Asianet Suvarna News Asianet Suvarna News

ಖಲಿಸ್ತಾನ ಉಗ್ರರಿಂದ ರೈತ ಪ್ರತಿಭಟನೆ ಹೈಜಾಕ್; ಎಚ್ಚರಿಕೆ ನೀಡಿದ ರೈತ ಮುಖಂಡನಿಗೆ ಗೇಟ್‌ಪಾಸ್!

  • ಕೇಂದ್ರ ಕೃಷಿ ಮಸೂದೆ ವಿರೋಧಿ ನಡೆಯುತ್ತಿರುವ ರೈತ ಪ್ರತಿಭಟನೆ
  • ಖಲಿಸ್ತಾನ ಹೈಜಾಕ್ ಮಾಡುತ್ತಿದೆ ಎಂದು ರೈತ ಮುಖಂಡನಿಂದ ಎಚ್ಚರಿಕೆ
  • ಎಚ್ಚರಿಕೆ ನೀಡಿದ ಮುಖಂಡನಿಗೆ ಗೇಟ್‌ಪಾಸ್ ನೀಡಿದ ಸಂಯುಕ್ತ ಕಿಸಾನ್ ಸಂಘಟನೆ
Samyukt Kisan Morcha suspend Kisan leader who spoke Khalistani infiltration into ongoing farmers protest ckm
Author
Bengaluru, First Published Jul 26, 2021, 3:47 PM IST

ಪಂಜಾಬ್(ಜು.26): ಕೇಂದ್ರದ ಕೃಷಿ ಕಾಯ್ದೆ ವಿರೋಧಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಖಲಿಸ್ತಾನ ಉಗ್ರರು ನಿಯಂತ್ರಿಸುತ್ತಿದ್ದಾರೆ ಅನ್ನೋ ಆರೋಪ ಹೋರಾಟದ ಆರಂಭದಿಂದಲೂ ಕೇಳಿಬರುತ್ತಿದೆ. ಇನ್ನು ಜನವರಿ 26ರಂದು ರೈತ ಸಂಘಟನೆಗಳು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಈ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಇದೀಗ ಈ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಪಂಜಾಬ್ ಕಿಸಾನ್ ಯೂನಿಯನ್ ಅಧ್ಯಕ್ಷ ಈ ಮಾತನ್ನು ಹೇಳಿದ್ದಾರೆ. ರೈತ ಪ್ರತಿಭಟನೆಯನ್ನು ಖಲಿಸ್ತಾನ ಉಗ್ರ ಸಂಘಟನೆ ಹೈಜಾಕ್ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ವಿಚಾರ ಬಹಿರಂಗ ಪಡಿಸಿದ ಮುಖಂಡನಿಗೆ ಸಂಯುಕ್ತ ಕಿಸಾನ್ ಮೋರ್ಚಾ ಗೇಟ್‌ಪಾಸ್ ನೀಡಿದೆ.

ರೈತರ ಚಕ್ಕಾ ಜಾಮ್ ಪ್ರತಿಭಟನೆ ನಡುವೆ ಹಾರಾಡಿತಾ ಖಲಿಸ್ತಾನ್ ಭಿಂದ್ರನ್‌ವಾಲೆ ಧ್ವಜ?

ಪಂಜಾಬ್ ಕಿಸಾನ್ ಯುನಿಯನ್ ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಕಳೆದ 9 ತಿಂಗಳಿನಿಂದಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕೇಂದ್ರದ ಕೃಷಿ ಮಸೂದೆ ರದ್ದು ಮಾಡಲು ಆಗ್ರಹಿಸಿದ್ದಾರೆ. ಇದೀಗ ರೈತ ಸಂಘಟನೆಗಳು ರಾಜ್ಯಗಳಲ್ಲಿ ತಮ್ಮ ಹೋರಾಟ ಚುರುಕುಗೊಳಿಸಲು ಅಗಸ್ಟ್ 15 ರಂದು ಟ್ರಾಕ್ಟರ್ ರ್ಯಾಲಿ ಆಯೋಜಿಸಿದೆ. ಈ ರ್ಯಾಲಿ ಕುರಿತು ಮಾತನಾಡಿದ ಪಂಜಾಬ್ ಕಿಸಾನ್ ಯುನಿಯನ್ ಅಧ್ಯಕ್ಷ ರುಲ್ಡು ಸಿಂಗ್ ಮಾನಸ, ಖಲಿಸ್ತಾನ ಆತಂಕ ವ್ಯಕ್ತಪಡಿಸಿದ್ದಾರೆ.

