Asianet Suvarna News Asianet Suvarna News

ಸರಬ್ಜಿತ್ ಸಿಂಗ್ ಬಿಡುಗಡೆಗೆ ಹೋರಾಡಿದ್ದ ಸಹೋದರಿ ದಲ್ಬಿರ್ ಕೌರ್ ನಿಧನ

ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿದ್ದ ಸರಬ್ಜಿತ್ ಸಿಂಗ್‌ ಬಿಡುಗಡೆಗೆ ಹೋರಾಡಿದ್ದ ಅವರ ಸಹೋದರಿ ದಲ್ಬೀರ್‌ ಕೌರ್ ನಿಧನರಾಗಿದ್ದಾರೆ. ಭಾರತ ಪರ ಪಾಕಿಸ್ತಾನದಲ್ಲಿ ಗೂಢಾಚಾರ ಮಾಡಿದ ಆರೋಪದ ಮೇಲೆ ಪಾಕ್‌ನಲ್ಲಿ ಸರಬ್ಜಿತ್ ಸಿಂಗ್‌ ಸೆರೆಯಾಗಿ ಜೈಲಿನಲ್ಲಿದ್ದರು.

Sarabjit Singh sister Dalbir Kaur dies in Amritsar akb
Author
Bangalore, First Published Jun 26, 2022, 1:39 PM IST

ಕರಾಚಿ: ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿದ್ದ ಸರಬ್ಜಿತ್ ಸಿಂಗ್‌ ಬಿಡುಗಡೆಗೆ ಹೋರಾಡಿದ್ದ ಅವರ ಸಹೋದರಿ ದಲ್ಬೀರ್‌ ಕೌರ್ ನಿಧನರಾಗಿದ್ದಾರೆ. ಭಾರತ ಪರ ಪಾಕಿಸ್ತಾನದಲ್ಲಿ ಗೂಢಾಚಾರ ಮಾಡಿದ ಆರೋಪದ ಮೇಲೆ ಪಾಕ್‌ನಲ್ಲಿ ಸರಬ್ಜಿತ್ ಸಿಂಗ್‌ ಸೆರೆಯಾಗಿ ಜೈಲಿನಲ್ಲಿದ್ದರು. ಅವರ ಬಿಡುಗಡೆಗಾಗಿ ಸಹೋದರಿ ದಲ್ಬೀರ್ ಕೌರ್ ಭಾರಿ ಹೋರಾಟ ನಡೆಸಿದ್ದರು. ಆದಾಗ್ಯೂ ಬಿಡುಗಡೆಗೆ ಮುನ್ನವೇ  ಸರಬ್ಜಿತ್ ಸಿಂಗ್‌ ಪಾಕಿಸ್ತಾನದ ಜೈಲಿನಲ್ಲೇ ಸಾವಿಗೀಡಾಗಿದ್ದರು. 

1991 ರಲ್ಲಿ ಪಾಕಿಸ್ತಾನದ ನ್ಯಾಯಾಲಯವು ಗೂಢಚಾರಿಕೆ ಮಾಡಿದ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಸರಬ್ಜಿತ್ ಸಿಂಗ್ ಅವರನ್ನು ಗುರಿ ಜೈಲು ಶಿಕ್ಷೆ ವಿಧಿಸಿತ್ತು. ನಂತರ 2013ರಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಕೈದಿಗಳು ಹೊಡೆದಿದ್ದರಿಂದ ಉಂಟಾದ ಗಾಯಗಳಿಂದ ಸರಬ್ಜಿತ್ ಸಿಂಗ್ ನಿಧನರಾಗಿದ್ದರು.

ಸರಬ್ಜಿತ್ ಸೋದರಿ ಬಿಜೆಪಿಗೆ ಸೇರ್ಪಡೆ

ಈಗ ಸಹೋದರಿ ದಲ್ಬೀರ್‌ ಕೌರ್ ನಿಧನರಾಗಿದ್ದಾರೆ. ಆಕೆಯ ಕುಟುಂಬದ ಪ್ರಕಾರ, ಶನಿವಾರ ರಾತ್ರಿ, ತೀವ್ರ ಎದೆನೋವು ಎಂದು ಹೇಳಿದ ನಂತರ ಕುಟುಂಬದವರು ಅವರನ್ನು ಅಮೃತಸರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ದಲ್ಬೀರ್ ಕಳೆದ ಒಂದು ವರ್ಷದಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು ಎಂದು ಸರಬ್ಜಿತ್ ಸಿಂಗ್ (Sarabjit Singh) ಅವರ ಪುತ್ರಿ ಪೂನಂ (Poonam) ಹೇಳಿದ್ದಾರೆ.

 

ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಆಕೆಯ ಸ್ಥಿತಿಯ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ವಿವರಿಸಿದರು. ನಂತರ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿದ್ದರು. ಅಲ್ಲಿ ಕೆಲವು ನಿಮಿಷಗಳ ಬಳಿಕ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ನಂತರ ಅವರು ಸಾವನ್ನಪ್ಪಿದ್ದಾರೆ. ಆಕೆಯ ಅಂತ್ಯಕ್ರಿಯೆಯನ್ನು ಇಂದು ಪಂಜಾಬ್‌ನ (Punjab) ಭಿಖಿವಿಂಡ್‌ನಲ್ಲಿ (Bhikhiwind) ನಡೆಸಲಾಗುವುದು.

ಸರಬ್ಜಿತ್ ಪ್ರಕರಣದ ಖ್ಯಾತ ವಕೀಲ ಅವೈಸ್ ಶೇಖ್ ನಿಧನ
 

22 ವರ್ಷಗಳ ಕಾಲ ಪಾಕ್‌ ಜೈಲಿನಲ್ಲಿದ್ದ ಸರಬ್ಜಿತ್ ಅವರ ಬಿಡುಗಡೆಗೆ ಅವರ ಅಕ್ಕ ದಲ್ಬೀರ್ ಕೌರ್ ತೀವ್ರ ಹೋರಾಟ ನಡೆಸಿದ್ದರು. ದಲ್ಬೀರ್ ಕೌರ್ ಯಾವಾಗಲೂ ತನ್ನ ಸಹೋದರ ಸರಬ್ಜಿತ್‌ ಸಿಂಗ್ ನಿರಪರಾಧಿ, ಆತ ಸೆರೆಹಿಡಿಯಲ್ಪಟ್ಟಾಗ ತಪ್ಪಾಗಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ ಎಂದು ಹೇಳುತ್ತಿದ್ದರು. ಅಲ್ಲದೇ ಒಮ್ಮೆ ಪಾಕಿಸ್ತಾನದಲ್ಲಿರುವ ಸಹೋದರನನ್ನು ಭೇಟಿಯಾಗಿದ್ದರು.
 

Follow Us:
Download App:
  • android
  • ios