Asianet Suvarna News Asianet Suvarna News

ಬಾಲ ಆರೋಪಿ ನಿಯಮ ತಿದ್ದುಪಡಿ ಕುರಿತು ಸಲಹೆ ಅಹ್ವಾನಿಸಿದ ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವಾಲಯ!

  • ಬಾಲ ಆರೋಪಿಗಳ ಆರೈಕೆ ಮತ್ತು ರಕ್ಷಣೆ ಮಾದರಿ ನಿಯಮಕ್ಕೆ ತಿದ್ದುಪಡಿ
  • 2016 ರ ತಿದ್ದುಪಡಿಗಳ ಕುರಿತು ಸಲಹೆ ಅಹ್ವಾನಿಸಿದ ಸಚಿವಾಲಯ
  • ನವೆಂಬರ್ 11 ರೊಳಗೆ ಸಲೆಹೆ ನೀಡುವಂತೆ ಸೂಚನೆ
Ministry of Women and Child Development seeks suggestions on Amendments to Juvenile Justice Model ckm
Author
Bengaluru, First Published Oct 28, 2021, 6:45 PM IST
  • Facebook
  • Twitter
  • Whatsapp

ನವದೆಹಲಿ(ಅ.28): ದೇಶದಲ್ಲಿ ಹಲವು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಹಲವು ಹೊಸ ನಿಯಮಗಳು ಜಾರಿಗೊಂಡಿದೆ. ಇದರಲ್ಲಿ ಬಾಲಾರೋಪಿಗಳ(Juvenile Justice) ಆರೈಕೆ ಮತ್ತು ರಕ್ಷಣೆ(Care and Protection of Children) ಮಾದರಿ ನಿಯಮ 20216ರ ತಿದ್ದುಪಡಿ ನಿಯಮ ದೇಶದ ಗಮನಸೆಳೆದಿತ್ತು. ಇದೀಗ 2016ರ ಕರಡು ತಿದ್ದುಪಡಿಗಳ ಕುರಿತು ಪ್ರತಿಕ್ರಿಯೆ ಸಲಹೆ ನೀಡಬೇಕು ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು(Women and Child Development) ಮನವಿ ಮಾಡಿದೆ. ಪ್ರತಿಕ್ರಿಯೆ, ಸಲಹೆ ಸೂಚನೆಗಳನ್ನು ನವೆಂಬರ್ 11, 2021ರೊಳಗೆ ನೀಡುವಂತೆ ಸಚಿವಾಲಯ ಮನವಿ ಮಾಡಿದೆ. 

ಬಾಲಾಪರಾಧಿ ವಯಸ್ಸಿನ ಮಿತಿ 16ಕ್ಕೆ ಇಳಿಕೆ ಅಗತ್ಯವಿಲ್ಲ: ಸಂಸದೀಯ ಸಮಿತಿ

ಬಾಲಾರೋಪಿಗಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ, 2021, ಬಾಲಾರೋಪಿಗಳ ಕಾಯಿದೆ, 2015ಕ್ಕೆ ತಿದ್ದುಪಡಿ(Amendment Bill) ಮಾಡಲಾಗಿತ್ತು. ಈ ತಿದ್ದುಪಡಿ  2021ರ ಜುಲೈ 28ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಈ ಮಸೂದೆಯನ್ನು ಸರ್ಕಾರ ಈ ವರ್ಷದ ಬಜೆಟ್(Budget) ಅಧಿವೇಶನದಲ್ಲಿ ಸಂಸತ್ತಿನಲ್ಲಿ(Parliament) ಮಂಡಿಸಿತ್ತು. ಇದಕ್ಕೆ ಮಾರ್ಚ್ 24, 2021ರಂದು  ಲೋಕಸಭೆ ಅಂಗೀಕಾರ ನೀಡಿತ್ತು.

ಮಸೂದೆಯನ್ನು ಮಂಡಿಸುವ ಸಂದರ್ಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ(Smriti Zubin Irani),  ವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿರುವ ಅಸಮರ್ಪಕತೆಗಳ ಹಿನ್ನೆಲೆಯಲ್ಲಿ ದುರ್ಬಲ ಮಕ್ಕಳ ಆರೈಕೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾ ದಂಡಾಧಿಕಾರಿಗಳಿಗೆ(District Magistrates) ವಹಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಎಲ್ಲಾ ಸಮಸ್ಯೆಗಳಿಗಿಂತಲೂ ಉನ್ನತ ಆದ್ಯತೆಯನ್ನು ಭಾರತದ ಮಕ್ಕಳಿಗೆ ನೀಡುವ ನಿಟ್ಟಿನಲ್ಲಿ ಸಂಸತ್ತಿನ ಬದ್ಧತೆಯನ್ನು ಅವರು ವಿವರಿಸಿದ್ದರು.

ಮೈಸೂರು ಗ್ಯಾಂಗ್‌ರೇಪ್: ಬಾಲಾಪರಾಧಿ ಸೇರಿ 5 ಮಂದಿ ಅರೆಸ್ಟ್, ಹಣ ಸಿಗದಾಗ ಅತ್ಯಾಚಾರ!

ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಸಲುವಾಗಿ, ಕಾಯಿದೆಯ ಜೆಜೆ ಸೆಕ್ಷನ್ 61ರ ಅಡಿಯಲ್ಲಿ ದತ್ತು ಆದೇಶಗಳನ್ನು ನೀಡಲು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ನೀಡುವುದೂ ಸೇರಿದಂತೆ ಜಿಲ್ಲಾ ದಂಡಾಧಿಕಾರಿಗಳ ಅಧಿಕಾರಗಳ ತಿದ್ದುಪಡಿಗಳನ್ನು ಇದು ಒಳಗೊಂಡಿದೆ. ಅದರ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಮಕ್ಕಳ ಪರವಾಗಿ ಸಂಯೋಜಿತ ಪ್ರಯತ್ನಗಳನ್ನು ಕೈಗೊಳ್ಳಲು ಜಿಲ್ಲಾ ದಂಡಾಧಿಕಾರಿಗಳಿಗೆ ಕಾಯಿದೆಯಡಿಯಲ್ಲಿ ಮತ್ತಷ್ಟು ಅಧಿಕಾರ ನೀಡಲಾಗಿದೆ. 

ಕಾಯಿದೆಗೆ ತಿದ್ದುಪಡಿಯಾದ ನಿಬಂಧನೆಗಳ ಪ್ರಕಾರ, ಯಾವುದೇ ಮಕ್ಕಳ ಆರೈಕೆ ಸಂಸ್ಥೆಗಳನ್ನು ಜಿಲ್ಲಾ ದಂಡಾಧಿಕಾರಿಗಳ ಶಿಫಾರಸನ್ನು ಪರಿಗಣಿಸಿದ ನಂತರವೇ ನೋಂದಣಿ ಮಾಡಬೇಕು. ಜಿಲ್ಲಾ ದಂಡಾಧಿಕಾರಿಗಳು ಸ್ವತಂತ್ರವಾಗಿ ಜಿಲ್ಲಾ ಮಕ್ಕಳ ಸಂರಕ್ಷಣೆ ಘಟಕಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಬಾಲಾರೋಪಿಗಳ ನ್ಯಾಯ ಮಂಡಳಿಗಳು, ವಿಶೇಷ ಬಾಲಾರೋಪಿ ಪೊಲೀಸ್ ಘಟಕಗಳು,  ಮಕ್ಕಳ ಆರೈಕೆ ಸಂಸ್ಥೆಗಳು ಇತ್ಯಾದಿಗಳ ಕಾರ್ಯಾಚರಣೆಯ ಮೌಲ್ಯಮಾಪನ ಮಾಡುತ್ತಾರೆ.

ನಾನು ಬಾಲಾಪರಾಧಿ': ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ರೇಪಿಸ್ಟ್ ಪವನ್‌ ಹೊಸ ದಾಳ!
 
ಬಾಲಾರೋಪಿ ನಿಯಮ ತಿದ್ದುಪಡಿಗೆ ವೇಗ ನೀಡಿದ್ದ ನಿರ್ಭಯಾ ಪ್ರಕರಣ:
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2011ರಲ್ಲಿ ಬಾಲಾರೋಪಿ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಯಿತು. ಆದರೆ ಭಾರತದ ಪ್ರತಿಯೊಬ್ಬ ಪ್ರಜೆ ಈ ಬಾಲಾರೋಪಿ ನಿಯಮ ತಿದ್ದುಪಡಿ ತರಬೇಕು ಎಂದು ಅಗ್ರಹಿಸಲು 2012ರಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ಕಾರಣವಾಯಿತು.

ಈ ಪ್ರಕರಣದ ಓರ್ವ ಆರೋಪಿ ಬಾಲಾರೋಪಿಯಾಗಿದ್ದು, ಪ್ರಕರಣ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಆದರೆ ಸ್ಪಷ್ಟತೆ ಹಾಗೂ ವಯಸ್ಸಿನ ಅಂತರ ಇಳಿಕೆ ವಿಚಾರದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗಲಿಲಿಲ್ಲ ಆದರೆ 2014ರ ಜುಲೈ ತಿಂಗಳಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಮಹತ್ತರ ಬದಲಾವಣೆಗೆ ಮುಂದಾದರು. 16 ವರ್ಷ ವಯಸ್ಸಿನವರನ್ನು ವಯಸ್ಕರೆಂದು ಪರಿಗಣಿಸಲು ಅನುಮತಿಸುವ ಹೊಸ ಕಾನೂನನ್ನು ಸಿದ್ಧಪಡಿಸುವುದಾಗಿ ಹೇಳಿದರು. 

 ಶೇಕಡಾ 50 ರಷ್ಟು ಬಾಲಾಪರಾಧಿ ಅಪರಾಧಗಳನ್ನು ಹದಿಹರೆಯದವರು ಮಾಡುತ್ತಾರೆ. ಆದರೆ 18  ವರ್ಷಕ್ಕಿಂತ ಕೆಳಗಿನವರನ್ನು ಬಾಲಾಪರಾಧಿ ಎಂದು ಪರಿಗಣಿಸುವ ಕಾರಣ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ಬದಲಾವಣೆ ಅವಶ್ಯತೆ ಇದೆ ಎಂದರು.  ಮೇನಕಾ ಗಾಂಧಿಯವರು 12 ಆಗಸ್ಟ್ 2014 ರಂದು ಸಂಸತ್ತಿನಲ್ಲಿ ಮಂಡಿಸಿದ್ದರು.ಆದರೆ ಈ ಪ್ರಯತ್ನಗಳಿಗೆ ಸಂಸದೀಯ ಮಂಡಳಿ ತಣ್ಣೀರೆರಚಿತ್ತು.

Follow Us:
Download App:
  • android
  • ios