Asianet Suvarna News Asianet Suvarna News

ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ತನಿಖೆ ನಡೆಸಿದ್ದ ಐಪಿಎಸ್‌ ಅಧಿಕಾರಿ ಸತೀಶ್‌ ವರ್ಮ ಸೇವೆಯಿಂದ ವಜಾ!

ಕೇಂದ್ರ ಗೃಹ ಸಚಿವಾಲಯವು ಸತೀಶ್‌ ವರ್ಮ ಅವರನ್ನು ಸೇವೆಯಿಂದ ವಜಾ ಮಾಡಬಹುದು ಎಂದು ದೆಹಲಿ ಹೈಕೋರ್ಟ್‌ ಆದೇಶ ನೀಡಿದನ್ನು ಇಲಾಖೆ ಜಾರಿ ಮಾಡಿದೆ. ಈ ವಿಚಾರವಾಗಿ ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ಕೇಸ್‌ ವಿಚಾರಣೆ ನಡೆಸಿದ್ದ ಐಪಿಎಸ್‌ ಅಧಿಕಾರಿ ಸತೀಶ್‌ ವರ್ಮ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
 

Satish Chandra Verma who was part of the investigation Ishrat Jahan  encounter case  dismissed from service san
Author
First Published Sep 15, 2022, 11:50 AM IST

ನವದೆಹಲಿ (ಸೆ.15): ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದ ತನಿಖಾ ತಂಡದ ಭಾಗವಾಗಿದ್ದ ಭಾರತೀಯ ಪೊಲೀಸ್ ಸೇವಾ ಅಧಿಕಾರಿ (ಗುಜರಾತ್ ಕೇಡರ್) ಸತೀಶ್ ಚಂದ್ರ ವರ್ಮಾ ಅವರನ್ನು ಮಂಗಳವಾರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಕಳೆದ ವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ವರ್ಮಾ ಅವರು 2011 ರಲ್ಲಿ 19 ವರ್ಷದ ಇಶ್ರತ್ ಜಹಾನ್ ಮತ್ತು ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ, ಅಮ್ಜದಲಿ ಅಕ್ಬರಲಿ ರಾಣಾ ಮತ್ತು ಜೀಶನ್ ಜೋಹರ್ ಅವರನ್ನು  2004ರ ಜೂನ್ 15 ರಂದು ಅಹಮದಾಬಾದ್‌ನ ಹೊರವಲಯದಲ್ಲಿ ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು ಎಂದು ತೀರ್ಮಾನಿಸಿದ ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡದ ಭಾಗವಾಗಿದ್ದರು. ಸೆಪ್ಟೆಂಬರ್ 30 ರಂದು ನಿವೃತ್ತಿಯಾಗುವ ಒಂದು ತಿಂಗಳ ಮೊದಲು ಅವರನ್ನು ಆಗಸ್ಟ್ 30 ರಂದು ವಜಾ ಮಾಡಲಾಗಿದೆ. ವಜಾ ಆದೇಶದಿಂದಾಗಿ ಸತೀಶ್‌ ವರ್ಮ ಅವರು ಪಿಂಚಣಿ ಅಥವಾ ನಿವೃತ್ತಿಯ ನಂತರದ ಇತರ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ. ದೆಹಲಿ ಹೈಕೋರ್ಟ್ ವರ್ಮಾ ಅವರಿಗೆ ಸೆಪ್ಟೆಂಬರ್ 2021 ರಲ್ಲಿ ನೀಡಲಾದ ಚಾರ್ಜ್‌ಶೀಟ್ ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ, ಅದು ಗೃಹ ಸಚಿವಾಲಯವು ಸ್ಥಾಪಿಸಿದ ಶಿಸ್ತು ಸಮಿತಿಗೆ ತನ್ನ ಪ್ರಕ್ರಿಯೆಗಳೊಂದಿಗೆ ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು.

