Asianet Suvarna News Asianet Suvarna News

ಶಾಲಾ ಕಟ್ಟದಿಂದ ವಿದ್ಯಾರ್ಥಿಯನ್ನು ತಲೆ ಕೆಳಗಾಗಿಸಿ ನೇತಾಡಿಸಿದ ಶಿಕ್ಷಕ!

*ವಿದ್ಯಾರ್ಥಿಯನ್ನು ತಲೆ ಕೆಳಗಾಗಿಸಿ ನೇತಾಡಿಸಿದ ಶಿಕ್ಷಕ
*ಸಹಪಾಠಿಯನ್ನು ಕಚ್ಚಿದ್ದ  ಸೋನು ಯಾದವ್‌
*ತಪ್ಪು ಮಾಡಿ ಕ್ಷಮೆಯಾಚಿಸಲಿಲ್ಲವೆಂದು ಈ ಶಿಕ್ಷೆ

School Principal arrested for hanging  Class 2 Boy upside down from building in Uttar Pradesh
Author
Bengaluru, First Published Oct 30, 2021, 10:33 AM IST
  • Facebook
  • Twitter
  • Whatsapp

ಉತ್ತರಪ್ರದೇಶದ (ಅ. 30 ) : ಉತ್ತರಪ್ರದೇಶದ (Uttar Pradesh) ಮಿರ್ಜಾಪುರದ ಶಾಲೆಯೊಂದರ ಮುಖ್ಯೋಪಾಧ್ಯಾಯರು (Principal) ಶಾಲಾ ಕಟ್ಟಡದ ಮೇಲಿನ ಮಹಡಿಯಿಂದ ಬಾಲಕನೊಬ್ಬನನ್ನು ತಲೆ ಕೆಳಗಾಗಿ ನೇತಾಡಿಸಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಪೋಟೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೋಟೋ ವೈರಲ್‌ ಆಗುತ್ತಿದ್ದಂತೆ ಪೋಲಿಸರು ಮುಖ್ಯೋಪಾಧ್ಯಾಯರನ್ನು ಬಂಧಿಸಿದ್ದಾರೆ. 

ಹೆಚ್ಚು ಆತ್ಮಹತ್ಯೆ: ಕರ್ನಾಟಕ ನಂ.5 - ಮಹಾರಾಷ್ಟ್ರ ನಂ.1

ಗುರುವಾರ ಊಟದ ವಿರಾಮದ ಸಮಯದಲ್ಲಿ ಹಲವಾರು ತರಗತಿಗಳ ವಿದ್ಯಾರ್ಥಿಗಳು ಹೊರಗೆ ಆಟವಾಡುತ್ತಿದ್ದರು. ಈ ವೇಳೆಯಲ್ಲಿ ಸೋನು ಯಾದವ್‌ (Sonu Yadav) ಎಂಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ ಕಚ್ಚಿದ್ದಾನೆ.  ಈ ಘಟನೆ ಮುಖ್ಯೋಪಾಧ್ಯಾಯರು ಗಮನಕ್ಕೆ ಬಂದಿದೆ.  ವಿದ್ಯಾರ್ಥಿಯನ್ನು ಕಚ್ಚಿದ್ದಕ್ಕಾಗಿ  ಕ್ಷಮೆಯಾಚಿಸದಿದ್ದರೆ ಸೋನುನ್ನು ಮೇಲೆಯಿಂದ  ಕೆಳಗೆ ಹಾಕಲಾಗುವುದು  ಎಂದು ಹೇಳಿ ಮುಖ್ಯೋಪಾಧ್ಯಾಯ ಮನೋಜ್ ವಿಶ್ವಕರ್ಮ  (Manoj Vishwakarma) ಬಾಲಕನನ್ನು ಶಾಲಾ ಕಟ್ಟಡದ ಮೇಲಿನ ಮಹಡಿಯಿಂದ ತಲೆ ಕೆಳಗಾಗಿ ನೇತಾಡಿಸಿದ್ದಾನೆ. 

ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಶ್ವ ಹಿಂದೂ ಪರಿಷತ್!

ಸೋನು ಯಾದವ್‌ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದು ಕ್ಷಮೆಯಾಚಿಸದಿದ್ದಕ್ಕೆ ಮುಖ್ಯೋಪಾಧ್ಯಾಯರು ಈ ರೀತಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ. ವಿದ್ಯಾರ್ಥಿಯನ್ನು ಸೋನು ಕಚ್ಚಿದ್ದಕ್ಕಾಗಿ ಆಕ್ರೋಶಗೊಂಡ ಶಿಕ್ಷಕ ಸೋನು ಯಾದವ್‌ನನ್ನು ಶಾಲೆಯ ಕೊನೆಯ ಮಹಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕನ್ನು ತಲೆ ಕೆಳಗಾಗಿ ನೇತಾಡಿಸಿ ಕ್ಷಮೆ ಕೇಳುವಂತೆ ಬೆದರಿಸಿದ್ದಾರೆ. ಇತರ ವಿದ್ಯಾರ್ಥಿಗಳು ಅಲ್ಲಿ ಸೇರಿದ ನಂತರವಷ್ಟೇ ಬಾಲಕನನ್ನು ಬಿಟ್ಟಿದ್ದಾರೆ.

ಮುಖ್ಯೋಪಾಧ್ಯಾಯರು ಪ್ರೀತಿಯಿಂದ ಹೀಗೆ ಮಾಡಿದ್ದಾರೆ!

