ಪಾಕಿಸ್ತಾನಕ್ಕೆ ಹಿಂದಿರುಗಲು ನಿರಾಕರಿಸಿದ ಸೀಮಾ ಹೈದರ್, ಭಾರತದಲ್ಲಿಯೇ ಸಾಯುವುದಾಗಿ ಘೋಷಿಸಿದ್ದಾರೆ. ಭಾರತದಲ್ಲಿ ಆಶ್ರಯ ಪಡೆದಿರುವ ಅವರು, ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಬಳಿ ಭಾರತದಲ್ಲಿ ಉಳಿಯಲು ಅನುಮತಿ ಕೋರಿದ್ದಾರೆ.

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಬಳಿಕ ಕೇಂದ್ರ ಸರ್ಕಾರ ದೇಶದಲ್ಲಿರುವ ಪಾಕ್ ವಾಸಿಗಳಿಗೆ ಭಾರತ ತೊರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ. ಈ ಸೂಚನೆ ಬೆನ್ನಲ್ಲೇ ಪಾಕಿಸ್ತಾನಿಯರು ಭಾರತ ತೊರೆಯುತ್ತಿದ್ದಾರೆ. ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಎಲ್ಲಾ ರಾಜ್ಯದ ಸಿಎಂಗಳಿಗೆ ಕರೆ ಮಾಡಿ ಪಾಕ್ ಪ್ರಜೆಗಳನ್ನು ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಪ್ರೀತಿಯನ್ನು ಅರಸಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹಿಂದಿರುಗಲ್ಲ ಎಂದು ಹಠ ಹಿಡಿದಿದ್ದಾಳೆ. ಬೇಕಿದ್ರೆ ಇಲ್ಲಿಯೇ ಸಾಯುತ್ತೇನೆಯೇ ವಿನಃ ಪಾಕಿಸ್ತಾನಕ್ಕೆ ಹೋಗಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಇತ್ತೀಚೆಗೆ ಸೀಮಾ ಹೈದರ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಸೀಮಾ ಹೈದರ್, ನನಗೆ ಪಾಕಿಸ್ತಾನಕ್ಕೆ ಹೋಗಲು ಇಷ್ಟವಿಲ್ಲ ಎಂದು ಹೇಳುತ್ತಾಳೆ. ಆಗ ಅಲ್ಲಿದ್ದ ವ್ಯಕ್ತಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏನಾದ್ರೂ ಹೇಳಲು ಅಥವಾ ಮನವಿ ಮಾಡಿಕೊಳ್ಳಲು ಬಯಸುವಿರಾ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಸೀಮಾ ಹೈದರ್, ನಾನು ಪಾಕಿಸ್ತಾನದ ಮಗಳು, ಆದ್ರೀಗ ನಾನು ಭಾರತದ ಸೊಸೆಯಾಗಿದ್ದೇನೆ. ನಾನು ಭಾರತದ ಆಶ್ರಯದಲ್ಲಿದ್ದೇನೆ. ಹಾಗಾಗಿ ಭಾರತದಲ್ಲಿರಲು ನನಗೆ ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ: ಪಾಕ್ ಮಹಿಳೆ ಭಾರತದಲ್ಲಿ ಫೇಮಸ್, ಯೂಟ್ಯೂಬ್ ನಲ್ಲಿ ಸೀಮಾ ಹೈದರ್ ಲಕ್ಷ ಸಂಪಾದನೆ

ಸೀಮ್ ಹೈದರ್ ಹೇಳಿಕೆಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ನಾನು ಪಾಕಿಸ್ತಾನಕ್ಕೆ ಹಿಂದಿರುಗುತ್ತೇನೆ ಎಂಬ ಕಲ್ಪನೆಯನ್ನು ನೀವು ಮಾಡಿಕೊಳ್ಳಬೇಡಿ. ನಾನು ಇಲ್ಲಿಯೇ ಸಾಯುತ್ತೇನೆಯೇ ವಿನಃ ಪಾಕ್‌ಗೆ ಹೋಗಲ್ಲ. ನನ್ನ ಜೀವನದ ಅಂತ್ಯ ಇಲ್ಲಿಯೇ ಆಗುತ್ತೆ. ನಾನು ಯಾರ ಪಾಕಿಸ್ತಾನಿಗಳ ಹೆಸರು ಹೇಳಲು ಮತ್ತು ಕೇಳಲು ಇಷ್ಟಪಡಲ್ಲ ಎಂದು ಹೇಳಿದ್ದಾಳೆ. ಸದ್ಯ ಈ ವಿಡಿಯೋದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

2023ರಲ್ಲಿ ಸೀಮಾ, ತನ್ನ ನಾಲ್ಕು ಮಕ್ಕಳ ಜೊತೆಗೆ ಭಾರತಕ್ಕೆ ಆಗಮಿಸಿ ಯುಪಿ ಮೂಲದ ಸಚಿನ್ ಮೀನಾರನ್ನು ವರಿಸಿದ್ದರು.ಈ ನಡುವೆ ವಕೀಲ ಎ.ಪಿ. ಸಿಂಗ್ ಪ್ರತಿಕ್ರಿಯಿಸಿದ್ದು, ‘ಸೀಮಾ ಸಚಿನ್ ಮೀನಾರ ಮದುವೆಯಾಗಿ ಮಗಳು ಭಾರತಿ ಮೀನಾಗೆ ಜನ್ಮ ನೀಡಿದ್ದಾರೆ. ಅವರ ಪೌರತ್ವ ಭಾರತೀಯ ಪತಿಯೊಂದಿಗೆ ಸಂಪರ್ಕ ಹೊಂದಿದ್ದು, ಕೇಂದ್ರದ ನಿಯಮ ಇವರಿಗೆ ಅನ್ವಯಿಸಬಾರದು’ಎಂದಿದ್ದಾರೆ.

ಇದನ್ನೂ ಓದಿ: ಭಾರತ ಬಿಟ್ಟು ಹೊರಡಲು ಪಾಕಿಸ್ತಾನಿಗಳಿಗೆ ಸೂಚನೆ : ಸೀಮಾ ಹೈದರ್‌ ಪಾಕಿಸ್ತಾನಿ ಪತಿ ಹೇಳಿದ್ದೇನು?