MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ತಾಲಿಬಾನಿಯರ ಕೈಯ್ಯಲ್ಲಿ ಅಪ್ಘಾನ್: ಉಗ್ರರಿಗೆ ಹೀಗೆ ಹರಿದು ಬರುತ್ತೆ ಹಣದ ಹೊಳೆ!

ತಾಲಿಬಾನಿಯರ ಕೈಯ್ಯಲ್ಲಿ ಅಪ್ಘಾನ್: ಉಗ್ರರಿಗೆ ಹೀಗೆ ಹರಿದು ಬರುತ್ತೆ ಹಣದ ಹೊಳೆ!

ಅಫ್ಘಾನಿಸ್ತಾನದ ಅಧ್ಯಕ್ಷರು ಪಲಾಯನ ಮಾಡಿದ್ದಾರೆ ಮತ್ತು ತಾಲಿಬಾನ್ ದಂಗೆಕೋರರು ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 20 ವರ್ಷಗಳ ನಂತರ ತಾಲಿಬಾನ್ ಮತ್ತೆ ಅಪ್ಘಾನಿಸ್ತಾನದಲ್ಲಿ ಅಧಿಕಾರ ಪಡೆದುಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಜನರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಎಂಬ ಊಹಾಪೋಹಗಳು ಕೇಳಿ ಬಂದಿವೆ. ಹೀಗಿರುವಾಗ ಇಷ್ಟು ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿದ ಈ ತಾಲಿಬಾನ್ ಎಂದರೇನು ಮತ್ತು ಅಫ್ಘಾನಿಸ್ತಾನ ವಶಪಡಿಸಿಕೊಂಡಿರುವ ಇದರ ಉದ್ದೇಶವೇನು ಎಂದು ತಿಳಿದುಕೊಳ್ಳುವುದು ಬಹು ಮುಖ್ಯ.

3 Min read
Suvarna News
Published : Aug 16 2021, 04:10 PM IST| Updated : Aug 16 2021, 04:25 PM IST
Share this Photo Gallery
  • FB
  • TW
  • Linkdin
  • Whatsapp
17

ತಾಲಿಬಾನ್ ಎಂದರೆ ಏನು? 

ತಾಲಿಬಾನ್ ಒಂದು ಪಾಷ್ಟೋ ಭಾಷೆಯ ಪದ, ಇದರರ್ಥ ಜ್ಞಾನವುಳ್ಳದ್ದು. ಇದನ್ನು ಒಂದು ಬಗೆಯ ಆಂದೋಲನ ಎನ್ನಲಾಗುತ್ತದೆ. ಇದು ದಕ್ಷಿಣ ಅಫ್ಘಾನಿಸ್ತಾನದಲ್ಲಿ 1994 ರಲ್ಲಿ ಆರಂಭವಾದ ಸುನ್ನಿ ಇಸ್ಲಾಮಿಕ್ ಮೂಲಭೂತವಾದಿ ಚಳುವಳಿಯಾಗಿದೆ. ಅವರ ಹೋರಾಟಗಾರರನ್ನು ಉಗ್ರ ಇಸ್ಲಾಮಿಸ್ಟ್ ಭಯೋತ್ಪಾದಕರು ಎಂದೂ ಕರೆಯುತ್ತಾರೆ, ಇವರು ತಮ್ಮ ಕಠಿಣ ಧಾರ್ಮಿಕ ಕಾನೂನುಗಳನ್ನು ಅಫ್ಘಾನಿಸ್ತಾನದ ಮೇಲೆ ಹೇರಲು ಬಯಸುತ್ತಿದ್ದಾರೆ. 1970 ಮತ್ತು 1980 ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಪಡೆಗಳ ವಿರುದ್ಧ ಇವರು ಹೋರಾಡಿದ್ದರು. 1990 ರಲ್ಲಿ ತಾಲಿಬಾನ್ ಸಂಘಟನೆ ಮತ್ತಷ್ಟು ಬಲಶಾಲಿಯಾಯ್ತು. 1996 ರಲ್ಲಿ  ಅಫ್ಘಾನಿಸ್ತಾನದ ಅಂದಿನ ಅಧ್ಯಕ್ಷರ ಪಲಾಯನ ಮಾಡುವಷ್ಟು ಒತ್ತಡ ಹೇರಿದ್ದರು.
 