2021 ರಲ್ಲಿ, ವರ್ಮಾ ವಿರುದ್ಧ ಯಾವುದೇ "ಪ್ರಚೋದಕ ಕ್ರಮಗಳನ್ನು" ತೆಗೆದುಕೊಳ್ಳದಂತೆ ಗೃಹ ಸಚಿವಾಲಯಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಈ ವರ್ಷದ ಆಗಸ್ಟ್ 30ರಂದು ವಜಾ ಆದೇಶವನ್ನು ಜಾರಿಗೊಳಿಸಲು ಸಚಿವಾಲಯಕ್ಕೆ ಹೈಕೋರ್ಟ್ ಅನುಮತಿ ನೀಡಿತ್ತು. ಇಲಾಖಾ ವಿಚಾರಣೆಯು ವರ್ಮಾ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಸ್ತು ಪ್ರಾಧಿಕಾರವು ನಿರ್ಧರಿಸಿದೆ ಎಂದು ಸೆಪ್ಟೆಂಬರ್ 6 ರಂದು ಸಚಿವಾಲಯವು ಹೈಕೋರ್ಟ್‌ಗೆ ತಿಳಿಸಿದೆ. ವಜಾಗೊಳಿಸಿದ ಆದೇಶದಲ್ಲಿ ವರ್ಮಾ ಅವರು "ಪ್ರಕರಣದ ವಿಚಾರದಲ್ಲಿ ತೀರಾ ಗುಪ್ತ ಮಾಹಿತಿಯನ್ನು ಮಾಧ್ಯಗಳೊಂದಿಗೆ ಹಂಚಿಕೊಂಡಿದ್ದಾರೆ. ಇದು ದೇಶದ ಅಂತಾರಾಷ್ಟ್ರೀಯ ಸಂಬಂಧವನ್ನು ಹದಗೆಡಿಸಿದೆ' ಎಂದು ಹೇಳಲಾಗಿದೆ.

ವಜಾಗೊಳಿಸಿದ ಆದೇಶವನ್ನು ಜಾರಿಗೆ ತರಲು ಒಪ್ಪಿಗೆ ಸೂಚಿಸಿದ ಹೈಕೋರ್ಟ್ (High Court), ಕಾನೂನು ಪರಿಹಾರಗಳನ್ನು ಪಡೆಯಲು ವರ್ಮಾಗೆ (Satish Verma) ಸೆಪ್ಟೆಂಬರ್ 19 ರವರೆಗೆ ಕಾಲಾವಕಾಶವನ್ನು ನೀಡಿದೆ. ಮಂಗಳವಾರ, ವರ್ಮಾ ಅವರು ವಜಾ ಆದೇಶವನ್ನು ಜಾರಿಗೆ ತರಲು ಕೇಂದ್ರಕ್ಕೆ ಅನುಮತಿ ನೀಡುವ ದೆಹಲಿ ಹೈಕೋರ್ಟ್ ನಿರ್ದೇಶನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಮೋದಿ ವಿಚಾರಣೆ?

ಎನ್‌ಕೌಂಟರ್ ನಕಲಿ ಎಂದು 2013 ರಲ್ಲಿ ಹೇಳಿದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತಂಡದಲ್ಲಿ ವರ್ಮಾ ಕೂಡ ಇದ್ದರು, ನಂತರ ಸಿಬಿಐ ವಿವಿಧ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ನಾಲ್ವರು (Ishrat Jahan Encounter Case) ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು (Narendra Modi) ಕೊಲ್ಲಲು ಸಂಚು ರೂಪಿಸುತ್ತಿದ್ದರು ಎಂದು ಗುಜರಾತ್ ಪೊಲೀಸರು (Gujarat  Police) ಹೇಳಿದ್ದರು.

ಇಶ್ರಾತ್ ಜಹಾನ್ ಪ್ರಕರಣ: ಗುಜರಾತ್ ಮಾಜಿ ಡಿಜಿಪಿಯನ್ನು ಆರೋಪ ಮುಕ್ತಗೊಳಿಸಿದ ಸಿಬಿಐ

ಪ್ರಸ್ತುತ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನಲ್ಲಿ (ಸಿಆರ್‌ಪಿಎಫ್) ನೇಮಕಗೊಂಡಿರುವ ವರ್ಮಾ ಅವರು ಕೇಂದ್ರದ ವಜಾ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 1986 ಬ್ಯಾಚ್ ಅಧಿಕಾರಿಯನ್ನು ಸೆಪ್ಟೆಂಬರ್ 30 ರಂದು ಕಡ್ಡಾಯವಾಗಿ ನಿವೃತ್ತಿ ಮಾಡಲಾಗಿದೆ. ಆಗಸ್ಟ್ 30 ರಂದು, ಅವರ ವಿರುದ್ಧ ಇಲಾಖಾ ಪ್ರಕ್ರಿಯೆಗಳ ದೃಷ್ಟಿಯಿಂದ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕೇಂದ್ರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ವರ್ಮಾ ಅವರನ್ನು ಯಾವಾಗ ಸೇವೆಯಿಂದ ವಜಾಗೊಳಿಸಲಾಯಿತು ಎಂಬುದು ಸ್ಪಷ್ಟವಾಗಿಲ್ಲ.

Follow Us:
Download App:
  • android
  • ios