Asianet Suvarna News Asianet Suvarna News

ಪುನೀತ್ ರಾಜ್‌ಕುಮಾರ್ ನಿಧನ: ಮದ್ಯ ಮಾರಾಟ ನಿಷೇಧ

* ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ
* ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಮದ್ಯಮಾರಾಟ ನಿಷೇಧ
* ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ

Puneeth Rajukumar death liquor-sale Ban In bengaluru Till Oct 31rbj
Author
Bengaluru, First Published Oct 29, 2021, 5:20 PM IST
  • Facebook
  • Twitter
  • Whatsapp

ಬೆಂಗಳೂರು, (ಅ.29): ಚಂದನವನದ ಯುವರತ್ನ, ದೊಡ್ಮನೆಯ ಕಿರಿಯ ಕುಡಿ ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನ ಹಿನ್ನೆಲೆಯಲ್ಲಿ ಮದ್ಯ (Liquor)ಮಾರಾಟ ನಿಷೇಧಿಸಲಾಗಿದೆ.

ಹೌದು..ಬೆಂಗಳೂರು ನಗರದಲ್ಲಿ ತಕ್ಷಣವೇ ಜಾರಿಗೆ ಬರುವಂತೆ  ಅ.31ರ ಮಧ್ಯರಾತ್ರಿ ವರೆಗೆ  ಸಂಪೂರ್ಣವಾಗಿ ಮದ್ಯ ಮಾರಾಟ (Liquor Sale Ban) ನಿ‍ಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Pant) ಆದೇಶ ಹೊರಡಿಸಿದ್ದು,  ತತಕ್ಷಣವೇ ಜಾರಿಗೆ ಬರಲಿದೆ.

ಪತ್ನಿ ಆಶ್ವಿನಿ ಅವರನ್ನು ಭೇಟಿಯಾದ ಕ್ಷಣದ ಬಗ್ಗೆ ಹಂಚಿಕೊಂಡ Puneeth Rajkumar!

ನಗರಾದ್ಯಂತ 6 ಸಾವಿರ ಪೊಲೀಸರು, ಕೆಎಸ್ಆರ್‌ಪಿ KSRP ಪ್ಲಟೂನ್ ನಿಯೋಜನೆ ಮಾಡಲಾಗಿದ್ದು,  ಭಾನುವಾರ ಮಧ್ಯ ರಾತ್ರಿ ವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಷ್ಟೇ ಜನ ಬಂದ್ರೂ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತೆ. ಈ ಸಂದರ್ಭದಲ್ಲಿ ಕುಚೇಷ್ಟೇ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕಮಿಷನರ್ ಕಮಲ್ ಪಂಥ್ ಎಚ್ಚರಿಕೆ ಕೊಟ್ಟಿದ್ದಾರೆ.

ಪುನೀತ್ ಅವರ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಅವರ ಸದಾಶಿವ ನಗರ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರು ಪುನೀತ್ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು.

ಪುನೀತ್ ಅವರ ನಿವಾಸದ ಬಳಿ ಯಾರೂ ತೆರಳದಂತೆ ಸರಕಾರ ಮನವಿ ಮಾಡಿದ್ದು, ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗ ಬೇಡಿ. ಶಾಂತ ರೀತಿಯಲ್ಲಿ ಇರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಅಂತ್ಯಕ್ರಿಯೆ
 ಇಹಲೋಕ ತ್ಯಜಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ (ಶನಿವಾರ) ಸಂಜೆಯೊಳಗೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು(ಅ.29) ಸಂಜೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

 ಪುನೀತ್​ ಅವರ ದೊಡ್ಡ ದೃತಿ ಮಗಳು ಅಮೆರಿಕಾದಿಂದ ಬರಬೇಕಾಗಿದೆ. ಈ ಮಧ್ಯೆ, ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿಯ ಪುನೀತ್ ಫಾರ್ಮ್​ಹೌಸ್​ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಫಾರ್ಮ್​​ಹೌಸ್​ಗೆ ಸರ್ಕಾರ ಉನ್ನತ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. 

ರಾಮನಗರ ಎಸ್ ಪಿ ಗಿರೀಶ್, ಜಿಲ್ಲಾಧಿಕಾರಿ‌ ಡಾ. ರಾಕೇಶ್ ಕುಮಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಪುನೀತ್ ಫಾರ್ಮ್ ಹೌಸ್ ಗೆ ಭೇಟಿ ನೀಡಿ, ಅಪ್ಪು ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಹಿನ್ನೆಲೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ದೊಡ್ಮನೆ ಕುಟುಂಬ ಪುನೀತ್​ ರಾಜ್​ ಕುಮಾರ್ ಅವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ರಾಜ್ಯಾದ್ಯಂತ ಚಿತ್ರಪ್ರದರ್ಶನ ಬಂದ್
ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿತ್ರಪ್ರದರ್ಶನವನ್ನು ನಿಲ್ಲಿಸಲಾಗಿದೆ. ಈ ಕುರಿತು ಮೈಸೂರಿನಲ್ಲಿ ಕರ್ನಾಟಕದ ಚಲನಚಿತ್ರ ಪ್ರದರ್ಶಕರ ಮಹಾ ಮಂಡಲ್ ಉಪಾಧ್ಯಕ್ಷ ರಾಜಾರಾಮ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಪ್ರಾರಂಭವಾಗಿರುವ ಚಿತ್ರ ಪ್ರದರ್ಶನ ಮುಂದುವರೆಯುತ್ತಿವೆ. 2.30 ಶೋ ಹಾಗೂ 4.30ಯ ನಂತರದ ಶೋಗಳು ಕ್ಯಾನ್ಸಲ್ ಆಗಿವೆ. ಚಿತ್ರರಂಗ ಮೊದಲು ಈ ಶಾಕ್ ನಿಂದ ಹೊರ ಬರಬೇಕು. ಮುಂದೆ ಯಾವಾಗ ಚಿತ್ರ ಪ್ರದರ್ಶನ ಮಾಡಬೇಕು ನೋಡೋಣ. ಪುನೀತ್ ಜೊತೆ ನಾನು ಚಾಮುಂಡಿ ಬೆಟ್ಟ ಹತ್ತಿ ಇಳಿಯುತ್ತಿದ್ದೆ. ಅವರು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದರು. ಅವರಿಗೆ ಈ ರೀತಿ ಆಗಿರೊದು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios