Drugs Case: ವಾಂಖೆಡೆಗೆ ಕೊಕ್, 6 ಡ್ರಗ್ಸ್ ಪ್ರಕರಣಗಳ ತನಿಖೆ ನಡೆಸ್ತಾರೆ ಸಂಜಯ್ ಸಿಂಗ್!

* ಆರ್ಯನ್‌ ಖಾನ್‌ ಕೇಸ್‌ನಿಂದ ಅಮೀರ್ ವಾಂಖೆಡೆ ಔಟ್

* ಆರ್ಯನ್ ಖಾನ್ ಕೆಸ್ ಸೇರಿ 6 ಡ್ರಗ್ಸ್ ಕೆಸ್‌ ತನಿಖೆ ಈಗ ಸಂಜಯ್ ಸಿಂಗ್‌ ಹೆಗಲಿಗೆ

* ಯಾರು ಈ ಐಪಿಎಸ್‌ ಅಧಿಕಾರಿ ಸಂಜಯ್ ಸಿಂಗ್?

Sanjay Singh Officer Who Takes Over 6 Drugs Cases From Sameer Wankhede pod

ಮುಂಬೈ(ನ.06): ಸಮೀರ್ ವಾಂಖೆಡೆ ಬದಲಿಗೆ 6 ಡ್ರಗ್ಸ್ ಪ್ರಕರಣಗಳ ತನಿಖೆಯನ್ನು ದೆಹಲಿಯ ಎನ್‌ಸಿಬಿ ಅಧಿಕಾರಿ ಸಂಜಯ್ ಸಿಂಗ್  (IPS Sanjay Singh) ಅವರಿಗೆ ವಹಿಸಲಾಗಿದೆ. ಈ ಹಿಂದೆ, ಸಂಜಯ್ ಸಿಂಗ್ ಅವರು ಕೇಂದ್ರೀಯ ತನಿಖಾ ದಳದಲ್ಲಿ (CBI) ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಕೆಲಸ ಮಾಡಿದ್ದಾರೆ. ಸಂಜಯ್ ಕುಮಾರ್ ಸಿಂಗ್ ಮುಂಬೈ, 1996 ರ ಬ್ಯಾಚ್ ಒಡಿಶಾ ಕೇಡರ್ IPS ಅಧಿಕಾರಿ, ಪ್ರಸ್ತುತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನ ಡೆಪ್ಯುಟಿ ಡೈರೆಕ್ಟರ್ ಜನರಲ್ (Operation) ಆಗಿದ್ದಾರೆ. ಅವರು ಒಡಿಶಾ ಕಮಿಷನರೇಟ್‌ನಲ್ಲಿ ಡ್ರಗ್ ವಿರೋಧಿ ಕಾರ್ಯಪಡೆಯ ಮುಖ್ಯಸ್ಥರಾಗಿದ್ದಾರೆ. ಭ್ಯವಾದ ಮಾಹಿತಿ ಅನ್ವಯ, ಸಂಜಯ್ ಸಿಂಗ್ ಅವರಿಗೆ ತನಿಖೆಯನ್ನು ವಹಿಸಲಾಗಿದೆ ಪ್ರಕರಣಗಳಲ್ಲಿ ಆರ್ಯನ್ ಖಾನ್ ಪ್ರಕರಣ ಮತ್ತು ಇತರ 5 ಸೂಕ್ಷ್ಮ ಪ್ರಕರಣಗಳು ಸೇರಿವೆ, ಇದು ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ.

