Asianet Suvarna News Asianet Suvarna News

ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಶ್ವ ಹಿಂದೂ ಪರಿಷತ್!

*ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಎಚ್‌ಪಿ
*ಕ್ಯಾಂಪಸ್‌ನಲ್ಲಿದ್ದ ಸರಸ್ವತಿ ವಿಗ್ರಹವನ್ನು ಆಡಳಿತ ಮಂಡಳಿ ತೆಗೆದಿರುವ ಆರೋಪ
*ಶಾಲೆಯು ಅದನ್ನು ಸ್ಥಾಪಿಸಲು ವಿಫಲವಾದರೆ ನಾವು ಅದನ್ನು ಸ್ಥಾಪಿಸುತ್ತೇವೆ

VHP gives Ultimatum to Install Idol of Saraswati in The Christian School in Madhya Pradesh
Author
Bengaluru, First Published Oct 29, 2021, 10:17 AM IST
  • Facebook
  • Twitter
  • Whatsapp

ಮಧ್ಯಪ್ರದೇಶ(ಅ.‌  29) : ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಸದಸ್ಯರು ಮಧ್ಯಪ್ರದೇಶದ ಸತ್ನಾ (Satna) ಜಿಲ್ಲೆಯ ಕ್ರಿಶ್ಚಿಯನ್ ಶಾಲೆಯೊಂದಕ್ಕೆ 15 ದಿನಗಳಲ್ಲಿ ಹಿಂದೂ ದೇವತೆ ಸರಸ್ವತಿಯ ವಿಗ್ರಹವನ್ನು (Saraswati Idol) ಕ್ಯಾಂಪಸ್‌ನಲ್ಲಿ ಸ್ಥಾಪಿಸುವಂತೆ ಗಡುವು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕ್ರಿಸ್ತ ಜ್ಯೋತಿ ಸಿನಿಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ (Christ Jyoti Senior Secondary School) ಸೋಮವಾರ ಈ ಘಟನೆ ನಡೆದಿದೆ. ‌

ಇಸ್ಲಾಂಗೆ ಮತಾಂತರಗೊಳ್ಳಿ, ಇಲ್ಲಿವೇ ದೇಶ ಬಿಡಿ: ಸಿಖ್ಖರಿಗೆ ಧಮಕಿ!

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಸುಮಾರು 30 ಜನ ಕಾರ್ಯಕರ್ತರು  ಶಾಲೆಯ ಮ್ಯಾನೇಜರ್ ಫಾದರ್ ಆಗಸ್ಟಿನ್ ಚಿಟ್ಟುಪರಂಬಿಲ್ (Augustine Chittuparambil) ಅವರನ್ನು ಭೇಟಿ ಮಾಡಿ 15 ದಿನಗಳೊಳಗೆ ಹಿಂದೂ ದೇವತೆ ಸರಸ್ವತಿಯ ವಿಗ್ರಹವನ್ನು ಕ್ಯಾಂಪಸ್‌ನಲ್ಲಿ ಇಡಬೇಕೆಂದು ಒತ್ತಾಯಿಸಿದರು, ಇಲ್ಲದಿದ್ದರೆ ತಾವೇ ವಿಗ್ರಹವನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.  ಮೂರು ವರ್ಷಗಳ ಹಿಂದೆ ಕ್ಯಾಂಪಸ್‌ನಲ್ಲಿ (Campus) ಸರಸ್ವತಿ ದೇವಿಯ ವಿಗ್ರಹವಿತ್ತು ಆದರೆ ಕ್ರಿಶ್ಚಿಯನ್ ಆಡಳಿತ ಮಂಡಳಿ ಅದನ್ನು ತೆಗೆದುಹಾಕಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಪ್ರೀತಿಸಿ ಮದುವೆ ಮತಾಂತರ... ಸ್ಪಂದಿಸದ ಗಂಡ... ಇನ್ಮುಂದೆ ನೊಂದವರ ಪರ ನನ್ನ ಹೋರಾಟ!

1973 ರಿಂದ ಸತ್ನಾದಲ್ಲಿ ಶಾಲೆಯೂ ಕಾರ್ಯನಿರ್ವಹಿಸುತ್ತಿದೆ. ಕ್ಯಾಂಪಸ್‌ನಲ್ಲಿ ಅಂತಹ ಯಾವುದೇ ವಿಗ್ರಹ ಇರಲಿಲ್ಲ ಎಂದು ಶಾಲೆಯ ಅಧಿಕಾರಿಗಳು ತಿಳಿಸಿ ಕಾರ್ಯಕರ್ತರ ಆರೋಪಗಳನ್ನು ನಿರಾಕರಿಸಿದ್ದಾರೆ."ಶಾಲೆಯ ಆಡಳಿತ ಮಂಡಳಿ ಜತೆ ನಮಗೆ ಯಾವುದೇ ಸಮಸ್ಯೆಗಳಿಲ್ಲ ಆದರೆ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಬಯಸುತ್ತೇವೆ" ಎಂದು ವಿಎಚ್‌ಪಿಯ ಪ್ರಾದೇಶಿಕ ಸಹಾಯಕ ಕಾರ್ಯದರ್ಶಿ ಸಾಗರ್ ಗುಪ್ತಾ (Sagar Gupta)ತಿಳಿಸಿದ್ದಾರೆ. "ಶಾಲೆಯು ಅದನ್ನು ಸ್ಥಾಪಿಸಲು ವಿಫಲವಾದರೆ ನಾವು ಅದನ್ನು ಸ್ಥಾಪಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಮತಾಂತರದ ಆರೋಪ : ಕ್ರಿಶ್ಚಿಯನ್‌ ಪಾದ್ರಿಗಳ ಬಂಧನ!

