Asianet Suvarna News Asianet Suvarna News

Mulayam Singh Yadav: ಉತ್ತರ ಪ್ರದೇಶ ಮಾಜಿ ಸಿಎಂ ಸ್ಥಿತಿ ಗಂಭೀರ, ಐಸಿಯುಗೆ ಶಿಫ್ಟ್‌!

ಸಮಾಜವಾದಿ ಪಕ್ಷದ ಪೋಷಕ ಮುಲಾಯಂ ಸಿಂಗ್ ಯಾದವ್ ಅನಾರೋಗ್ಯದ ಕಾರಣ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ವೈದ್ಯರು ಅವರ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Samajwadi Party Patron Mulayam Singh Yadav Health Deteriorated Shifted To Medanta Hospital ICU san
Author
First Published Oct 2, 2022, 4:54 PM IST

ನವದೆಹಲಿ (ಅ. 2): ಸಮಾಜವಾದಿ ಪಕ್ಷದ (ಎಸ್‌ಪಿ) ಪೋಷಕ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಭಾನುವಾರ ಹಠಾತ್ ಹದಗೆಟ್ಟಿದೆ. ಅನಾರೋಗ್ಯದ ಕಾರಣ ಅವರನ್ನು ಹಲವು ದಿನಗಳಿಂದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು. ಮಾಹಿತಿಯ ಪ್ರಕಾರ, ವೈದ್ಯರು ಸಮಾಜವಾದಿ ಪಕ್ಷದ ಹಿರಿಯ ನಾಯಕನನ್ನು ಆಸ್ಪತ್ರೆಯ ವಾರ್ಡ್‌ನಿಂದ ಐಸಿಯುಗೆ ಸ್ಥಳಾಂತರಿಸಿದ್ದಾರೆ. ಅಖಿಲೇಶ್ ಯಾದವ್ ಕೂಡ ತನ್ನ ತಂದೆಯ ಅನಾರೋಗ್ಯದ ಸುದ್ದಿ ತಿಳಿದ ತಕ್ಷಣ ಲಕ್ನೋದಿಂದ ದೆಹಲಿಗೆ ತೆರಳಿದರು. ಎರಡನೇ ಮಗ ಪ್ರತೀಕ್ ಯಾದವ್ ಮತ್ತು ಕಿರಿಯ ಸಹೋದರ ಶಿವಪಾಲ್ ಸಿಂಗ್ ಯಾದವ್ ಕೂಡ ಈಗಾಗಲೇ ದೆಹಲಿಯಲ್ಲಿದ್ದಾರೆ. ಇದೇ ವೇಳೆ ಸೊಸೆ ಅರ್ಪಣಾ ಕೂಡ ದೆಹಲಿಗೆ ತೆರಳಿದ್ದಾರೆ. ಎಸ್‌ಪಿ ಆಪ್ತ ಡಾ.ಸುಶೀಲಾ ಕಟಾರಿಯಾ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇದಾಂತ ಅವರ ಹಿರಿಯ ವೈದ್ಯ ಡಾ.ನರೇಶ್ ಟ್ರೆಹಾನ್ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೆಲ ತಿಂಗಳಿನಿಂದ ಮೇದಾಂತ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.

ಕೆಲ ಸಮಯದ ಹಿಂದೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರನ್ನು ಮೇದಾಂತ ಆಸ್ಪತ್ರೆಗೆ (Medanta Hospital) ದಾಖಲಿಸಲಾಗಿತ್ತು. ದಿನನಿತ್ಯದ ತಪಾಸಣೆಯ ನಂತರ, ಮೂತ್ರದ ಸೋಂಕಿನಿಂದ ಅವರನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಯಿತು. ಮುಲಾಯಂ ಸಿಂಗ್ ಯಾದವ್ ಅವರನ್ನು ಹಲವು ಬಾರಿ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಲಾಯಂ ಅವರ ಚಿಕಿತ್ಸೆಯನ್ನು ಮೇದಾಂತದಲ್ಲಿ ಮಾತ್ರ ಮಾಡಲಾಗುತ್ತದೆ, ಅಲ್ಲದೆ ಅವರ ದಿನನಿತ್ಯದ ತಪಾಸಣೆಯನ್ನು ಸಹ ಇಲ್ಲಿ ಮಾಡಲಾಗುತ್ತದೆ. ಜುಲೈ 2021 ರಲ್ಲಿ, ನರ್ವಸ್‌ ಹಾಗೂ ಆಯಾಸ ಅನುಭವ ಎದುರಿಸಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.