ಮುಂಬೈನ ಕ್ರೂಜ್‌ನಿಂದ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕರ, ವಾಂಖೆಡೆ ನಿರಂತರವಾಗಿ ಚರ್ಚೆಯಲ್ಲಿದ್ದಾರೆ ಎಂಬುವುದು ಉಲ್ಲೇಖನೀಯ. ಇನ್ನು ಆಡಳಿತಾರೂಢ ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರು ಎನ್‌ಸಿಬಿಯ ವಲಯ ನಿರ್ದೇಶಕರು ಬಾಲಿವುಡ್ ಮತ್ತು ಮಹಾರಾಷ್ಟ್ರದ ಪ್ರತಿಷ್ಠೆಯನ್ನು ಕೆಡಿಸಲು ಸಮೀರ್ ವಾಂಖೆಡೆ (Sameer Wankhede) ಸುಳ್ಳು ಪ್ರಕರಣಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅದೇ ವೇಳೆ, ನನ್ನನ್ನು ತನಿಖೆಯಿಂದ ತೆಗೆದುಹಾಕಲಾಗಿಲ್ಲ ಎಂದು ವಾಂಖೆಡೆ ಸುದ್ದಿ ಸಂಸ್ಥೆ ಎನ್‌ಐಗೆ ತಿಳಿಸಿದ್ದಾರೆ. ಈ ವಿಷಯವನ್ನು ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬುದು ನ್ಯಾಯಾಲಯದಲ್ಲಿ ನನ್ನ ರಿಟ್ ಅರ್ಜಿಯಾಗಿತ್ತು. ಆದ್ದರಿಂದ ಆರ್ಯನ್ (Aryan Khan) ಪ್ರಕರಣ ಮತ್ತು ಸಮೀರ್ ಖಾನ್ ಪ್ರಕರಣವನ್ನು ದೆಹಲಿ ಎನ್‌ಸಿಬಿಯ ವಿಶೇಷ ತನಿಖಾ ತಂಡವು ತನಿಖೆ ನಡೆಸುತ್ತಿದೆ. ಇದು ದೆಹಲಿ ಮತ್ತು ಮುಂಬೈನ NCB ತಂಡಗಳ ನಡುವಿನ ಸಮನ್ವಯವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅದೇ ವೇಳೆ, ಸಂಜಯ್ ಸಿಂಗ್ ಸಹಿ ಮಾಡಿದ ಹೇಳಿಕೆಯಲ್ಲಿ, ಎನ್‌ಸಿಬಿಯ ಯಾವುದೇ ಅಧಿಕಾರಿಯನ್ನು ಅವರ ಪ್ರಸ್ತುತ ಹುದ್ದೆಯಿಂದ ತೆಗೆದುಹಾಕಿಲ್ಲ ಎಂದು ಹೇಳಿದೆ. ಎಎನ್‌ಐ ಟ್ವೀಟ್ ಮಾಡಿರುವ ಹೇಳಿಕೆಯಲ್ಲಿ ಎನ್‌ಸಿಬಿ, "ನಿರ್ದಿಷ್ಟ ಆದೇಶ ಹೊರಡಿಸುವವರೆಗೆ, ಅವರು ತನಿಖೆಯಲ್ಲಿ ಆಪರೇಷನ್ ವಿಭಾಗಕ್ಕೆ ಸಹಾಯ ಮಾಡುವುದನ್ನು ಮುಂದುವರಿಸುತ್ತಾರೆ. ಎನ್‌ಸಿಬಿ ಭಾರತದಾದ್ಯಂತ ಏಕೀಕೃತ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ." ಎಂದು ಹೇಳಲಾಗಿದೆ.

ಆರ್ಯನ್ ಖಾನ್ ಪ್ರಕರಣ:

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅಕ್ಟೋಬರ್ ಮೊದಲ ವಾರದಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಾಗಿದ್ದರು. ಮುಂಬೈನ ಕರಾವಳಿ ತೀರದಿಂದ ಗೋವಾಗೆ ಹೊರಟ್ಟಿದ್ದ ಕ್ರ್ಯೂಸ್ ಹಡಗಿನಲ್ಲಿ ಮಾದಕ ದ್ರವ್ಯಗಳು ಬಳಕೆ ಹಾಗೂ ಪೂರೈಕೆಯಾಗುತ್ತಿದೆ ಅನ್ನೋ ಮಾಹಿತಿ ಪಡೆದ ಮುಂಬೈ NCB ಅಧಿಕಾರಿಗಲು ಮುಫ್ತಿಯಲ್ಲಿ ದಾಳಿ ಮಾಡಿದ್ದರು. ಪಾರ್ಟಿ ನಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ದಮೇಚಾ ಸೇರಿದಂತೆ ಹಲವರನ್ನು ಬಂಧಿಸಿದ್ದರು.

ಸತತ 27 ದಿನ ಶಾರುಖ್ ಕುಟುಂಬ ಆರ್ಯನ್ ಖಾನ್ ಜಾಮೀನಿಗಾಗಿ ಹೋರಾಟ ನಡೆಸಿದ್ದರು.  ಕೊನೆಗೆ ಮಾಜಿ ಅಟಾರ್ನಿ ಜನರಲ್ ಮಕುಲು ರೋಹ್ಟಗಿ ಆರ್ಯನ್ ಖಾನ್ ಪರ ವಾದ ಮಂಡಿಸಿದ್ದರು. ಮುಂಬೈ ಸೆಷನ್ ಕೋರ್ಟ್‌ನಲ್ಲಿ ಜಾಮೀನು ಸಿಗದ ಕಾರಣ, ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ರೋಹ್ಟಗಿ ವಾದ ಮಂಡನೆಯಿಂದ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಇದರ ನಡುವೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ NCB ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸತತ ಆರೋಪಗಳನ್ನು ಮಾಡಿದ್ದರು. 

Latest Videos
Follow Us:
Download App:
  • android
  • ios