Asianet Suvarna News Asianet Suvarna News

ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಆರೋಗ್ಯದಲ್ಲಿ ದಿಢೀ‌ರ್ ಏರುಪೇರು: ಆಸ್ಪತ್ರೆಗೆ ದಾಖಲು

ಅಡ್ವಾಣಿ ಆರೋಗ್ಯದಲ್ಲಿ ದಿಢೀ‌ರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಮೂಲಗಳು ತಿಳಿಸಿವೆ. 

senior BJP leader LK Advani Admitted to Hospital due to Health Problems grg
Author
First Published Jun 27, 2024, 6:22 AM IST

ನವದೆಹಲಿ(ಜೂ.27): ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ (96) ಅವರನ್ನು ಬುಧವಾರ ದೆಹಲಿಯ ಏಮ್ಸ್‌ ಗೆ ದಾಖಲಿಸಲಾಗಿದೆ. ಅಡ್ವಾಣಿ ಆರೋಗ್ಯದಲ್ಲಿ ದಿಢೀ‌ರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಮೂಲಗಳು ತಿಳಿಸಿವೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅಡ್ವಾಣಿ ಬಳಲುತ್ತಿದ್ದು, ಆತಂಕಕ್ಕೆ ಕಾರಣವಿಲ್ಲ. ಮುಂಜಾಗ್ರತಾಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ಕ್ಕೆ ಅಡ್ವಾಣಿ ಪಾತ್ರರಾಗಿದ್ದರು. ವಯೋಸಹಜ ಕಾರಣಗಳಿಂದಾಗಿ ರಾಷ್ಟ್ರಪತಿ ಭವನಕ್ಕೆ ಬರಲಾಗದಹಿನ್ನೆಲೆಯಲ್ಲಿ ಸ್ವತಃರಾಷ್ಟ್ರಪತಿ ದೌಪದಿ ಮುರ್ಮು ಅವರೇ, ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರ ಸಮ್ಮುಖದಲ್ಲಿ ಅಡ್ವಾಣಿ ಮನೆಗೆ ತೆರಳಿ ಅವರಿಗೆ 'ಭಾರತ ರತ್ನ' ಪ್ರದಾನ ಮಾಡಿದ್ದರು.

ಮನೆಯಿಂದ ಮತ ಚಲಾಯಿಸಿದ ಅಡ್ವಾಣಿ, ಮನಮೋಹನ್ ಸಿಂಗ್

ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ್ದ ಅಡ್ವಾಣಿ ಜನಸಂಘ, ಜನತಾಪಕ್ಷ, ಸಂಘ ಪರಿವಾರದ ಮೂಲಕ ರಾಜಕೀಯಕ್ಕೆ ಬಂದು ಹಲವು ಹುದ್ದೆಗಳನ್ನು ನಿರ್ವಹಿಸಿದ ಖ್ಯಾತಿ ಹೊಂದಿದ್ದಾರೆ.

Latest Videos
Follow Us:
Download App:
  • android
  • ios