Asianet Suvarna News Asianet Suvarna News

ಪುನೀತ್ ರಾಜ್‌ಕುಮಾರ್ ಅಗಲಿಕೆ ತಂದ ಆಘಾತ, ಮೋದಿ ಸೇರಿ ಗಣ್ಯರ ಸಂತಾಪ; ಅ.29ರ ಟಾಪ್ 10 ಸುದ್ದಿ!

ಸ್ಯಾಂಡಲ್‌ವುಟ್ ನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ಇಡೀ ಭಾರತವೇ ಬೆಚ್ಚಿಬಿದ್ದಿದೆ. ಕುಟುಂಬ, ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದಾ ಲವಲವಿಕೆ, ನಗು ಮುಖದಿಂದ ಇರುವ ಪುನೀತ್ ಸಾವು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಅಪ್ಪು ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಭಾರತ ಚಿತ್ರರಂಗ ಸೇರಿದಂತ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಕುರಿತ ಟಾಪ್ 10 ಸುದ್ದಿ ಇಲ್ಲಿವೆ.

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm
Author
Bengaluru, First Published Oct 29, 2021, 5:59 PM IST
  • Facebook
  • Twitter
  • Whatsapp

Puneeth Rajkumar Death: ಪಿಎಂ ಮೋದಿ, ಸಚಿವ ರಾಜೀವ್ ಚಂದ್ರಶೇಖರ್ ಸೇರಿ ಹಲವು ರಾಜ್ಯಗಳ ಸಿಎಂಗಳ ಕಂಬನಿ

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್ ಕುಮಾರ್(Puneeth Rajkumar) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಟನ ಅಗಲಿಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಟ್ವೀಟ್ ಮಾಡಿದ್ದರು. ಅದೇ ರೀತಿ ನೆರೆ ರಾಜ್ಯ ತಮಿಳುನಾಡು ಹಾಗೂ ಕೇರಳದ(Kerala) ಸಿಎಂ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Puneeth Rajkumar Death ನಮ್ಮನ್ನು ಅಗಲಿದ ಪ್ರೀತಿಯ ರಾಜಕುಮಾರ

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಸ್ಯಾಂಡಲ್‌ವುಡ್(Sandalwood) ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ(Death). 46 ವರ್ಷದ ನಟ ತಮ್ಮ ಮನೆಯಲ್ಲಿ ಜಿಮ್(Gym) ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿತ್ತು.

Puneeth Rajkumar Death: ನಟ ಪುನೀತ್‌ ರಾಜ್‌ಕುಮಾರ್ ಕೊನೆಯದಾಗಿ ಹಂಚಿಕೊಂಡ ಪೋಸ್ಟ್, ಮಾತುಗಳಿವು!

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಕನ್ನಡ ಚಿತ್ರರಂಗದ (Sandalwood) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಇನ್ನಿಲ್ಲ ಎಂದು ಸುದ್ದಿ ಕೇಳಿ ಬರುತ್ತಿದ್ದಂತೆ, ಇಡೀ ಕರ್ನಾಟಕವೇ ಶಾಕ್‌ನಲ್ಲಿದೆ. ನಟನಾಗಿ, ನಿರ್ಮಾಪಕನಾಗಿ (Producer), ಅತ್ಯುತ್ತಮ ಡ್ಯಾನ್ಸರ್ ಆಗಿ, ಒಳ್ಳೆಯ ಸ್ನೇಹಿತನಾಗಿ ಚಿತ್ರರಂಗದ ಪ್ರತಿಯೊಬ್ಬರ ಜೊತೆಯೂ ಉತ್ತಮ ಸಂಬಂಧ ಹೊಂದಿದ್ದ ಅಪ್ಪು ಸೋಷಿಯಲ್ ಮೀಡಿಯಾದಲ್ಲಿ ಕೊನೆಯದಾಗಿ ಹಂಚಿಕೊಂಡ ಪೋಸ್ಟ್ ಅವರು ನಿರ್ಮಾಣ ಮಾಡುತ್ತಿರುವ ವೈಲ್ಡ್‌ ಲೈಫ್‌ (WildLife) ಸಿನಿಮಾ ಗಂಧದಗುಡಿ ಬಗ್ಗೆ.

Puneeth RajKumar Death: ಒಂದೂವರೆ ವರ್ಷದಲ್ಲಿ ಮೂವರು ನಟರನ್ನು ಕಳೆದುಕೊಂಡ ಸ್ಯಾಂಡಲ್‌ವುಡ್

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಇತ್ತೀಚಿನ ದಿನಗಳಲ್ಲಿ ಯುವಜನರು ಅಕಾಲಿಕವಾಗಿ ಸಾವನ್ನಪ್ಪುವ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಚಿತ್ರರಂಗವೂ(Cinema Industry) ಹೊರತಲ್ಲ. ಇಡೀ ದೇಶದಲ್ಲಿಯೂ ಬಹಳಷ್ಟು ಪ್ರತಿಭಾನ್ವಿತ ನಟರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರಗಾಗಿಲ್ಲ. ಸ್ಯಾಂಡಲ್‌ವುಡ್(Sandalwood) ಕಳೆದ ಒಂದೂವರೆ ವರ್ಷದಲ್ಲಿ ಮೂವರು ಪ್ರತಿಭಾನ್ವಿತ ನಟರನ್ನು ಕಳೆದುಕೊಂಡಿದೆ. ಹೃದಯಾಘಾತದಿಂದ ಸಾವನ್ನಪ್ಪಿದ್ದ ಚಿರಂಜೀವಿ ಸರ್ಜಾ, ಅಪಘಾತದಲ್ಲಿ ಅಗಲಿದ ಸಂಚಾರಿ ವಿಜಯ್ ಈಗ ಪುನೀತ್ ಅವರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪತ್ನಿ ಆಶ್ವಿನಿ ಅವರನ್ನು ಭೇಟಿಯಾದ ಕ್ಷಣದ ಬಗ್ಗೆ ಹಂಚಿಕೊಂಡ Puneeth Rajkumar!

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಕನ್ನಡ ಚಿತ್ರರಂಗದ ಜಾಕಿ, ಹುಡುಗಿಯರ ಮನಸ್ಸು ಕದ್ದ ರಾಮ್ ಇನ್ನಿಲ್ಲ ಎಂದು ಈಗಲೂ ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗದ ಆಪ್ತರಿಗೆ ಮತ್ತು ಕುಟುಂಬಸ್ತರಿಗೆ ಸಿಹಿಸಿಕೊಳ್ಳಲಾಗುತ್ತಿಲ್ಲ. ವೃತ್ತಿ ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿರಲಿ, ಫ್ಯಾಮಿಲಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಫ್ಯಾಮಿಲಿ ಮುಖ್ಯ ಎಂದು ಸದಾ ಹೇಳುತ್ತಿದ್ದ ಪುನೀತ್ ರಾಜ್‌ಕುಮಾರ್ 2019ರಲ್ಲಿ ತಮ್ಮ ನಟಸಾರ್ವಭೌಮ ಸಿನಿಮಾ ಯಶಸ್ಸಿನ ಕಾರ್ಯಕ್ರಮದಲ್ಲಿ ಸಹೋದದರ ಬಗ್ಗೆ ಮತ್ತು ಪತ್ನಿ ಬಗ್ಗೆ ಮಾತನಾಡಿದ್ದರು.  

Puneeth Rajkumar Death: ಹಾಡಿನಿಂದ ಬರ್ತಿದ್ದ ಹಣವೆಲ್ಲ ದಾನಕ್ಕೆ ಬಳಸ್ತಿದ್ದ ಅಪ್ಪು

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಸ್ಯಾಂಡಲ್‌ವುಡ್ ಪವರ್‌ ಸ್ಟಾರ್ ನಟ ಮಾತ್ರವಲ್ಲ, ಅದ್ಭುತ ಗಾಯಕರೂ ಆಗಿದ್ದರು. ಹಲವು ಸಿನಿಮಾಗಳಿಗೆ ಹಾಡಿದ್ದ ಅಪ್ಪು ನಟನೆಯ ಜೊತೆ ಹಾಡನ್ನೂ ಜನರು ಮೆಚ್ಚುತ್ತಿದ್ದರು. ಅದ್ಭುತ ಅರ್ಥಪೂರ್ಣ ಹಾಡುಗಳನ್ನು ಸ್ಯಾಂಡಲ್‌ವುಡ್‌ಗೆ ಕೊಟ್ಟ ಕೀರ್ತಿ ಪುನೀತ್‌ಗೆ ಸಲ್ಲುತ್ತದೆ. ತಂದೆಯಂತೆಯೇ ಸುಂದರವಾಗಿ ಹಾಡುತ್ತಿದ್ದರು ನಟ.

ಪುನೀತ್ ರಾಜ್‌ಕುಮಾರ್ ನಿಧನ: ಮದ್ಯ ಮಾರಾಟ ನಿಷೇಧ

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಚಂದನವನದ ಯುವರತ್ನ, ದೊಡ್ಮನೆಯ ಕಿರಿಯ ಕುಡಿ ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನ ಹಿನ್ನೆಲೆಯಲ್ಲಿ ಮದ್ಯ (Liquor)ಮಾರಾಟ ನಿಷೇಧಿಸಲಾಗಿದೆ.

'ಯುವರತ್ನ'ನಾಗಿಯೇ ಅಗಲಿದ ಅಪ್ಪು, 'ಜೇಮ್ಸ್‌'ಗೆ ವಿಧಿ ಕೊಟ್ಟಿಲ್ಲ ಚಾನ್ಸ್

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಪುನೀತ್ ರಾಜ್‌ ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್‌'. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೆ ಪುನೀತ್ ನಿಧನ ಬೇಸರ ತರಿಸಿದೆ. ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದರು. 

'Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ವೃತ್ತಿ ಜೀವನ (Career) ಆರಂಭಿಸಿದ ಸಮಯದಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಕೊರೋನಾ ಲಾಕ್‌ಡೌನ್‌ (Covid Lockdown) ಸಮಯದಲ್ಲಿ ಸರ್ಕಾರಕ್ಕೆ 50 ಲಕ್ಷ ನೀಡಿ ಜನರ ನೆರವಿಗೆ ನಿಂತ ಮುತ್ತು ರತ್ನ ಅಪ್ಪು. ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

Follow Us:
Download App:
  • android
  • ios