ಸತ್ನಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2017 ರಲ್ಲಿ, ಬಜರಂಗದಳವು ಧಾರ್ಮಿಕ ಮತಾಂತರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದ ಕ್ಯಾಥೋಲಿಕ್ ಕರೋಲ್ ಗಾಯಕರ (Catholic carol singers) ಗುಂಪನ್ನು ಸತ್ನಾದಲ್ಲಿ ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಕ್ರಿಶ್ಚಿಯನ್‌ ಗುರುವೊಬ್ಬರ ಕಾರಿಗೆ ಬೆಂಕಿ ಕೂಡ ಹಚ್ಚಲಾಗಿತ್ತು. ಇಬ್ಬರು ಪಾದ್ರಿಗಳೊಂದಿಗೆ 30 ಕ್ಯಾರೋಲರ್‌ಗಳು ಕರೋಲ್‌ಗಳನ್ನು ಹಾಡುತ್ತ ಹೋಗುತ್ತಿದ್ದಾಗ ಅವರನ್ನು ಬಂಧಿಸಿ ಸಿವಿಲ್ ಲೈನ್ಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಪೊಲೀಸ್ ಠಾಣೆಗೆ ವಿಚಾರಣೆಗೆಂದು ತೆರಳಿದ ಎಂಟು ಮಂದಿ ಅರ್ಚಕರನ್ನೂ ಕೂಡ ಪೋಲಿಸರು ವಶಕ್ಕೆ ಪಡೆದಿದ್ದರು. 

ಮತಾಂತರಿಗಳ ವಿರುದ್ಧ ಕ್ರಮ ಇಲ್ಲ...ಪೊಲೀಸರ ಮೇಲೆ ಬೆಲ್ಲದ್ ಆಕ್ರೋಶ

ಕಳೆದ ತಿಂಗಳು, ಮಧ್ಯಪ್ರದೇಶ ಹೈಕೋರ್ಟ್, ಬಜರಂಗದಳದ ದೂರಿನ ಮೇರೆಗೆ ಬಂಧಿತರಾದ ಕ್ಯಾಥೋಲಿಕ್ ಪಾದ್ರಿಗಳಲ್ಲಿ ಒಬ್ಬರಾಗಿದ್ದ ಫಾದರ್ ಜಾರ್ಜ್ ಮಂಗಲಪಿಲ್ಲಿ (Fr George Mangalapilly) ಅವರನ್ನು ಖುಲಾಸೆಗೊಳಿಸಿತ್ತು. ಭಾರತದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಗಳ ಕುರಿತು ಇತ್ತೀಚಿನ ಸತ್ಯಶೋಧನಾ ವರದಿಯ ಪ್ರಕಾರ, 2021 ರ 273 ದಿನಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು 305 ಹಿಂಸಾಚಾರದ ಘಟನೆಗಳು ನಡೆದಿವೆ. ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶಗಳಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಒಟ್ಟು 169 ಹಿಂಸಾಚಾರಗಳು ದಾಖಲಾಗಿವೆ, ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ ಗುರಿಯಾಗಿಸಿಕೊಂಡು 32  ಘಟನೆಗಳು ನಡೆದಿವೆ ಎಂದು ವರದಿ ತಿಳಿಸಿದೆ.

ಇಂಡೋನೇಷ್ಯಾ ಅಧ್ಯಕ್ಷರ ಪುತ್ರಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ!

ಇಂಡೋನೇಷ್ಯಾದ(Indonesia) ಸುಕ್ಮಾವತಿ ಸೂಕರ್ಣಪುತ್ರಿ(Sukmawati Soekarnoputri) ಪ್ರಸಿದ್ಧರಾಗಿರುವ ದಿಯಾ ಮುತಿಯಾರಾ ಸುಕ್ಮಾವತೀ ಸೋಕರ್ಣೋಪುತ್ರೀ ತಮ್ಮ ಘೋಷಣೆಯೊಂದರ ಮೂಲಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ದಿವಂಗತ ಬಲಿನೀಸ್ ಅಜ್ಜಿ ಇಡಾ ಆಯು ನ್ಯೋಮನ್ ರೈ ಶ್ರೀಂಬೆನ್ (1881-1958) ಪ್ರಭಾವದಿಂದಾಗಿ 69 ವರ್ಷದ ಇಂಡೋನೇಷಿಯನ್ ನ್ಯಾಷನಲ್ ಪಾರ್ಟಿಯ (Partai Nasional Indonesia-PNI) ಸುಕ್ಮಾವತಿ  ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದೆ. "ಐಬು ಶ್ರೀಂಬೆನ್" 1887 ರಲ್ಲಿ ಜಾವಾನೀಸ್ ಶಿಕ್ಷಕ, ರಾಡೆನ್ ಸೂಕೆಮಿ ಸೊಸ್ರೊಡಿಹಾರ್ಡ್ಜೊ ಅವರನ್ನು ವಿವಾಹವಾದರು. 1901 ರಲ್ಲಿ ಜಾವಾದಲ್ಲಿ ಭವಿಷ್ಯದ ಅಧ್ಯಕ್ಷರಾದ ಸೂಕರ್ನೊಗೆ ಜನ್ಮ ನೀಡಿದರು.

Follow Us:
Download App:
  • android
  • ios