ಮುಲಾಯಂ ಸಿಂಗ್ ಆಗಾಗ್ಗೆ ಹೊಟ್ಟೆ ನೋವಿನ ಬಗ್ಗೆಯೂ ವೈದ್ಯರಲ್ಲಿ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಈ ವಿಚಾರವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ಮುಲಾಯಂ ಸಿಂಗ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿರುವ ಮುಲಾಯಂ ಸಿಂಗ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಕೇಂದ್ರ ರಕ್ಷಣಾ ಸಚಿವರಾಗಿಯೂ (Union Defence Minister of India) ಸೇವೆ ಸಲ್ಲಿಸಿದ್ದಾರೆ. 82 ವರ್ಷದ ರಾಜಕಾರಣಿಯ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಸಾಧನಾ ಗುಪ್ತಾ, ಮುಲಾಯಂ ಪ್ರೀತಿಗೆ ನಾಂದಿಯಾಯ್ತು ಆ ಘಟನೆ, ವರ್ಷಾನುಗಟ್ಟಲೇ ಸಂಬಂಧ ಮುಚ್ಚಿಟ್ಟಿದ್ದ ಮಾಜಿ ಸಿಎಂ!

ಶೀಘ್ರ ಚೇತರಿಕೆ ಕಾಣಲಿ ಎಂದು ಹಾರೈಸಿದ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ: ಮುಲಾಯಂ ಸಿಂಗ್ (Mulayam Singh Yadav) ಅವರು ಶೀಘ್ರ ಗುಣಮುಖರಾಗಲಿ ಎಂದು ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (UP Deputy CM Keshav Prasad Maurya) ಹಾರೈಸಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ (Uttar Pradesh Former CM) ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಹದಗೆಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದರು. ಅವರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಎರಡನೇ ಪತ್ನಿ ಸಾಧನಾ ಗುಪ್ತಾ ನಿಧನ!

ಎಸ್‌ಪಿ ವರಿಷ್ಠರ ಪುತ್ರ ಅಖಿಲೇಶ್ ಯಾದವ್ ಅವರು ತಮ್ಮ ತಂದೆಯ ಜೊತೆಯಲ್ಲಿರುವ ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ, ಶಿವಪಾಲ್ ಯಾದವ್ ಅವರು ಪ್ರಸ್ತುತ ದೆಹಲಿಯಲ್ಲಿದ್ದಾರೆ, ಇಂದು ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಲು ಗುರುಗ್ರಾಮ್‌ಗೆ ತೆರಳುವ ಸಾಧ್ಯತೆಯಿದೆ. ಕೆಲವು ವಾರಗಳ ಹಿಂದೆ, ಮುಲಾಯಂ ಸಿಂಗ್ ಯಾದವ್ ಅವರು ಕೆಲವು ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರು. ಆ ಸಮಯದಲ್ಲಿ, ಅವರ ಆರೋಗ್ಯ ಸ್ಥಿತಿ ಸಾಮಾನ್ಯ ಎಂದು ವಿವರಿಸಿದ  ನಂತರ ಅವರನ್ನು ಡಿಸ್ಚಾರ್ಜ್‌ ಮಾಡಲಾಗಿತ್ತು.

Follow Us:
Download App:
  • android
  • ios