Asianet Suvarna News Asianet Suvarna News

4 ಕಾರು, 1 ಹೆಲಿಕಾಪ್ಟರ್‌ನಲ್ಲಿ ಹಣ ತುಂಬಿಕೊಂಡು ಪರಾರಿಯಾದ ಆಫ್ಘಾನ್ ಅಧ್ಯಕ್ಷ!

  • ಆಫ್ಘಾನಿಸ್ತಾನದಲ್ಲಿನ್ನು ತಾಲಿಬಾನ್ ಉಗ್ರರ ಆಡಳಿತ
  • ನರಕಕ್ಕಿಂತ ಕಡೆಯಾದ ಕಾಬೂಲ್, ಪಲಾಯನಕ್ಕೆ ಜನರ ನೂಕು ನುಗ್ಗಲು
  • ಕಾಬೂಲ್ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದಂತೆ ಪರಾರಿಯಾದ ಆಫ್ಘಾನ್ ಅಧ್ಯಕ್ಷ
President Ashraf Ghani left Afghanistan with four cars and a helicopter full of cash report ckm
Author
Bengaluru, First Published Aug 16, 2021, 6:10 PM IST

ಕಾಬೂಲ್(ಆ.16): ತಾಲಿಬಾನ್ ಅಟ್ಟಹಾಸಕ್ಕೆ ಆಫ್ಘಾನಿಸ್ತಾನದ ಜನರ ಪರಿಸ್ಥಿತಿ ಹೇಳತೀರದು. ಸಂಪೂರ್ಣ ಆಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಯಲ್ಲಿದೆ. ನಿನ್ನೆ(ಆ.15) ಆಫ್ಘಾನ್ ರಾಜಧಾನಿ ಕಾಬೂಲ್ ತಾಲಿಬಾನ್ ಉಗ್ರರ ಕೈವಶವಾಗುತ್ತಿದ್ದಂತೆ ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಅಶ್ರಫ್ ಘನಿ ಪರಾರಿಯಾಗುವ ವೇಳೆ 4 ಕಾರು ಹಾಗೂ ಒಂದು ಹೆಲಿಕಾಪ್ಟರ್ ಹಣ ತುಂಬಿಸಿ ಪರಾರಿಯಾಗಿದ್ದಾರೆ ಎಂದು ಕಾಬೂಲಿನಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಹೇಳಿದೆ ಎಂದು ರಾಯಟರ್ಸ್ ವರದಿ ಮಾಡಿದೆ. 

ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಳ್ಳಲು ರೈಲಿನಂತೆ ಓಡೋಡಿ ವಿಮಾನ ಹತ್ತಿದ ಮಂದಿ ಸಾವು!

ಆಫ್ಘಾನ್ ಅಧ್ಯಕ್ಷರ ಅರಮನೆಯಲ್ಲಿ ಕೂಡಿಟ್ಟ ಹಣವನ್ನು 4 ಕಾರಗಳಲ್ಲಿ ತುಂಬಿದ್ದಾರೆ. ಬಳಿಕ ಒಂದು ಹೆಲಿಕಾಪ್ಟರ್‌ನಲ್ಲೂ ಹಣ ತುಂಬಿ ಆಫ್ಘಾನ್‌ನಿಂದ ಪರಾರಿಯಾಗಿರುವುದಾಗಿ ರಷ್ಯಾ ರಾಯಭಾರಿ ಕಚೇರಿ ಹೇಳಿದೆ. ಅರಮನೆಯಲ್ಲಿ ಇದೀಗ ರಹಸ್ಯವಾಗಿ ಶೇಖರಿಸಿಟ್ಟ ಹಣ ತುಂಬಲು ವಾಹನದಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ ಈ ಹಣ ತಾಲಿಬಾನ್ ಉಗ್ರರರ ಕೈಸೇರುವ ಸಾಧ್ಯತೆ ಇದೆ ಎಂದು ರಾಯಟರ್ಸ್ ವರದಿ ಮಾಡಿದೆ.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಜಕಿಸ್ತಾನಕ್ಕೆ ತೆರಳಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದಿದ್ದಿತ್ತು. ಆದರೆ ತಜಕಿಸ್ತಾನ ಅಶ್ರಫ್ ಪ್ರವೇಶ ನಿರಾಕರಿಸಿದೆ. ಅಶ್ರಫ್ ವಿಮಾನ ಲ್ಯಾಂಡ್ ಆಗಲು ತಜಕಿಸ್ತಾನ ನಿರಾಕರಿಸಿತ್ತು. ಹೀಗಾಗಿ ಓಮನ್‌ನಲ್ಲಿ ತಂಗಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಇಲ್ಲಿದ ಅಮೆರಿಕಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದೇಶ ತೊರೆಯವು ಕೆಲವೇ ಗಂಟೆಗಳ ಮುನ್ನ ಅಶ್ರಫ್ ಘನಿ, ಆಫ್ಘಾನಿಸ್ತಾನದಲ್ಲಿ ರಕ್ತಪಾತವಾಗಲು ಬಿಡುವುದಿಲ್ಲ ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದರು. ಇದಾದ ಕೆಲ ಕ್ಷಣಗಳಲ್ಲಿ ಅಧ್ಯಕ್ಷರೇ ನಾಪತ್ತೆಯಾಗಿದ್ದಾರೆ. ಆಫ್ಘಾನಿಸ್ತಾನದ ಅಧ್ಯಕ್ಷರೇ ಪಲಾಯನ ಮಾಡಿರುವಾಗ ಇನ್ನು ಜನರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ತಾಲಿಬಾನ್ ಅಟ್ಟಹಾಸ, ಅಫ್ಘಾನ್ ಪತನಕ್ಕೆ ಕಾರಣವಾಗಿದ್ದೇ ಆ ಒಂದು ಘೋಷಣೆ!

ಹೀಗಾಗಿ ಕಾಬೂಲ್‌ ವಿಮಾನ ನಿಲ್ದಾಣದ ರೈಲು ನಿಲ್ದಾಣಕ್ಕಿಂತ ಕಡೆಯಾಗಿದೆ. ರೈಲು ಬಸ್ಸಿಗೆ ಜನ ಹತ್ತುವಂತೆ ವಿಮಾನ  ಹತ್ತಿದ್ದಾರೆ. ರೆಕ್ಕೆಗಳಲ್ಲಿ ಕುಳಿತು ಪ್ರಯಾಣಿಸಿದ ಮೂವರು ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. 
 

Follow Us:
Download App:
  • android
  • ios