Asianet Suvarna News Asianet Suvarna News

ಲೈಲಾ-ಮಜ್ನು ಗೊತ್ತಲ್ವಾ ಹಂಗೆ ನಾವು, ಅಕ್ಷಯ್‌-ಆಲಿಯಾ ಭಾರತದಲ್ಲಿ ಇರ್ತಾರೆ ಅಂದ್ರೆ ನನಗ್ಯಾಕೆ ಸಾಧ್ಯವಿಲ್ಲ!

ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ ಶುಕ್ರವಾರ ರಾಷ್ಟ್ರಪತಿಗಳಿಗೆ 38 ಪುಟಗಳ ಕ್ಷಮಾದಾನ ಪತ್ರ ಬರೆದಿದ್ದು, ಇದರಲ್ಲಿ ಬಾಲಿವುಡ್‌ ತಾರೆಯರು ಪೌರತ್ವ ಪಡೆಯದೇ ಭಾರತದಲ್ಲಿ ಇರಬಹುದಾದರೆ ನನಗೆಕೇ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Seema Haider 38 page Mercy Petition  to the President Details akshay Kumar Alia Bhatt Citizenship san
Author
First Published Jul 22, 2023, 3:16 PM IST | Last Updated Jul 22, 2023, 3:16 PM IST

ನವದೆಹಲಿ (ಜು.22): ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ ಅವರ ಆರೋಗ್ಯ ಶನಿವಾರ ಹದಗೆಟ್ಟಿದೆ. ಶನಿವಾರ ಬೆಳಗ್ಗೆಯಿಂದಲೇ ಡಿಹೈಡ್ರೇಶನ್‌ ಸಮಸ್ಯೆಗೆ ತುತ್ತಾಗಿದ್ದ 30 ವರ್ಷದ ಸೀಮಾ ಹೈದರ್‌ಗೆ ವೈದ್ಯರು, ಗ್ಲೂಕೋಸ್‌ ನೀಡಿದ್ದಾರೆ. ಈ ನಡುವೆ ಸೀಮಾ ಹೈದರ್‌, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿದ್ದಾರೆ ಎನ್ನಲಾದ 38 ಪುಟಗಳ ಕ್ಷಮಾದಾನದ ಅರ್ಜಿಯ ವಿವರಗಳು ಲಭ್ಯವಾಗಿದೆ. ಭಾರತದಲ್ಲಿ ಇರಲು ಅವಕಾಶ ನೀಡುವಂತೆ ಸೀಮಾ ಹೈದರ್‌ ಮನವಿ ಮಾಡಿದ್ದಾರೆ. ನನಗೆ ನೀವು ಭಾರತದ ಪೌರತ್ವವನ್ನು ನೀಡಬೇಕು. ಏಕೆಂದರೆ, ನಾನೀಗ ಭಾರತದ ಸೊಸೆ ಎಂದು ಅವರು ಬರೆದುಕೊಂಡಿದ್ದಾರೆ. ನಾನು ಹಾಗೂ ಸಚಿನ್‌ ಈಗಾಗಲೇ ಮದುವೆಯಾಗಿದ್ದು, ಹಿಂದೂ ಧರ್ಮವನ್ನೂ ತಾನು ಸ್ವೀಕರಿಸಿದ್ದೇನೆ ಎಂದು ಸೀಮಾ ಹೈದರ್‌ ತಿಳಿಸಿದ್ದಾರೆ. ನನ್ನ ಜೀವನದಲ್ಲಿ ಪ್ರೀತಿಯ ಹೊರತಾಗಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಯ,  ಹೀರ್-ರಾಂಜಾ, ಲೈಲಾ-ಮಜ್ನು, ಶೀರಿ-ಫರ್ಹಾದ್ ಅವರ ಪ್ರೇಮಕಥೆ ಗೊತ್ತಿದೆಯಲ್ವ, ಅದೇ ರೀತಿಯ ಪ್ರೇಮಕಥೆ ನಮ್ಮದು ಎಂದು ಸೀಮಾ ಬರೆದಿದ್ದಾರೆ. ಸಚಿನ್ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದೇನೆ ಎಂದಿರುವ ಸೀಮಾ ತನ್ನ ಉಳಿದ ಜೀವನವನ್ನು ಇಲ್ಲಿಯೇ ಕಳೆಯುತ್ತೇನೆ ಎಂದಿದ್ದರೆ.

ಅದರೊಂದಿಗೆ, ಬಾಲಿವುಡ್ ನಟಿ ಆಲಿಯಾ ಭಟ್, ಅಕ್ಷಯ್ ಕುಮಾರ್ ಅವರ ಹೆಸರನ್ನೂ ಬರೆದು ವಿದೇಶಿ ಪೌರತ್ವ ಹೊಂದಿದ್ದರೂ ಭಾರತದಲ್ಲಿ ಇವರು ವಾಸಿಸಲು ಸಾಧ್ಯವಾಗುತ್ತದೆ ಎಂದಾದರೆ ನನಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಈಗಾಗಲೇ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ನಾನೆಂದೂ ಸುಳ್ಳು ಹೇಳಿಲ್ಲ. ಎಟಿಎಸ್‌ ಈಗ ನನ್ನ ತನಿಖೆ ಮಾಡುತ್ತಿದೆ. ಇವರು ಮಾತ್ರವಲ್ಲ, ಸಿಬಿಐ, ರಾ, ಎನ್‌ಐಎ ಹೀಗೆ ಯಾರು ಬೇಕಾದರೂ ತನಿಖೆ ಮಾಡಲಿ ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.  ಅದರೊಂದಿಗೆ ಪಾಲಿಗ್ರಾಫ್ ಟೆಸ್ಟ್, ಬ್ರೈನ್ ಮ್ಯಾಪಿಂಗ್ ಟೆಸ್ಟ್, ಲೈ ಡಿಟೆಕ್ಟರ್ ಟೆಸ್ಟ್, ಡಿಎನ್ ಎ ಟೆಸ್ಟ್‌ಗೂ ತಾವು ಸಿದ್ಧ ಎಂದಿದ್ದಾರೆ.

ಈ ನಡುವೆ ಎಟಿಎಸ್‌ ತೀವ್ರವಾಗಿ ಸೀಮಾ ಹೈದರ್‌ ಅವರ ತನಿಖೆ ಮಾಡುತ್ತಿದೆ. ಎರಡು ದಿನಗಳ ಕಾಲ ಸೀಮಾ ಹೈದರ್‌ ಅವರನ್ನು 18 ಗಂಟೆಗಳ ಕಾಲ ವಿಚಾರಣೆ ಮಾಡಲಿದೆ. ಆದರೆ, ಆಕೆಯ ಉದ್ದೇಶ ಬೇಹುಗಾರಿಕೆ ಎನ್ನುವುದಕ್ಕೆ ಯಾವುದೇ ಸ್ಪಷ್ಟ ರೀತಿಯ ಸಾಕ್ಷ್ಯ ಲಭಿಸಿಲ್ಲ. ಈ ನಡುವೆ ಸೀಮಾರನ್ನು ಪಾಕಿಸ್ತಾನಕ್ಕೆ ವಾಪಾಸ್‌ ಕಳಿಸುವ ನಿಟ್ಟಿನಲ್ಲೂ ಮಾತುಕತೆಗಳು ನಡೆಯುತ್ತಿದೆ. ಸೀಮಾ ಮತ್ತೆ ಪಾಕಿಸ್ತಾನಕ್ಕೆ ಹೋಗ್ತಾರಾ, ಭಾರತದಲ್ಲಿ ಇರ್ತಾರಾ ಅಥವಾ ಜೈಲಿಗೆ ಹೋಗ್ತಾರಾ? ಸದ್ಯಕ್ಕೆ ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

'ಝೀಂಗೂರ್‌ ಸಾ ಲಡ್ಕಾ..' ಸಚಿನ್‌-ಸೀಮಾ ಲವ್‌ಸ್ಟೋರಿ ರೋಸ್ಟ್‌ ಮಾಡಿದ ನೆರೆಮನೆಯ ಆಂಟಿ!

