Asianet Suvarna News Asianet Suvarna News

ನಾಲ್ಕಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಮಾಜವಾದಿ ನಾಯಕನ ಪತ್ನಿ ತಾಯಿ ಸಾವು

ಉತ್ತರಪ್ರದೇಶದ ರಾಜಧಾನಿ ಲಕ್ನೋದ ಹಜರತ್ ಗಂಜ್‌ನಲ್ಲಿ ನಿನ್ನೆ ನಡೆದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರಾದವರಲ್ಲಿ ಸಮಾಜವಾದಿ ನಾಯಕರೊಬ್ಬರ ಪತ್ನಿ ಹಾಗೂ ತಾಯಿ ಸೇರಿದ್ದಾರೆ.

Samajawadi leaders wife, and 80 year old mother died in Hazratganj building colapse case Uttar pradesh akb
Author
First Published Jan 25, 2023, 3:52 PM IST

ಲಕ್ನೋ: ಉತ್ತರಪ್ರದೇಶದ ರಾಜಧಾನಿ ಲಕ್ನೋದ ಹಜರತ್ ಗಂಜ್‌ನಲ್ಲಿ ನಿನ್ನೆ ನಡೆದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರಾದವರಲ್ಲಿ ಸಮಾಜವಾದಿ ನಾಯಕರೊಬ್ಬರ ಪತ್ನಿ ಹಾಗೂ ತಾಯಿ ಸೇರಿದ್ದಾರೆ. ಸಮಾಜವಾದಿ ಪಕ್ಷದ ವಕ್ತಾರ, ಅಬ್ಬಾಸ್ ಹೈದರ್ ಅವರ ಪತ್ನಿ ಉಜ್ಮ ಹೈದರ್ ಹಾಗೂ ತಾಯಿ ಬೇಗಂ ಹೈದರ್ ಈ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದಾರೆ.  ನಿನ್ನೆ ರಾತ್ರಿ ಏಳೂವರೆ ಸುಮಾರಿಗೆ ಈ ಅವಘಡ ಸಂಭವಿಸಿತ್ತು.  ರಾತ್ರಿ ಇಡೀ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದ ಅನೇಕರನ್ನು ಹೊರಕ್ಕೆ ತೆಗೆದಿದ್ದರು. 87 ವರ್ಷದ ಬೇಗಂ ಹೈದರ್ ಅವರನ್ನು ರಕ್ಷಣಾ ಸಿಬ್ಬಂದಿ  ಇಂದು ಮುಂಜಾನೆ ಕಟ್ಟಡದ ಅವಶೇಷಗಳಡಿಯಿಂದ ಹೊರ ತೆಗೆದಿದ್ದರು.  ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಲ್ಲಿ ಪ್ರಾಣ ಬಿಟ್ಟಿದ್ದಾರೆ. 

ದೇಹದೊಳಗೆ ಗಾಯಗಳಾದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಿಸಿ ಚೌಹಾಣ್ (DS Chouhan) ಹೇಳಿದ್ದಾರೆ.  ಹಾಗೆಯೇ ಅಬ್ಬಾಸ್ ಹೈದರ್ (Abbas Haider) ಅವರ ಪತ್ನಿ 30 ವರ್ಷದ ಉಜ್ಮಾ ಹೈದರ್ (Uzma Haider) ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಬ್ರಿಜೇಶ್ ಪಾಠಕ್ (Brajesh Pathak) ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ. ಇದುವರೆಗೆ ಒಟ್ಟು 15 ಜನರನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಇನ್ನು ಇಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 

ನಾಲ್ಕಂತಸ್ತಿನ ಕಟ್ಟಡ ಕುಸಿದು 3 ಸಾವು: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ಸ್ಥಳೀಯಾಡಳಿತ ತನಿಖೆಗೆ ಆದೇಶಿಸಿದೆ.  ಅಲ್ಲದೇ ಕುಸಿದ ಕಟ್ಟಡದ ಮಾಲೀಕ ಹಾಗೂ ಬಿಲ್ಡರ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.  ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೂವರು ಸದಸ್ಯರ ಸಮಿತಿಯೊಂದನ್ನು ರಚನೆ ಮಾಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.  ಮುಖ್ಯಮಂತ್ರಿಗಳು ರಚಿಸಿರುವ ಮೂವರು ಸದಸ್ಯರ ತಂಡದಲ್ಲಿ ಲಕ್ನೋ ವಿಭಾಗೀಯ ಆಯುಕ್ತ ರೋಷನ್ ಜಾಕೋಬ್ (Roshan Jacob), ಜಂಟಿ ಪೊಲೀಸ್ ಆಯುಕ್ತ ಪಿಯೂಷ್ ಮೊರ್ಡಿಯಾ (Piyush Mordia) ಮತ್ತು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ (chief engineer) ಇದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಈ ಸಮಿತಿ ವಾರದೊಳಗೆ ಘಟನೆ ಬಗ್ಗೆ ಕಾರಣ ಏನು ಎಂಬ ವರದಿ ನೀಡಲಿದೆ. 

MYsuru : 106 ವರ್ಷ ಹಳೆಯ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ

Follow Us:
Download App:
  • android
  • ios