Asianet Suvarna News Asianet Suvarna News

30 ಲಕ್ಷ ಕೊಡಿ, ಇಲ್ಲದಿದ್ರೆ ಸೆಕ್ಸ್ ವಿಡಿಯೋ ಲೀಕ್: ಸಲಿಂಗಕಾಮಿ ಉದ್ಯಮಿಗೆ ಬೆದರಿಕೆ!

*ಉದ್ಯಮಿಯ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ
*ವಿಡಿಯೋ ಫೇಸ್ಬುಕ್‌ನಲ್ಲಿ ಹರಿಬಿಡುವುದಾಗಿ ಬೆದರಿಕೆ
*ಹಣ ಕೈ ಸೇರುವ ಮುನ್ನವೇ ಪೋಲೀಸರ ಬಲೆಗೆ 

Man Jailed for Planning to Extort Businessman Filmed Having Sex with Another Man mnj
Author
Bengaluru, First Published Nov 29, 2021, 4:13 PM IST
  • Facebook
  • Twitter
  • Whatsapp

ಸಿಂಗಾಪುರ್‌(ನ.29): ಮತ್ತೊಬ್ಬ ಪುರುಷನೊಂದಿಗೆ ರಹಸ್ಯವಾಗಿ ಲೈಂಗಿಕ ಸಂಬಂಧ ಹೊಂದಿದ್ದ ವಿವಾಹಿತ ಉದ್ಯಮಿಯೊಬ್ಬರಿಂದ (Businessman)  SGD 60,000 (ಸುಮಾರು 32 ಲಕ್ಷ) ಸುಲಿಗೆ ಮಾಡಲು ನಾಲ್ವರು ದುಷ್ಕರ್ಮಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. 2019 ರಲ್ಲಿ ಉದ್ಯಮಿ ಮತ್ತೊಬ್ಬ ಪುರುಷನೊಂದಿಗೆ ಲೈಂಗಿಕ (Sex) ಸಂಪರ್ಕದಲ್ಲಿ ತೊಡಗಿದ್ದಾಗ ವಿಡಿಯೋ (Video) ಮಾಡಿಕೊಂಡಿದ್ದ ಆರೋಪಿ ನಂತರ ಉದ್ಯಮಿಯನ್ನು ಹಣಕ್ಕಾಗಿ ಬೆದರಿಸಿದ್ದ. ಬೆದರಿಕೆಯೊಡ್ಡಿದ ನಾಲ್ವರ ಪೈಕಿ ಭಾರತೀಯ ಮೂಲದ ಸಿಂಗಾಪುರದ ವ್ಯಕ್ತಿ (Indian Origin Singaporean) ಸೋಮವಾರ ತಪ್ಪೊಪ್ಪಿಕೊಂಡ ನಂತರ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆರಂಭದಲ್ಲಿ, ಉದ್ಯಮಿಯ ಆಪ್ತ ಸಹಾಯಕ (Personal Assistant) ಸೇರಿದಂತೆ ಮೂವರು ಈ ಸುಲಿಗೆ ಯೋಜನೆಯ ಭಾಗವಾಗಿದ್ದರು. ಅವರು SGD 50,000 (Singapore Dollar) ನೀಡುವಂತೆ ಬೆದರಿಕೆ ಒಡ್ಡಿದ್ದರು.

ಉದ್ಯಮಿ ಹಣ ನೀಡುವ ಮುನ್ನವೇ ಪೊಲೀಸರು (Police) ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಏಪ್ರಿಲ್ 2, 2020 ರಂದು, ಮೂವರ ತಂಡದ ಭಾಗವಾಗಿದ್ದ ಟ್ಯಾನ್ ಯೋಂಗ್ ಜಿಯಾನ್ (Tan Yong Jian), ಭಾರತೀಯ ಮೂಲದ 29 ವರ್ಷದ ಮಹದೇವನ್ ಎಡ್ವಿನ್ (Mahadevan Edwyn) ಅವರನ್ನು ಸುಲಿಗೆ ಯೋಜನೆಯಲ್ಲಿ ಸೇರಿಸಿಕೊಂಡು ಉದ್ಯಮಿಯನ್ನು ಬೆದರಿಸಲು ಸಂಚು ಹೆಣೆದಿದ್ದಾರೆ.