ಸೀಮಾ ತನ್ನ ಕ್ಷಮಾದಾನ ಅರ್ಜಿಯಲ್ಲಿ ಪದೇ ಪದೇ ಪ್ರೀತಿಯನ್ನು ಉಲ್ಲೇಖಿಸಿದ್ದಾಳೆ. ಸಚಿನ್ ಮೇಲಿನ ಪ್ರೀತಿಯಿಂದ ಮಾತ್ರ ಭಾರತಕ್ಕೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕ್ಷಮಾದಾನ ಅರ್ಜಿಯಲ್ಲಿ ತನ್ನ ಹೆಸರನ್ನು ಸೀಮಾ ಮೀನಾ ಪತ್ನಿ ಸಚಿನ್ ಮೀನಾ ಎಂದು ಬರೆದುಕೊಂಡಿದ್ದಾರೆ. ಶೀರಿ-ಫರ್ಹಾದ್, ಲೈಲಾ-ಮಜ್ನು, ಹೀರ್-ರಾಂಜಾ ಮತ್ತು ಸೋನಿ-ಮಹಿವಾಲ್ ಅವರ ಅಮರ ಪ್ರೇಮಕಥೆಯನ್ನು ಸೀಮಾ ಪ್ರಸ್ತಾಪಿಸಿದ್ದಾರೆ. ಭಾರತದಲ್ಲಿ ವಿವಾಹವಾದ ಅನೇಕ ಮಹಿಳೆಯರು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು, ಅವರು ಬಹಳ ಸಮಯದಿಂದ ಇಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ದೀರ್ಘಾವಧಿ ವೀಸಾ ಕೂಡ ನೀಡಲಾಗಿದೆ. ಹಾಗಾದರೆ ನನಗೆ ಯಾಕೆ ಸಿಗುತ್ತಿಲ್ಲ ಎಂದು ಸೀಮಾ ಪ್ರಶ್ನೆ ಮಾಡಿದ್ದಾರೆ.

ಸೀಮಾ ಹೈದರ್‌ ಬಳಿ ಪಾಕ್‌ನ 5 ಅಧಿಕೃತ ಪಾಸ್‌ಪೋರ್ಟ್‌, ಗುರುತಿನ ಚೀಟಿ ವಶಕ್ಕೆ

ಅನೇಕ ಸೆಲೆಬ್ರಿಟಿಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಪಾಕಿಸ್ತಾನಿ ಅದ್ನಾಮ್ ಸಮಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಆಲಿಯಾ ಭಟ್, ಅಕ್ಷಯ್ ಕುಮಾರ್ ಮುಂತಾದ ಅನೇಕ ಅನೇಕರಿಗೆ ಭಾರತದ ಪೌರತ್ವವಿಲ್ಲ. ಆದರೂ ಅವರ ಪ್ರತಿಭೆಯಿಂದ ಇಲ್ಲಿಯೇ ಬದುಕುತ್ತಿದ್ದಾರೆ. ಶ್ರೀಲಂಕಾದಿಂದ ಬಂದ 95 ಸಾವಿರಕ್ಕೂ ಹೆಚ್ಚು ನಿರಾಶ್ರಿತರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಇವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪಡಿತರ ಕೂಡ ನೀಡಲಾಗುತ್ತದೆ. ನನ್ನೂರು ಬಲೂಚಿಸ್ತಾನ ಒಂದು ಕಾಲದಲ್ಲಿ ಭಾರತದ ಭಾಗವಾಗಿತ್ತು ಎಂದೂ ಆಕೆ ಹೇಳಿದ್ದಾಳೆ. ಇಂದು ಇದನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ. ಅಲ್ಲಿ ವಾಸಿಸುವ ಜನರು ತಮ್ಮನ್ನು ಭಾರತೀಯರು ಎಂದು ಕರೆದುಕೊಳ್ಳುತ್ತಾರೆ. ಇದಲ್ಲದೇ ಬಾಂಗ್ಲಾದೇಶ, ಪಾಕಿಸ್ತಾನ ಅಥವಾ ಇತರ ದೇಶಗಳ ಅನೇಕ ಜನರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಸೀಮಾ ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿಯಲ್ಲಿ ಆರ್‌ಟಿಐ ಉಲ್ಲೇಖಿಸಿ, ಕಳೆದ 5 ವರ್ಷಗಳಲ್ಲಿ 5220 ವಿದೇಶಿ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಹೇಳಲಾಗಿದೆ. ಇದರ ಆಧಾರದ ಮೇಲೆ ತನಗೂ ಪೌರತ್ವ ಸಿಗಬೇಕು ಎಂದು ಸೀಮಾ ವಾದ ಮಾಡಿದ್ದಾರೆ.

Latest Videos
Follow Us:
Download App:
  • android
  • ios