Asianet Suvarna News Asianet Suvarna News

ತಾಲಿಬಾನ್‌ನಿಂದ ಆಫ್ಘಾನ್ ರಕ್ಷಣೆ, ಉಗ್ರರ ಹೊಗಳಿದ ಸಮಾಜವಾದಿ ಪಕ್ಷದ ನಾಯಕ!

  • ತಾಲಿಬಾನ್ ಅಟ್ಟಹಾಸ, ಆಕ್ರಮಣಕ್ಕೆ ವಿಶ್ವದೆಲ್ಲಡೆ ವಿರೋಧ, ಆಕ್ರೋಶ
  • ಉಗ್ರರ ಹೊಗಳಿದ ಭಾರತದ ಸಮಾಜವಾದಿ ಪಕ್ಷದ ನಾಯಕ
  • ತಾಲಿಬಾನ್‌ಗಳಿಂದ ಆಫ್ಘಾನ್ ರಕ್ಷಣೆಯಾಗಿದೆ ಎಂದು ನಾಯಕ
     
Samajwadi Party leader praise Taliban terrorist capture Afghanistan by force ckm
Author
Bengaluru, First Published Aug 16, 2021, 7:19 PM IST

ಉತ್ತರ ಪ್ರದೇಶ(ಆ.16): ತಾಲಿಬಾನ್ ಉಗ್ರರಿಂದ ಆಫ್ಘಾನಿಸ್ತಾನ ಜನರು ಆತಂಕಕ್ಕೊಳಗಾಗಿದ್ದಾರೆ. ಮನಕಲರುವ ಘಟನೆಗಳಿಗೆ ವಿಶ್ವ ಮರುಗುತ್ತಿದೆ. ಉಗ್ರರ ಸಿಟ್ಟಿಗೆ ಹಲವು ಅಮಾಯಕರು ಹೆಣವಾಗಿದ್ದಾರೆ. ಚುನಾಯಿತ ಸರ್ಕಾರವನ್ನೇ ಬಂದೂಕಿನಿಂದ ಬೆದರಿಸಿ ಕೆಳಗಿಳಿಸಿದೆ. ಇದೀಗ ಉಗ್ರರ ಕೈಯಲ್ಲಿ ಆಫ್ಘಾನಿಸ್ತಾನ ನರಳಾಡುತ್ತಿದೆ. ಆದರೆ ಇಡೀ ದೇಶವೇ ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆ ವಿರೋಧಿಸುತ್ತಿದೆ. ಆದರೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ, ಸಂಸದ ಶಫೀಖುರ್ ರೆಹಮಾನ್ ಬರ್ಕ್ ಮಾತ್ರ ತಾಲಿಬಾನ್ ಉಗ್ರರನ್ನು ಹೊಗಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

4 ಕಾರು, 1 ಹೆಲಿಕಾಪ್ಟರ್‌ನಲ್ಲಿ ಹಣ ತುಂಬಿಕೊಂಡು ಪರಾರಿಯಾದ ಆಫ್ಘಾನ್ ಅಧ್ಯಕ್ಷ!

ಭಾರತದಲ್ಲಿ ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡುವುದು ಹೊಸದೇನಲ್ಲ. ಆದರೆ ಈ ಬಾರಿ ಶಫೀಖುರ್ ರೆಹಮಾನ್ ಬರ್ಕ್ ಹೇಳಿಕೆಯನ್ನು ಸ್ವತಃ ಸಮಾಜವಾದಿ ಪಕ್ಷಕ್ಕೆ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಲಿಬಾನ್ ಸಂಘಟನೆ ಆಫ್ಘನಿಸ್ತಾನವನ್ನು ರಕ್ಷಿಸಿದೆ. ತಾಲಿಬಾನ್ ಆಫ್ಘಾನ್ ಕೈವಶವಾಗಿದೆ. ಇದು ಆಫ್ಘಾನಿಸ್ತಾನದ ನಿಜವಾದ ಸ್ವಾತಂತ್ರ್ಯ ಎಂದು ಶಫೀಖುರ್ ರೆಹಮಾನ್ ಹೇಳಿದ್ದಾರೆ.

ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಳ್ಳಲು ರೈಲಿನಂತೆ ಓಡೋಡಿ ವಿಮಾನ ಹತ್ತಿದ ಮಂದಿ ಸಾವು!

