Asianet Suvarna News Asianet Suvarna News

Hardship to homosexuals : ಸಲಿಂಗಿಗಳ ವಿವಾಹ ನೋಂದಣಿಗೆ ವಿರೋಧ: ದೆಹಲಿ ಹೈಕೋರ್ಟ್‌ನಲ್ಲಿಅರ್ಜಿ

 

  • ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗಿಗಳ ವಿವಾಹ ನೋಂದಣಿಗೆ ವಿರೋಧ
  • ದೆಹಲಿ ಹೈಕೋರ್ಟ್‌ನಲ್ಲಿ ಸಂಜೀವ್ ನೇವಾರ್‌, ಸ್ವಾತಿ ಗೋಯೆಲ್ ಶರ್ಮಾರಿಂದ ಅರ್ಜಿ ಸಲ್ಲಿಕೆ
  • ಮುಂದಿನ ವರ್ಷದ ಫೆಬ್ರವರಿ 3ರಂದು ವಿಚಾರಣೆ ನಿಗದಿಪಡಿಸಿದ ಕೋರ್ಟ್‌
Same sex marriages should be registered only under Special Marriage Act not Hindu Marriage Act akb
Author
Bangalore, First Published Dec 3, 2021, 2:44 PM IST

ನವದೆಹಲಿ(ಡಿ.3): ಸಲಿಂಗಿಗಳ ವಿವಾಹವನ್ನು ವಿಶೇಷ ವಿವಾಹ ಕಾಯ್ದೆ( Special Marriage Act)ಯಡಿ ಮಾತ್ರ ನೋಂದಾಯಿಸಬೇಕು, ಹಿಂದೂ ವಿವಾಹ ಕಾಯ್ದೆಯಡಿ ಇದಕ್ಕೆ ಅವಕಾಶ ನೀಡಬಾರದು ಎಂದು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಹಿಂದೂ ವಿವಾಹ ಕಾಯಿದೆ(Hindu Marriage Act)ಯು ವೇದಗಳು ಮತ್ತು ಉಪನಿಷತ್ತುಗಳಂತಹ ಹಿಂದೂ ಧಾರ್ವಿುಕ ಪಠ್ಯಗಳಿಂದ ನೇರವಾಗಿ ಹುಟ್ಟಿಕೊಂಡಿದೆ. ಅಲ್ಲಿ 'ಜೈವಿಕ ಪುರುಷ' ಮತ್ತು ಜೈವಿಕ ಹೆಣ್ಣಿನ ನಡುವೆ ಮಾತ್ರ ಮದುವೆ ನಡೆಯುವುದಕ್ಕೆ ಅನುಮತಿಸಲಾಗಿದೆ ಎಂದು ದೆಹಲಿ ಹೈಕೋರ್ಟ್‌(Delhi High Court)ಗೆ  ಸಲ್ಲಿಕೆಯಾದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಗಳ ನೋಂದಣಿ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಸೇವಾ ನ್ಯಾಯ್ ಉತ್ಥಾನ್ ಫೌಂಡೇಶನ್(Sewa Nyay Utthan Foundation) ಹೆಸರಿನ ಸಂಘಟನೆಗೆ ಸೇರಿದ ಸಂಜೀವ್ ನೇವಾರ್(Sanjeev Newar) ಮತ್ತು ಸ್ವಾತಿ ಗೋಯೆಲ್ ಶರ್ಮಾ(Swati Goel Sharma) ಅರ್ಜಿ ಸಲ್ಲಿಸಿದ್ದಾರೆ.  ಹಿಂದೂ ವಿವಾಹ ಕಾಯ್ದೆಯು ಧಾರ್ವಿುಕ ಪಠ್ಯಗಳಿಂದ ಹುಟ್ಟಿಕೊಂಡಿದೆ. ಇದರಡಿ ಪುರುಷ ಮತ್ತು ಮಹಿಳೆಯ ನಡುವಿನ ವಿವಾಹಕ್ಕೆ ಮಾತ್ರ ಅನುಮತಿ ಇದೆ. ಹೀಗಾಗಿ ವಿಶೇಷ ವಿವಾಹ ಕಾಯ್ದೆಯಂತಹ ಜಾತ್ಯಾತೀತ ಕಾನೂನುಗಳ ಅಡಿಯಲ್ಲಿ ಮಾತ್ರ ಸಲಿಂಗ ವಿವಾಹಗಳ ನೋಂದಣಿಗೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. 

30 ಲಕ್ಷ ಕೊಡಿ, ಇಲ್ಲದಿದ್ರೆ ಸೆಕ್ಸ್ ವಿಡಿಯೋ ಲೀಕ್: ಸಲಿಂಗಕಾಮಿ ಉದ್ಯಮಿಗೆ ಬೆದರಿಕೆ!

ದೇಶದಲ್ಲಿ ಸಲಿಂಗಿ ವಿವಾಹಗಳ ನೋಂದಣಿಗಾಗಿ ಹೈಕೋರ್ಟ್‌ನಲ್ಲಿ ಬಾಕಿ  ಇರುವ ಪ್ರಕರಣಗಳ ಬಗೆಗಿನ ಮಧ್ಯಸ್ಥಿಕೆ ಅರ್ಜಿಯಾಗಿ ಈ ಮನವಿಯನ್ನು ಸಲ್ಲಿಸಲಾಗಿದೆ.
ಈ ಅರ್ಜಿಯನ್ನು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಎನ್ .ಪಟೇಲ್(DN Patel) ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ( Justice Jyoti Singh) ಅವರಿದ್ದ  ವಿಭಾಗೀಯ ಪೀಠವು ಇಂದು ಆಲಿಸಿದ್ದು, ಇದೇ ರೀತಿಯ ವಿಷಯಗಳ ಪಟ್ಟಿಯೊಂದಿಗೆ ಈ ಅರ್ಜಿಯ ವಿಚಾರಣೆಯನ್ನು ಮುಂದಿನ ವರ್ಷದ ಫೆಬ್ರವರಿ 3ಕ್ಕೆ ನಿಗದಿಪಡಿಸಿತು. 

