ಏಪ್ರಿಲ್ 24ಕ್ಕೆ ಜಮ್ಮು-ಕಾಶ್ಮೀರಕ್ಕೆ ಮೋದಿ: ಉಗ್ರರ ದಾಳಿ ಆತಂಕದಿಂದ ಭಾರೀ ಭದ್ರತೆ
*ನಾಳೆ ಜಮ್ಮು-ಕಾಶ್ಮೀರಕ್ಕೆ ಮೋದಿ: ಭಾರೀ ಭದ್ರತೆ: *ಕಾರ‍್ಯಕ್ರಮದಲ್ಲಿ 1 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ
*ಪಂಚಾಯತ ರಾಜ್ ದಿನಾಚರಣೆಯಲ್ಲಿ ಭಾಗಿ: 3 ವರ್ಷದ ಬಳಿಕ ಮೊದಲ ಭೇಟಿ
*ಉಗ್ರ ದಾಳಿ ಆತಂಕದ ಕಾರಣ ಬಹುಸ್ತರದ ಭದ್ರತೆ: - ವಾಹನಗಳು, ಜನರ ತೀವ್ರ ತಪಾಸಣೆ
ಜಮ್ಮು (ಏ. 23): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಮ್ಮು-ಕಾಶ್ಮೀರದ ಸಂಬಾಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬಹುಸ್ತರದ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಗಡಿಯುದ್ದಕ್ಕೂ ಸೇನಾ ಭದ್ರತೆ ನಿಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. 2019ರ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಇದೇ ಮೊದಲ ಬಾರಿ ಏ.24ರಂದು ಪ್ರಧಾನಿ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಪಂಚಾಯತರಾಜ್ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸಾಂಬಾಗೆ ಬರುತ್ತಿದ್ದಾರೆ.
ಪ್ರಧಾನಿ ಭೇಟಿಗೆ ಕೇವಲ 2 ದಿನಗಳಿರುವಾಗಲೇ ಇಬ್ಬರು ಜೈಷ್ ಆತ್ಮಹತ್ಯಾ ದಾಳಿಕೋರರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಇವರು ಮೋದಿ ಕಾಶ್ಮೀರ ಭೇಟಿ ಬುಡಮೇಲು ಮಾಡುವ ಸಂಚು ರೂಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಭಾರಿ ಭದ್ರತೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಮೋದಿ ಜಮ್ಮು ಭೇಟಿ ಮುನ್ನ ಪಾಕ್ ಆತ್ಮಹತ್ಯಾ ಬಾಂಬರ್‌ಗಳು ಫಿನಿಷ್..!
ಈ ಕಾರ್ಯಕ್ರಮದಲ್ಲಿ 1 ಲಕ್ಷ ಜನರು ಭಾಗವಹಿಸಲು ಆಡಳಿತ ವ್ಯವಸ್ಥೆ ಮಾಡುತ್ತಿದೆ. ಹಾಗಾಗಿ ಪೂರ್ಣ ಪ್ರಮಾಣದ ವಿಧ್ವಂಸಕ ನಿಗ್ರಹ ತಪಾಸಣೆ ನಡೆಸಿ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಥಳಕ್ಕೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಹೆದ್ದಾರಿಗಳು ಮತ್ತು ಪೆರಿಫೆರಲ… ರಸ್ತೆಗಳನ್ನು ಬಳಸುವ ವಾಹನಗಳು ಮತ್ತು ಜನರನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
370ನೇ ವಿಧಿ ರದ್ದಾದ ಬಳಿಕ ನಾಳೆ ಜಮ್ಮುಗೆ ಮೋದಿ ಮೊದಲ ಭೇಟಿ: ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಪಾಲ್ಗೋಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಮ್ಮುವಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ. 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಪ್ರಧಾನಿ ಮೋದ ಅವರ ಮೊದಲ ಜಮ್ಮು ಭೇಟಿ ಇದಾಗಿದೆ. ಅವರ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ.