ಸರಬ್ಜಿತ್ ಪ್ರಕರಣದ ಖ್ಯಾತ ವಕೀಲ ಅವೈಸ್ ಶೇಖ್ ನಿಧನ

First Published 20, Mar 2018, 2:10 PM IST
Sarabjit lawyer Awais Sheikh passes away in Sweden have lost second brother says Dalbir Kaur
Highlights

ಪಾಕಿಸ್ತಾನ ಖ್ಯಾತ ವಕೀಲ ಅವೈಸ್ ಶೇಖ್ ಇಂದು ನಿಧನ ಹೊಂದಿದ್ದಾರೆ. 2013 ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟಿರುವ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಪ್ರಕರಣದ ಪರ ಅವೈಸ್ ಶೇಖ್ ವಕೀಲರಾಗಿದ್ದರು. 

ನವದೆಹಲಿ (ಮಾ. 20): ಪಾಕಿಸ್ತಾನ ಖ್ಯಾತ ವಕೀಲ ಅವೈಸ್ ಶೇಖ್ ಇಂದು ನಿಧನ ಹೊಂದಿದ್ದಾರೆ. 2013 ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟಿರುವ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಪ್ರಕರಣದ ಪರ ಅವೈಸ್ ಶೇಖ್ ವಕೀಲರಾಗಿದ್ದರು. 

ಪಂಜಾಬ್ ಪ್ರಾಂತ್ಯದಲ್ಲಿ 1990 ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 14  ಪಾಕಿಸ್ತಾನಿಯರನ್ನು ಹತ್ಯೆ ಮಾಡಿರುವ ಆರೋಪದಡಿಯಲ್ಲಿ ಸರಬ್ಜಿತ್ ಸಿಂಗ್’ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇವರ ಮೇಲೆ ಜೈಲಿನ ಕೈದಿಗಳೇ ದಾಳಿ ಮಾಡಿ ಸಾಯಿಸಿದ್ದರು. ಸರಬ್ಜಿತ್ ಪರ ಅವೈಸ್ ವಾದ ಮಂಡಿಸಿದ್ದರು. 
 

loader