27

ತಾಲಿಬಾನ್ ವಿರುದ್ಧ ಅಮೆರಿಕದ ಯುದ್ಧ

ಸೆಪ್ಟೆಂಬರ್ 11, 2001 ರಂದು ಅಮೆರಿಕದ ಮೇಲಾದ ದಾಳಿ ಬಳಿಕ ತಾಲಿಬಾನ್ ವಿರುದ್ಧ ಯುದ್ಧ ಪ್ರಾರಂಭವಾಯಿತು. ಇದರಲ್ಲಿ ಸುಮಾರು 3,000 ಮಂದಿ ಸಾವನ್ನಪ್ಪಿದ್ದರು. ಇದಾದ ನಂತರ ತಾಲಿಬಾನ್ ಕೆಲ ಕಾಲ ಶಾಂತಗೊಂಡಿತ್ತಾದರೂ, ಅಮೆರಿಕ ಮತ್ತು ಅಫ್ಘಾನ್ ಪಡೆಗಳ ವಿರುದ್ಧ 20 ವರ್ಷಗಳ ಕಾಲ ಗೆರಿಲ್ಲಾ ಯುದ್ಧವನ್ನು ಮುಂದುವರೆಸಿದ್ದರು. ಇತ್ತೀಚೆಗೆ ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನಿಯರಿಗೆ ಬಹುದೊಡ್ಡ ಅವಕಾಶ ಲಭ್ಯವಾಯ್ತು. ತಾಲಿಬಾನ್‌ನ ಸ್ಥಾಪಕ ಮತ್ತು ನಾಯಕ ಮುಲ್ಲಾ ಮೊಹಮ್ಮದ್ ಒಮರ್, ಯುಎಸ್ ದಾಳಿಯಿಂದ ತಲೆಮರೆಸಿಕೊಂಡಿದ್ದರು. ಒಮರ್ ಇರುವಿಕೆ ಎಷ್ಟು ರಹಸ್ಯವಾಗಿತ್ತು ಎಂದರೆ 2013 ರಲ್ಲಿ ಸಾವನ್ನಪ್ಪಿದ್ದರೂ ಎರಡು ವರ್ಷಗಳ ಬಳಿಕ ಆತನ ಮಗ ಸಾಆವಿನ ವಿಚಾರ ದೃಢಪಡಿಸಿದ್ದ. ಸದ್ಯ ತಾಲಿಬಾನ್‌ನ್ನು ಹಿಬತುಲ್ಲಾ ಅಖುಂದ್ಜಡಾ ಮುನ್ನಡೆಸುತ್ತಿದ್ದಾನೆ.

37

ತಾಲಿಬಾನ್‌ ಏನು ಬಯಸುತ್ತಿದೆ? ಅವರ ನಿಯಮಗಳೇನು?