ರೈತ ಹೋರಾಟವನ್ನು ಖಲಿಸ್ತಾನ ಉಗ್ರ ಸಂಘಟನೆ ಹೈಜಾಕ್ ಮಾಡುವ ಆತಂಕವಿದೆ. ರ್ಯಾಲಿ ಆಯೋಜನೆ ಮೂಲಕ ಖಲಿಸ್ತಾನ ತನ್ನ ಉದ್ದೇಶ ಈಡೇರಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಖಲಿಸ್ತಾನ ರೈತ ಸಂಘಟನೆಯನ್ನು ಹೈಜಾಕ್ ಮಾಡಿದಂತೆ ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದೇ ವೇಳೆ ಖಲಿಸ್ತಾನ ಉಗ್ರ ಸಂಘಟನೆ ಮುಖಂಡ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆ ಸೇರಿದಂತೆ ಖಲಿಸ್ತಾನ ಉಗ್ರರು ವಿದೇಶದಲ್ಲಿ ಕುಳಿತು ಭಾರತದಲ್ಲಿ ದೇಶ ವಿರೋಧಿ ಚಟುವಟಿಕೆಗೆ ಸಂಚು ರೂಪಿಸುತ್ತಾರೆ ಎಂದು ಹರಿಹಾಯ್ದಿದ್ದರು.

ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ!

ರುಲ್ಡು ಸಿಂಗ್ ಹೇಳಿಕೆಗೆ ಪಂಜಾಬ್ ರೈತ ಸಂಘಟನೆಗಳ ಮೂಲ ಸಂಘಟನೆ ಸಂಯುಕ್ತ ಕಿಸಾನ್ ಗರಂ ಆಗಿದೆ. ಇಷ್ಟೇ ಅಲ್ಲ ರುಲ್ಡು ಸಿಂಗ್ ಮಾನಸರನ್ನು ಪಂಜಾಬ್ ಕಿಸಾನ್ ಯೂನಿಯನ್ ಅಧ್ಯಕ್ಷಸ್ಥಾನದಿಂದ ಕಿತ್ತೆಸೆದಿದೆ. 

ಕೃಷಿ ಮಸೂದೆ ವಿರುದ್ಧ ಹೋರಾಟ ಮಾಡುತ್ತಾ ದೆಹಲಿ, ಪಂಜಾಬ್‌ನಲ್ಲಿ ರೈತರನ್ನು ಸಂಘಟಿಸಿದ ರುಲ್ಡು ಸಿಂಗ್ ಆಂತರಿಕ ವಿಚಾರ ಬಹಿರಂಗಪಡಿಸಿದ ಕಾರಣಕ್ಕೆ ಸಂಘಟನೆಯಿಂದ ಕಿತ್ತೆಸೆಯಲಾಗಿದೆ. ರೈತ ಸಂಘಟನೆಗಳ ಈ ನಡೆ ಇದೀಗ ಹಲವು ಅನುಮಾನ ಮೂಡಿಸಿದೆ. ಇಷ್ಟೇ ಅಲ್ಲ ರೈತ ಸಂಘಟನೆಗಳ ಹೋರಾಟದ ಹಿಂದೆ ಖಲಿಸ್ತಾನ ಉಗ್ರ ಸಂಘಟನೆ ಕೈವಾಡದ ಶಂಕೆಗಳು ಬಲಗೊಳ್ಳುತ್ತಿದೆ.
 

Follow Us:
Download App:
  • android
  • ios