ನವದೆಹಲಿ(ಫೆ.06): ರೈತ ಸಂಘಟನೆಗಳು ಕರೆ ನೀಡಿದ ಚಕ್ಕಾ ಜಾಮ್ ಪ್ರತಿಭಟನೆ ಅಂತ್ಯಗೊಂಡಿದೆ. ಇದೀಗ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದು, ಮತ್ತೊಂದು ಹೋರಾಟಕ್ಕೆ ಸಂಘಟನೆಗಳು ಸಜ್ಜಾಗುತ್ತಿದೆ. ಜನವರಿ 26ರ ಟ್ರಾಕ್ಟರ್ ಪರೇಡ್ ಪ್ರತಿಭಟನೆಗೆ ಹೋಲಿಸಿದರೆ, ಬಹುತೇಕ ಶಾಂತಿಯುತವಾಗಿದ್ದ ರೈತ ಪ್ರತಿಭಟನೆ ನಡುವೆ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಧ್ವಜ ಹಾರಾಡಿದೆ.

ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ!

ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ಚಕ್ಕಾ ಜಾಮ್ ಪ್ರತಿಭಟನೆಯಲ್ಲಿ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಭಾವಚಿತ್ರದ ಧ್ವಜ ಹಾರಾಡಿದೆ. ಟ್ರಾಕ್ಟರ್ ಮುಂಭಾಗದಲ್ಲಿ ಕಟ್ಟಿದ ಈ ಧ್ವಜದ ವಿಡಿಯೋವನ್ನು ಶೇರ್ ಮಾಡಿರುವ ಬಿಜೆಪಿ ವಕ್ತಾರ ಗೌರವ ಭಾಟಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಗೌರವ್ ಭಾಟಿಯಾ, ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ಗೆ ಪ್ರಶ್ನಿಸಿದ್ದಾರೆ. ರೈತ ಸಂಘಟನಗಳ ಹೋರಾಟವನ್ನು ಖಲಿಸ್ತಾನ್ ಹೈಜಾಕ್ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಇದೀಗ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಖಲಿಸ್ತಾನ ವಿರುದ್ಧ ತಿರಂಗ ರ‍್ಯಾಲಿ; ಭಾರತಕ್ಕೆ ಕೆನಡಾ ಸಿಖ್ ಸಮುದಾಯದ ಬೆಂಬಲ!.

1984ರಲ್ಲಿ ಇಂದಿರಾ ಗಾಂಧಿ ಸರ್ಕಾರ ನಡೆಸಿದ ಆಪರೇಶನ್ ಬ್ಲೂ ಸ್ಟಾರ್ ದಾಳಿಯಲ್ಲಿ ಇದೇ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಹತ್ಯೆ ಮಾಡಲಾಗಿತ್ತು. ಅಮೃತಸರ ಗೋಲ್ಡನ್ ಟೆಂಪಲ್ ಒಳಗಡೆ ಅಡಗಿ ಕುಳಿತಿದ್ದ ಖಲಿಸ್ತಾನ ಉಗ್ರ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಹಾಗೂ ಇತರ ಉಗ್ರರನ್ನು ಹತ್ಯೆ ಮಾಡಲಾಗಿತ್ತು.