ತಾಲಿಬಾನ್ ಹೇಳುವಂತೆ ಪುರುಷರು ಇಲ್ಲದೇ ಮಹಿಳೆಯರು ಮನೆಯಿಂದ ಹೊರಬರುವಂತಿಲ್ಲ. ಹೊರಬಂದರೂ ತಲೆಯಿಂದ ಪಾದದವರೆಗೆ ದೇಹ ಮುಚ್ಚಿರಬೇಕು. ಬುರ್ಖಾ/ಹಿಜಾಬ್ ಧರಿಸುವುದು ಕಡ್ಡಾಯ. ಮಹಿಳೆಯರಿಗೆ ಹೊರಗೆ ಕೆಲಸ ಮಾಡಲು ಅವಕಾಶವಿಲ್ಲ. ಹುಡುಗಿಯರು ಶಿಕ್ಷಣ ಪಡೆಯುವಂತಿಲ್ಲ. ಇಸ್ಲಾಮೇತರ ಸಂಗೀತ ಮತ್ತು ದೂರದರ್ಶನ ಕಾರ್ಯಕ್ರಮ ನಿಷೇಧಿ. ಧಾರ್ಮಿಕ ನ್ಯಾಯಾಲಯಗಳ ಕಾನೂನಿನ ಅನ್ವಯ ಕಳ್ಳರ ಕೈಗಳನ್ನು ಕತ್ತರಿಸಿದರೆ, ಅತ್ಯಾಚಾರ ಮಾಡಿದ ವ್ಯಕ್ತಿಗೆ ಕಲ್ಲು ತೂರಾಟ ನಡೆಸಿ ಮರಣದಂಡನೆಗೆ ವಿಧಿಸುವುದನ್ನು ಬೆಂಬಲಿಸುತ್ತದೆ.

47

ಅಮೆರಿಕ ತನ್ನ ಸೈನ್ಯವನ್ನು ಹಿಂದೆ ಕರೆಸಿಕೊಂಡಿದ್ದೇಕೆ?

ಅಮೆರಿಕ ಮತ್ತು ಆಸ್ಟ್ರೇಲಿಯಾ ಅಫ್ಘಾನಿಸ್ತಾನದಿಂದ ತಮ್ಮ ಸೈನ್ಯವನ್ನು ಹಿಂದೆ ಕರೆಸಿಕೊಂಡ ಬಳಿಕ ತಾಲಿಬಾನ್ ಬಹಳಷ್ಟು ಸಕ್ರಿಯವಾಯಿತು. ಸೆಪ್ಟೆಂಬರ್ 11 ರೊಳಗೆ ಅಫ್ಘಾನಿಸ್ತಾನದಿಂದ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದಾಗಿ ಅಮೆರಿಕ ಆರಂಭದಲ್ಲಿ ಘೋಷಿಸಿತ್ತಾದರೂ, ಯುಎಸ್ ಅಧ್ಯಕ್ಷ ಜೋ ಬೈಡೆನ್ ಅದಕ್ಕೂ ಮೊದಲೇ ಅಮೆರಿಕದ ಹೆಚ್ಚಿನ ಸೈನ್ಯವನ್ನು ಹಿಂತೆಗೆದುಕೊಂಡರು. ತಾಲಿಬಾನ್ ಜೊತೆಗಿನ ಯುದ್ಧದ ಸಮಯದಲ್ಲಿ 1,50,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಹಾಗೂ ಅಮೆರಿಕ ತನ್ನ 2,000 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿತ್ತು. ಈ ಯುದ್ಧಕ್ಕೆ ಟ್ರಿಲಿಯನ್ ಡಾಲರ್‌ ಖರ್ಚು ಮಾಡಲಾಗಿತ್ತು. 

57

ಸಾವಿರಾರು ಅಫ್ಘಾನ್ ನಾಗರಿಕರು ಮತ್ತು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಜೋ ಬೈಡೆನ್ ಅಫ್ಘಾನ್ ನಾಯಕರಿಗೆ ಒಗ್ಗಟ್ಟಿನಿಂದ ಭವಿಷ್ಯದತ್ತ ಸಾಗುವಂತೆ ಕರೆ ನೀಡಿದ್ದರು. ಅಫ್ಘಾನ್ ಸರ್ಕಾರ ಮತ್ತು ಭದ್ರತಾ ಪಡೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಆದರೀಗ ಆ ವಿಶ್ವಾಸ ನುಚ್ಚು ನೂರಾಗಿದೆ. ಅಧ್ಯಕ್ಷ ಅಶ್ರಫ್ ಘನಿ ರಾತ್ರೋರಾತ್ರಿ ದೇಶ ಬಿಟ್ಟು ವಿದೇಶಕ್ಕೆ ಪಲಾಯನ ಮಾಡಿದ್ದರೆ, ಅತ್ತ ತಾಲಿಬಾನ್ ಉಗ್ರರು  ಅವರ ಅರಮನೆಯೊಳಗೆ ಟಿಕಾಣಿ ಹೂಡಿದ್ದಾರೆ.

67

ತಾಲಿಬಾನ್‌ಗೆ ಹಣ ಎಲ್ಲಿಂದ ಬರುತ್ತದೆ? ಅವರೆಷ್ಟು ಶ್ರೀಮಂತರು?

ಅಂದಹಾಗೆ, 1990 ಕ್ಕೆ ಹೋಲಿಸಿದರೆ 2021 ರ ತಾಲಿಬಾನ್ ಸಂಘಟನೆಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಶಸ್ತ್ರಾಸ್ತ್ರಗಳಿಂದ ಹಿಡಿದು ವಾಹನಗಳವರೆಗೆ ಎಲ್ಲವೂ ವಿಭಿನ್ನವಿದೆ. 2016 ರಲ್ಲಿ, ಫೋರ್ಬ್ಸ್ ತಾಲಿಬಾನ್ 10 ಭಯೋತ್ಪಾದಕ ಸಂಘಟನೆಗಳಲ್ಲಿ ಐದನೇ ಶ್ರೀಮಂತ ಎಂದು ಪಟ್ಟಿ ಮಾಡಿದೆ. ಆ ವೇಳೆ ಐಸಿಸ್ 2 ಶತಕೋಟಿ USD ವಹಿವಾಟಿನ ಜೊತೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಐದನೇ ಸ್ಥಾನದಲ್ಲಿರುವ ತಾಲಿಬಾನ್ ನ ವಾರ್ಷಿಕ ವಹಿವಾಟು  400 ಮಿಲಿಯನ್ ಡಾಲರ್.
 

77

ಮಾದಕದ್ರವ್ಯ ಕಳ್ಳಸಾಗಣೆ, ರಕ್ಷಣೆ ಹಣ ಮತ್ತು ದೇಣಿಗೆಗಳ ಮೂಲಕ ತಾಲಿಬಾನ್‌ಗೆ ಆದಾಯ ಬರುತ್ತದೆ ಎಂದು ಫೋರ್ಬ್ಸ್ ಹೇಳಿತ್ತು. ನ್ಯಾಟೋ ವರದಿಯ ಪ್ರಕಾರ, 2019-20ರ ಹಣಕಾಸು ವರ್ಷಕ್ಕೆ ತಾಲಿಬಾನ್ ಬಜೆಟ್ 1.6 ಬಿಲಿಯನ್ ಡಾಲರ್ ಆಗಿದ್ದು, 2016 ರ ಫೋರ್ಬ್ಸ್ ಅಂಕಿಅಂಶಗಳಿಗೆ ಹೋಲಿಸಿದರೆ ನಾಲ್ಕು ವರ್ಷಗಳಲ್ಲಿ 400% ಹೆಚ್ಚಳವಾಗಿದೆ. ಒಂದು ವರದಿಯ ಪ್ರಕಾರ, ತಾಲಿಬಾನ್ ಗಣಿಗಾರಿಕೆಯಿಂದ 464 ಮಿಲಿಯನ್ ಡಾಲರ್, ಔಷಧಿಗಳಿಂದ 416 ಮಿಲಿಯನ್ ಡಾಲರ್, ವಿದೇಶಿ ದೇಣಿಗೆಯಿಂದ 240 ಮಿಲಿಯನ್ ಡಾಲರ್, ರಫ್ತಿನಿಂದ 240 ಮಿಲಿಯನ್ ಡಾಲರ್, ಸುಲಿಗೆಯಿಂದ 160 ಮಿಲಿಯನ್ ಡಾಲರ್ ಹಾಗೂ ರಿಯಲ್ ಎಸ್ಟೇಟ್ ನಿಂದ 80 ಮಿಲಿಯನ್ ಡಾಲರ್ ಗಳಿಸುತ್ತದೆ ಎನ್ನಲಾಗಿದೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved