Asianet Suvarna News Asianet Suvarna News

ಇಶ್ರಾತ್ ಜಹಾನ್ ಪ್ರಕರಣ: ಗುಜರಾತ್ ಮಾಜಿ ಡಿಜಿಪಿಯನ್ನು ಆರೋಪ ಮುಕ್ತಗೊಳಿಸಿದ ಸಿಬಿಐ

2004ರಲ್ಲಿ ಇಶ್ರಾತ್ ಜಹಾನ್ ನಕಲಿ ಎನ್'ಕೌಂಟರ್ ಆರೋಪದಲ್ಲಿ ಬಂಧಿಸಲಾಗಿತ್ತು. ಇವರ ವಿರುದ್ಧ ಅಪಹರಣ ಹಾಗೂ ಕೊಲೆಗೆ ಯಾವುದೇ ಸಾಕ್ಷಾಧಾರವಿರದ ಕಾರಣ  ಬಂಧನಮುಕ್ತಗೊಳಿಸಲಾಗಿದೆ.

CBI court discharges former Gujarat cop PP Pandey

ಅಹಮದಾಬಾದ್(ಫೆ.21): ನಕಲಿ ಎನ್'ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಗುಜರಾತ್'ನ ಮಾಜಿ ಡಿಜಿಪಿ ಪಿಪಿ ಪಾಂಡೆ ಹಾಗೂ ಇತರ ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

2004ರಲ್ಲಿ ಇಶ್ರಾತ್ ಜಹಾನ್ ನಕಲಿ ಎನ್'ಕೌಂಟರ್ ಆರೋಪದಲ್ಲಿ ಬಂಧಿಸಲಾಗಿತ್ತು. ಇವರ ವಿರುದ್ಧ ಅಪಹರಣ ಹಾಗೂ ಕೊಲೆಗೆ ಯಾವುದೇ ಸಾಕ್ಷಾಧಾರವಿರದ ಕಾರಣ  ಬಂಧನಮುಕ್ತಗೊಳಿಸಲಾಗಿದೆ.

ವಿಚಾರಣೆ ನಡೆಸಿದ ವಿಶೇಷ ಸಿಬಿಐ ಕೋರ್ಟ್'ನ ನ್ಯಾಯಾಧೀಶ ಜೆಕೆ ಪಾಂಡ್ಯ, ವಿವಿಧ ತನಿಖಾ ಸಂಸ್ಥೆಗಳು ಹಲವು ಸಾಕ್ಷಧಾರಗಳನ್ನು ನೀಡಿದ್ದು ಯಾವುವು ದ್ವಂದ್ವದಿಂದ ಕೂಡಿದೆ. ಅಲ್ಲದೆ ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ'ಎಂದು ತಿಳಿಸಿದ್ದಾರೆ.

2004ರಲ್ಲಿ  19 ವರ್ಷದ ಕಾಲೇಜು ವಿದ್ಯಾರ್ಥಿನಿ ಹಾಗೂ ಈಕೆಯ ನಾಲ್ವರು ಸ್ನೇಹಿತೆಯರನ್ನು ನಕಲಿ ಎನ್ ಕೌಂಟರ್'ನಲ್ಲಿ ಪೊಲೀಸ್ ಅಧಿಕಾರಿಗಳು ಹತ್ಯೆ ಮಾಡಲಾಗಿತ್ತು.

Follow Us:
Download App:
  • android
  • ios