ಫೋನ್ ಕರೆಗಳ ಮೂಲಕ ಮಾತುಕತೆ ನಡೆಸಿ ಹಣಕ್ಕೆ ಬೆದರಿಕೆ

ವರದಿಯ ಪ್ರಕಾರ, 53 ವರ್ಷದ ಉದ್ಯಮಿಯಿಂದ ಫೋನ್ ಕರೆಗಳ ಮೂಲಕ ಮಾತುಕತೆ ನಡೆಸಿ ಹಣಕ್ಕೆ ಬೆದರಿಕೆ ಹಾಕಲಾಗಿದೆ. ಭಾರತೀಯ ಮೂಲದ ವ್ಯಕ್ತಿಗೆ  ಉದ್ಯಮಿಯಿಂದ ಪಡೆಯುವ ಹಣದ ಶೇ. 50 ಭಾಗವನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆರೋಪಿಯು ಯೋಂಗ್ ಜಿಯಾನ್ ಅವರ ಯೋಜನೆಯನ್ನು ಒಪ್ಪಿಕೊಂಡಿದ್ದ. ಮೊದಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಮಹದೇವನ್‌ಗೆ ಅವರ ಹೊಸ ಫ್ಲಾಟ್ (Home)  ನವೀಕರಿಸಲು ಹಣದ ಅಗತ್ಯವಿತ್ತು. ಹಾಗಾಗಿ ಈ ಮೂವರ ಜತೆ ಸೇರಲು ಮಹಾದೇವನ್‌ ಒಪ್ಪಿಕೊಂಡಿದ್ದ. 2019 ರ ಕೊನೆಯಲ್ಲಿ, ಉದ್ಯಮಿಯ ಆಪ್ತ ಸಹಾಯಕ ಉದ್ಯಮಿಯ ಮನೆಯಲ್ಲಿ ರಹಸ್ಯವಾಗಿ ಕ್ಯಾಮೆರಾವನ್ನು (Camera) ಅಳವಡಿಸಿದ್ದ ಮತ್ತು ಸುಮಾರು ಮೂರು ವಾರಗಳ ಕಾಲ ಕ್ಯಾಮೆರಾವನ್ನು ಅವರ ಮನೆಯಲ್ಲಿಯೇ ಬಿಟ್ಟಿದ್ದ. ಆ ಸಮಯದಲ್ಲಿ, ಅವನು ತನ್ನ ಬಾಸ್ ಕನಿಷ್ಠ ಐದು ಸಂದರ್ಭಗಳಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸೆಕ್ಸ್‌ ಮಾಡುತ್ತಿದ್ದ ವಿಡಿಯೋ ಚಿತ್ರೀಕರಿಸಿದ್ದ.

Brother Rapes Sister: ಕುಡುಕ ಅಣ್ಣನಿಂದ ಸ್ವಂತ ತಂಗಿ ಮೇಲೆ ಅತ್ಯಾಚಾರ

ವಿಡಿಯೋ ಫೇಸ್ಬುಕನಲ್ಲಿ ಹರಿಬಿಡುವುದಾಗಿ ಬೆದರಿಕೆ

ಕಳೆದ ವರ್ಷ ಏಪ್ರಿಲ್ 3 ರಂದು, ಎಡ್ವಿನ್ ಉದ್ಯಮಿಗೆ ಸಂದೇಶವೊಂದನ್ನು (Message) ಕಳುಹಿಸಿ, 24 ಗಂಟೆಗಳ ಒಳಗೆ SGD 50,000 ನಗದನ್ನು ಹಸ್ತಾಂತರಿಸುವಂತೆ ಒತ್ತಾಯಿಸಿದ್ದ.  ಅವರು ನಿಗದಿತ ಸಮಯದೊಳಗೆ ಹಣವನ್ನು ತಲುಪಿಸಲು ವಿಫಲವಾದರೆ ಅವರು ಮತ್ತೊಬ್ಬ ಪುರುಷನೊಂದಿಗೆ ಸೆಕ್ಸ್‌ನಲ್ಲಿ ತೊಡಗಿದ್ದ ವೀಡಿಯೊಗಳನ್ನು ಫೇಸ್ಬುಕ್ (Facebook) ಮತ್ತು ಇತರ ವೇದಿಕೆಗಳಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ಎಡ್ವಿನ್ ಹೇಳಿದ್ದ. ಉದ್ಯಮಿ ಆರಂಭದಲ್ಲಿ ತನ್ನ ಬಳಿ ಹಣವಿಲ್ಲ ಎಂದು ಉತ್ತರಿಸಿದ್ದರು. ಆದರೆ ಕಳೆದ ವರ್ಷ ಏಪ್ರಿಲ್ 4 ರಂದು, ಅವರು ಎಡ್ವಿನ್‌ಗೆ SGD 50,000  ಸುಮಾರು  ಹೊಂದಿಸಲು ಒಂದು ವಾರದ  ಅವಕಾಶ ಬೇಕೆಂದು ಸಂದೇಶವನ್ನು ಕಳುಹಿಸಿದ್ದರು. ಆದರೆ ಹಣ  ಕೈ ಸೇರುವ ಮುನ್ನವೇ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ. ತಪ್ಪೊಪ್ಪಿಕೊಂಡ ಮಹಾದೇವನ್‌ ಎಡ್ವೀನ್‌ ಗೆ  18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Murder: 50 ವರ್ಷವಾದ್ರೂ ಶೀಲ ಶಂಕೆ, ದಾರುಣವಾಗಿತ್ತು ಹೆಂಡತಿಯನ್ನು ಕೊಂದವನ ಸಾವು
 

Follow Us:
Download App:
  • android
  • ios