ಶಫೀಖುರ್ ರೆಹಮಾನ್ ವಿವಾದ ಇಷ್ಟೆಕ್ಕೆ ಅಂತ್ಯಗೊಂಡಿಲ್ಲ. ತಾಲಿಬಾನಿಗಳು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಂಡಿದ್ದಾರೆ. ಈ ಮೂಲಕ ಅಮೆರಿಕ, ರಷ್ಯಾ ಕೈಯಿಂದ ಸ್ವತಂತ್ರ್ಯಗೊಳಿಸಿದ್ದಾರೆ. ಅಮೆರಿಕ ಹಾಗೂ ಇತರ ದೇಶಗಳು ಆಫ್ಘಾನಿಸ್ತಾನದಲ್ಲಿ ತಮ್ಮ ಪ್ರಭುತ್ವ ಸಾಧಿಸಲು ಹವಣಿಸುತ್ತಿತ್ತು. ಹೀಗಾಗಿ ತಾಲಿಬಾನ್‌ಗಳು ಮತ್ತೆ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂದು ಶಫೀಖುರ್ ರೆಹಮಾನ್ ಹೇಳಿದ್ದಾರೆ.

ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಉತ್ತಮ ಆಡಳಿತ ನೀಡಲಿದೆ. ಅಮೆರಿಕ ಹಾಗೂ ರಷ್ಯಾದ ಮಧ್ಯಸ್ಥಿಕೆ ಇಲ್ಲದ, ಅವರ ಕೈವಾಡವಿಲ್ಲದ ಉತ್ತಮ ಆಡಳಿತ ಇದಾಗಲಿದೆ ಎಂದು ಶಫೀಖುರ್ ರೆಹಮಾನ್ ಹೇಳಿದ್ದಾರೆ.  ತಾಲಿಬಾನ್‌ನ್ನು ಉಗ್ರರು ಅಥವ ಉಗ್ರ ಸಂಘಟನೆ ಎಂದು ಅಪ್ಪಿ ತಪ್ಪಿಯೂ ಶಫೀಖುರ್ ರೆಹಮಾನ್ ಹೇಳಿಲ್ಲ. ಬದಲಾಗಿ ತಾಲಿಬಾನ್ ಸಂಘಟನೆ ಎಂದೇ ಹೇಳಿದ್ದಾರೆ.

ತಾಲಿಬಾನಿಯರ ಕೈಯ್ಯಲ್ಲಿ ಅಪ್ಘಾನ್: ಉಗ್ರರಿಗೆ ಹೀಗೆ ಹರಿದು ಬರುತ್ತೆ ಹಣದ ಹೊಳೆ!

ಸಮಾಜವಾದಿ ಪಕ್ಷದ ನಾಯಕ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿಯ ವಿವಾದ ಮೈಮೇಲೇ ಎಳೆದುಕೊಂಡಿದ್ದಾರೆ. ಬಿಜೆಪಿ ಶರೀಯತ್ ಬದಲಿಸುತ್ತಿದೆ. ಮುಸ್ಲಿಂ ವಿರೋಧಿ ಬಿಜೆಪಿ ಭಾರತದಲ್ಲಿ ಯಾವ ರಾಜ್ಯದಲ್ಲೂ ಆಡಳಿತ ನಡೆಸಲು ಅಸಮರ್ಥ ಎಂದು ವಿವಾದ ಸೃಷ್ಟಿಸಿದ್ದರು. ಬಿಜೆಪಿ ಹಾಗೂ ಪಕ್ಷದ ನಾಯಕರು ಮುಸ್ಲಿಂ ಹುಡುಗಿಯರನ್ನು ಹಿಡಿದು ಅತ್ಯಾಚಾರ ಮಾಡಿ ಹತ್ಯೆ ಮಾಡುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಅಲ್ಲಾ ಕೊರೋನಾ ಶಾಪ ನೀಡಿದ್ದಾನೆ ಎಂದು ಶಫೀಖುರ್ ರೆಹಮಾನ್ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ವಿರೋಧಕ್ಕೆ ಕಾರಣವಾಗಿದ್ದರು.

Follow Us:
Download App:
  • android
  • ios