ಹಿಂದೂ ಧರ್ಮದ ಮೂಲ ಪುಸ್ತಕವೆನಿಸಿದ ವೇದಗಳ ಪ್ರಕಾರ ಕೆಲವು ಲೌಕಿಕ ಮತ್ತು ಧಾರ್ಮಿಕ ಕರ್ತವ್ಯಗಳನ್ನು ಪೂರೈಸಲು ಪುರುಷ ಮತ್ತು ಹೆಣ್ಣಿನ ನಡುವೆ ಮಾತ್ರ ಮದುವೆ ನಡೆಯುತ್ತದೆ. ವಾಸ್ತವವಾಗಿ, ಹಿಂದೂ ವಿವಾಹದ ಸಮಯದಲ್ಲಿ ಪಠಿಸುವ ಅಥವಾ ಮದುವೆಯ ಆಚರಣೆಯನ್ನು ವಿವರಿಸುವ ಹೆಚ್ಚಿನ ವೇದ ಮಂತ್ರಗಳು ಜೈವಿಕ ಪುರುಷ ಮತ್ತು ಒಂದು ಜೈವಿಕ ಹೆಣ್ಣಿಗೆ ಸಂಬಂಧಿಸಿದಾಗಿದೆ. ಇದು ಯಾವುದೇ ವ್ಯತ್ಯಾಸವಿಲ್ಲದೆ ಬಹುತೇಕ ಎಲ್ಲಾ ಹಿಂದೂ ಸಂಪ್ರದಾಯಗಳಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. 

ಸಲಿಂಗಿ ಮಗ, ಲಿಂಗ ಪರಿವರ್ತನೆ ಮಾಡಲು ಇಡೀ ಕುಟುಂಬವನ್ನು ಹತ್ಯೆಗೈದ!

ಹಿಂದೂಗಳ ಪ್ರಾಚೀನವಾದ ಯಾರಿಗೂ ತೊಂದರೆ ನೀಡದ ಈ ನಂಬಿಕೆಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಹಿಂದೂ ವಿವಾಹ ಕಾಯಿದೆಯೊಂದಿಗೆ ಇದನ್ನು ಸೇರಿಸುವ ಯತ್ನದಿಂದ ಹಿಂದೂಗಳ ಧಾರ್ಮಿಕ ಹಕ್ಕುಗಳಿಗೆ ಅಡ್ಡಿಯಾಗುತ್ತಿದೆ. ಈ ಸಲಿಂಗ ವಿವಾಹಗಳನ್ನು ವಿಶೇಷ ವಿವಾಹ ಕಾಯ್ದೆಯಂತಹ ಜಾತ್ಯತೀತ ಕಾನೂನುಗಳ ಅಡಿಯಲ್ಲಿ ಅಥವಾ  ಮುಸ್ಲಿಂ ವಿವಾಹ ಕಾನೂನು ಮತ್ತು ಸಿಖ್ಖರ ಆನಂದ್ ವಿವಾಹ ಕಾಯ್ದೆಯಂತಹ  ಧಾರ್ಮಿಕ ಕಾನೂನುಗಳ ಅಡಿಯಲ್ಲಿ ನೋಂದಾಯಿಸಬೇಕು ಅಥವಾ ಅದನ್ನು ಧರ್ಮದಿಂದ ಮುಕ್ತಗೊಳಿಸಬೇಕು  ಎಂದು ಮನವಿಯಲ್ಲಿ ವಾದಿಸಿದರು.

ವಿಶೇಷ ವಿವಾಹ ಕಾಯಿದೆ ಮತ್ತು ವಿದೇಶಿ ವಿವಾಹ ಕಾಯಿದೆಗಳ ಅಡಿಯಲ್ಲಿ ಇಂತಹ ವಿವಾಹಗಳನ್ನು ನೋಂದಾಯಿಸಿದರೆ ಯಾವುದೇ ಆಕ್ಷೇಪಣೆಯಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಒಂದು ವೇಳೆ ಹಿಂದೂ ವಿವಾಹ ಕಾಯಿದೆಯಡಿ ನೋಂದಾಯಿಸುವುದಾದರೆ  ಅದು ಎಲ್ಲಾ ಧರ್ಮಗಳ ವಿವಾಹ ಕಾಯಿದೆಗಳಡಿಯೂ ಆಗಬೇಕು 10,000 ವರ್ಷಗಳಿಗಿಂತ ಹೆಚ್ಚು ಹಳೆಯ ಇತಿಹಾಸ ಹೊಂದಿರುವ ಹಿಂದೂಗಳ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಗಳನ್ನು ನೋಂದಾಯಿಸಲು ಅನುಮತಿಸುವುದಾದರೆ ಅದಕ್ಕೂ ಮೊದಲು, ಅದು 1400 ವರ್ಷ ಹಳೆಯದಾದ ಮುಸ್ಲಿಮ್‌,  2000 ವರ್ಷ ಹಳೆಯದಾದ ಕ್ರಿಶ್ಚಿಯನ್‌ ಹಾಗೂ 2500 ವರ್ಷ ಹಳೆಯದಾದ ಪಾರ್ಸಿ ಸಮುದಾಯದ ವಿವಾಹ ಕಾಯ್ದೆಗೂ ಇದನ್ನು ಸೇರಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Follow Us:
Download App:
  • android
  • ios