾರತ ವಿರುದ್ಧ ಹರಿಹಾಯ್ದು ಕೈಸುಟ್ಟುಕೊಂಡಿರುವ ಮಾಲ್ಡೀವ್ಸ್‌ಗೆ ಇದೀಗ ಇಸ್ರೇಲ್ ಕೂಡ ಶಾಕ್ ನೀಡಿದೆ.

 

 

ಸರ್ಕಾರದ ಕೋರಿಕೆ ಮೇರೆಗೆ ಕಳೆದ ವರ್ಷ ನಾವು ಲಕ್ಷದ್ವೀಪಕ್ಕೆ ಬೇಟಿ ನೀಡಿದ್ದೇವು. ಉಪ್ಪು ನೀರಿನ್ನು ಶುದ್ಧ ನೀರಾಗಿ ಪರಿವರ್ತಿಸುವ ಯೋಜನೆ ಸಂಬಂಧ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವು. ಈ ಯೋಜನೆಯನ್ನು ಇಸ್ರೇಲ್ ನಾಳೆಯಿಂದಲೇ ಆರಂಭಿಸಲು ಸಿದ್ದವಾಗಿದೆ. ಲಕ್ಷದ್ವೀಪದ ಪ್ರಾಚಿನ ಹಾಗೂ ಸೌಂದರ್ಯವನ್ನು ವೀಕ್ಷಿಸಲು ಸಾಧ್ಯವಾಗದವರಿಗೆ ನಾವು ತೆಗೆದ ಕೆಲ ಫೋಟೋಗಳು ಇಲ್ಲಿವೆ. ಮೋಡಿ ಮಾಡುವ ಚಿತ್ರಗಳನ್ನು ವೀಕ್ಷಿಸಿ ಎಂದು ಇಸ್ರೇಲ್ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. 

ಲಕ್ಷದ್ವೀಪ ಪ್ರವಾಸಕ್ಕೆ ಅನುಮತಿ ಪತ್ರ ಕಡ್ಡಾಯ, ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗಸೂಚಿ!

ಮಾಲ್ಡೀವ್ಸ್ ಸಚಿವರು ಪ್ರಧಾನಿ ಮೋದಿಯನ್ನು ಇಸ್ರೇಲ್ ಕೈಗೊಂಬೆ ಎಂದು ನಿಂದಿಸಿದ್ದರು. ಭಾರತ ಹಾಗೂ ಮೋದಿ ನಿಂದಿಸಿದ ಮೂವರು ಸಚಿವರು ಅಮಾನತ್ತಾಗಿದ್ದಾರೆ. ಆದರೆ ಮಾಲ್ಡೀವ್ಸ್ ಪ್ರವಾಸೋದ್ಯಮ ನೆಲಕಚ್ಚುವ ಭೀತಿ ಎದುರಾಗಿದೆ.
 

Latest Videos
Follow Us:
Download App:
  • android
  • ios