ನವದೆಹಲಿ(ಫೆ.06): ಶಾಂತಿಯುತ ರೈತರ ಹೋರಾಟಡ ನಡುವೆ ಸೇರಿಕೊಂಡ ಖಲಿಸ್ತಾನ ಸೇರಿದಂತೆ ಕೆಲ ಉಗ್ರಗಾಮಿ ಗುಂಪುಗಳು ಇದೀಗ ಭಾರತವನ್ನೇ ಒಡೆಯಲು ಯತ್ನಿಸುತ್ತಿದೆ. ದಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದೆ. ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ನಿಷೇಧಿತ ಸಿಖ್ ಉಗ್ರಗಾಮಿ ಸಂಘಟನೆಗೆ ಪಾಕಿಸ್ತಾನ ಬಹಿರಂಗ ಬೆಂಬಲ ಸೂಚಿಸಿದೆ. ಈ ವಿಡಿಯೋ ವೈರಲ್ ಆಗಿದೆ.

ರೈತರ ದಿಲ್ಲಿ ಹೋರಾಟದ ಹಿಂದೆ ಖಲಿಸ್ತಾನಿ ಪಾತ್ರ!...

ಈ ವಿಡಿಯೋ ಪಾಕಿಸ್ತಾನ ಖೈಬರ್ ಪಕ್ತುಂಕ್ವ ಪ್ರಾಂತ್ಯದಲ್ಲಿ ನಡೆದ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ.  ಪಾಕಿಸ್ತಾನದ ಯುವ ಸಂಸತ್ ಅಧ್ಯಕ್ಷ ಶಾಹ್ವೀರ್ ಸಿಯಾಲ್ವಿ ಭಾರತವನ್ನು ತುಂಡು ತುಂಡರಿಸಲು ಘೋಷಣೆ ನೀಡುತ್ತಿರುವ ದೃಶ್ಯವಿದೆ.  ಮೋದಿಗೆ ಕೇಳುವ ರೀತಿ ಹೇಳುತ್ತಿದ್ದೇನೆ ಪಾಕಿಸ್ತಾನ ಬಹಿರಂಗವಾಗಿ ಖಲಿಸ್ತಾನ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದೆ ಎಂದು ಶಾಹ್ವೀರ್ ಹೇಳಿದ್ದಾನೆ.

 

ಇಷ್ಟಕ್ಕೆ ಈತನ ಭಾಷನ ಮುಗಿದಿಲ್ಲ.ಹಿಂದೂಸ್ಥಾನ ತುಂಡು ತುಂಡಾಗಿ ಹೋಗಲಿದೆ. ಕಾಶ್ಮೀರ ಸ್ವತಂತ್ರವಾಗಲಿದೆ. ಹೈದರಾಬಾದ್ ಸ್ವತಂತ್ರವಾಗಲಿದೆ. ಜುನಘಡ ಸ್ವತಂತ್ರವಾಗಲಿದೆ. ಇದನ್ನು ನನಪಿಟ್ಟುಕೊಳ್ಳಿ ಖಲ್ಸಾ ಖಲಿಸ್ತಾನಕ್ಕೆ, ಕಾಶ್ಮೀರ ಪಾಕಿಸ್ತಾನಕ್ಕೆ. ಖಲಿಸ್ತಾನ ಹಾಗೂ ಪಾಕಿಸ್ತಾನ ಇಲ್ಲಿಂದ ಮೋದಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಘಂಟಾಘೋಷವಾಗಿ ಹೇಳಿದ್ದಾನೆ.

ಪಾಕಿಸ್ತಾನದ ಶಾಹ್ವೀರ್ ಜೊತೆ ಖಲಿಸ್ತಾನ ಸಂಘಟನೆ ಸಿಖ್ ನಾಯಕ ಎಲ್ಲದಕ್ಕೂ ಜೈ ಎಂದಿದ್ದಾನೆ. ಭಾರತ ತುಂಡರಿಸುವ ಘೋಷಣೆ ಸೇರಿದಂತೆ ಎಲ್ಲದ್ದಕ್ಕೂ ಚಪ್ಪಾಳೆ ಹೊಡೆದಿದ್ದಾನೆ. ಇದೀಗ ಖಲಿಸ್ತಾನ ರೈತ ಹೋರಾಟದ ನಡುವೆ ಸೇರಿಕೊಂಡು ವಿಶ್ವವನ್ನೇ ಭಾರತದ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸುತ್ತಿದೆ. ಇದರ ಒಂದು ಭಾಗವೇ ವಿದೇಶಿ ಸೆಲೆಬ್ರೆಟಿಗಳ ಟ್ವಿಟರ್ ವಾರ್ ಅನ್ನೋದು ಈಗಾಗಲೇ ಬಹಿರಂಗವಾಗಿದೆ.