ಈ ಬಗ್ಗೆ ಸೋನು ತಂದೆ‌ ರಂಜಿತ್‌ ಯಾದವ್ (Ranjith Yadav)  ಪ್ರತಿಕ್ರಿಯೆ ನೀಡಿದ್ದು "ಮುಖ್ಯೋಪಾಧ್ಯಾಯರ ಮಾಡಿದ್ದು ತಪ್ಪು, ಆದರೆ ಅವರು ಪ್ರೀತಿಯಿಂದ ಈ ರೀತಿ ವರ್ತಿಸಿದ್ದಾರೆ, ಆದ್ದರಿಂದ  ನಮಗೆ ಯಾವುದೇ ತೊಂದರೆ ಇಲ್ಲ" ಎಂದು ಹೇಳಿದ್ದಾರೆ. ಬಾಲಾಪರಾಧ ಕಾಯಿದೆಯ ಸೆಕ್ಷನ್‌ಗಳ (Juvenile Justice Act) ಅನ್ವಯ ಮನೋಜ್ ವಿಶ್ವಕರ್ಮರನ್ನು ಬಂಧಿಸಿಲಾಗಿದೆ.  "ಸೋನುನನ್ನು ತಿದ್ದಿ ಅವನನ್ನು ಸರಿಪಡಿಸಿ" ಎಂದು ಅವನ ತಂದೆಯೇ ನಮಗೆ ಹೇಳಿದ್ದರು ಎಂದು ಮನೋಜ್ ತಿಳಿಸಿದ್ದಾರೆ.

ಬಾಲ ಆರೋಪಿ ನಿಯಮ ತಿದ್ದುಪಡಿ ಕುರಿತು ಸಲಹೆ ಅಹ್ವಾನಿಸಿದ ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವಾಲಯ!

"ಸೋನು ತುಂಬಾ ತುಂಟ ವಿದ್ಯಾರ್ಥಿ... ಆತ  ಇತರ ಮಕ್ಕಳಿಗೆ ಕಚ್ಚುತ್ತಿದ್ದ, ಶಿಕ್ಷಕರಿಗೂ ಕೂಡ ತೊಂದರೆ ಕೊಡುತ್ತಿದ್ದ. ಅವನನ್ನು ಸರಿಪಡಿಸಲು ಅವನ ತಂದೆಯೇ ನಮಗೆ ಹೇಳಿದ್ದರು. ಆದ್ದರಿಂದ ನಾನು ಆತನನ್ನು ಹೆದರಿಸಲು ಪ್ರಯತ್ನಿಸಿದ್ದೇನೆ. ಅವನಿಗೆ ಹೆದರಿಸಲು ಮೇಲಿನ ಮಹಡಿಯಿಂದ ತಲೆ ಕೆಳಗಾಗಿ ನೇತಾಡಿಸಿದೆವು," ಎಂದು ಮುಖ್ಯೋಪಾಧ್ಯಾಯ ಮನೋಜ್‌ ವಿಶ್ವಕರ್ಮ ಹೇಳಿದ್ದಾರೆ.

ಸ್ನೇಹಿತರಿಗೆ ಮೆಸೇಜ್‌ ಕಳಿಸಿ ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ನಾನು ಸಾಯುತ್ತಿದ್ದೇನೆ (Mis You Friends) ನನ್ನ ಬ್ಯಾನರ್‌ ಹಾಕಿ ನನಗೆ ಶ್ರಂದ್ಧಾಂಜಲಿ ಸಲ್ಲಿಸಿ ಎಂದು ಸ್ನೇಹಿತರಿಗೆ ಮೆಸೇಜ್‌(Message) ಮಾಡಿ ಕಾಲೇಜು ವಿದ್ಯಾರ್ಥಿಯೊಬ್ಬ(Student) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಅಮಾನಿ ಕೆರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಕೊಳ್ಳೂರು ಕಾಲೋನಿಯ ಕಿಶೋರ್‌(17) ಪ್ರಥಮ ಪಿಯುಸಿಯನ್ನು ಗಂಗೋತ್ರಿ ಕಾಲೇಜಿನಲ್ಲಿ ಓದುತ್ತಿದ್ದ. ಮಂಗಳವಾರ ಬೆಳಿಗ್ಗೆ ಕಾಲೇಜಿಗೆಂದು ಹೋದವನು ಸಂಜೆ ಸ್ನೇಹಿತರಿಗೆ ಮೆಸೇಜ್‌ ಮಾಡಿ ಮಿಸ್‌ ಯೂ ಪ್ರೆಂಡ್ಸ್‌ ಎಂದು ತಿಳಿಸಿರುವುದನ್ನು ಸ್ನೇಹಿತರು ವಿದ್ಯಾರ್ಥಿಯ ಪೋಷಕರಿಗೆ(Parents) ತಿಳಿಸಿದ್ದಾರೆ. ಪೋಷಕರು ಕೆರೆಯ ಬಳಿ ಹೋಗಿ ಹುಡುಕಿದಾಗ ಚಪ್ಪಲಿ ಮತ್ತು ಬಟ್ಟೆಗಳು ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. 

Delhi University ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣಿಗೆ ಶರಣು!

ಬಲ್ಲ ಮೂಲಗಳ ಪ್ರಕಾರ ಕಿಶೋರ್‌ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಐ ಲವ್‌ ಯೂ ಎಂದು ಮೆಸೇಜ್‌ ಮಾಡಿದ್ದು ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಾಳೆ. ಪ್ರಾಂಶುಪಾಲರು ಕಿಶೋರ್‌ನನ್ನು ಕರೆಸಿ ಆವನಿಗೆ ಹೊಡೆದಿದ್ದರಿಂದ ಅವಮಾನ ಸಹಿಸಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುದ್ದಿ ಹೇಳಲು ಮತ್ತೆ ಕಾಲ್‌ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು ಎಂದು ಸ್ನೇಹಿತರು ಪೋಷಕರಿಗೆ ತಿಳಿಸಿದ್ದಾರೆ.

Follow Us:
Download App:
  • android
  • ios