ನೂಪುರ್ ಶರ್ಮ ತಲೆ ತಂದವರಿಗೆ ನನ್ನ ಮನೆಯನ್ನ ದಾನ ಮಾಡ್ತೇನೆ
ನೂಪುರ್ ಶರ್ಮ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ ಏಕೈಕ ಕಾರಣಕ್ಕೆ ಉದಯಪುರದಲ್ಲಿ ಕನ್ಹಯ್ಯಲಾಲ್ ಎನ್ನುವ ಸಾಮಾನ್ಯ ವ್ಯಕ್ತಿಯ ಶಿರಚ್ಛೇದ ಮಾಡಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ನೂಪುರ್ ಶರ್ಮಗೆ ಇನ್ನೊಂದು ಬೆದರಿಕೆ ವಿಡಿಯೋ ಪ್ರಕಟವಾಗಿದೆ. ಅಜ್ಮೀರ್ ದರ್ಗಾದ ಖಾದಿಮ್, ನೂಪುರ್ ಶರ್ಮ ತಲೆ ತಂದವರಿಗೆ ತನ್ನ ಮನೆಯನ್ನು ಬಹುಮಾನವಾಗಿ ನೀಡುವುದಾಗಿ ನಾಲಿಗೆ ಹರಿಬಿಟ್ಟಿದ್ದಾನೆ.
ಜೈಪುರ (ಜುಲೈ 5): ಪ್ರವಾದಿ ಮೊಹಮದ್ ಪೈಗಂಬರ್ (prophet muhammad paigambar) ಕುರಿತಾಗಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ (Nupur Sharma) ನೀಡಿದ ಹೇಳಿಕೆ ದೇಶವ್ಯಾಪಿ ದೊಡ್ಡ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಕೆಲದ ದಿನಗಳ ಹಿಂದೆ ಇವರ ಹೇಳಿಕೆಯನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಎನ್ನುವ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳು ಕನ್ಹಯ್ಯಲಾಲ್ ಎನ್ನುವ ವ್ಯಕ್ತಿಯ ರುಂಡವನ್ನು ಹಾಡುಹಗಲೇ ಕತ್ತರಿಸಿದ್ದರು.
ಬರ್ಬರ ಹತ್ಯೆಯ ಪ್ರಕರಣಕ್ಕೆ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ರಾಜಸ್ಥಾನದಲ್ಲಿ (rajasthan) ತಾಲಿಬಾನಿ (Taliban)ರೀತಿಯ ಕೃತ್ಯ ನಡೆದ ಬೆನ್ನಲ್ಲಿಯೇ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಲಾಗಿತ್ತು. ಇದರ ನಡುವೆ ನೂಪುರ್ ಶರ್ಮಾ ಅವರ ಹತ್ಯೆ ಮಾಡುವುದಾಗಿ ಇನ್ನೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಜರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿಯ ( hazrat moinuddin chishti) ದರ್ಗಾದ ಖಾದಿಮ್ (Khadim ), ನೂಪುರ್ ಶರ್ಮ ಅವರ ಶಿರಚ್ಛೇದ ಮಾಡಿ ಅವರ ತಲೆಯನ್ನು ತಂದವರಿಗೆ ತನ್ನ ಮನೆಯನ್ನು ದಾನ ಮಾಡುವುದಾಗಿ ಘೋಷಣೆ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಅಜ್ಮೀರ್ ಪೊಲೀಸರು ವಿಡಿಯೋ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋದಲ್ಲಿರುವ ವ್ಯಕ್ತಿಯನ್ನು ಅಜ್ಮೀರ್ ದರ್ಗಾ ಖಾದಿಮ್ ಆಗಿರುವ ಸಲ್ಮಾನ್ ಚಿಸ್ತಿ (Salman Chisti) ಎಂದು ಗುರುತಿಸಲಾಗಿದೆ. ನೂಪುರ್ ಶರ್ಮಾ ಹೇಳಿಕೆ ನೀಡಿದ ಬೆನ್ನಲ್ಲಿಯೇ ಅವರ ವಿರುದ್ಧ ಇಂಥ ಬೆದರಿಕೆ ವಿಡಿಯೋಗಳು ಸಾಮಾನ್ಯವಾಗಿಬಿಟ್ಟಿವೆ. ಉದಯಪುರದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ ನಂತರ, ಕನ್ಹಯ್ಯಾ ಲಾಲ್ ಎನ್ನುವ ಟೈಲರ್ ಅನ್ನು ಹತ್ಯೆ ಮಾಡಿರುವ ವಿಷಯ ಇನ್ನೂ ಹಸಿಯಾಗಿರುವಾಗಲೇ, ಅಜ್ಮೀರ್ ದರ್ಗಾದ ಖಾದಿಮ್, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದು ಗಮನಿಸಬೇಕಾದ ಸಂಗತಿ.
ಈ ವಿಡಿಯೋ ಮೂಲಕ ಮತ್ತೊಮ್ಮೆ ಸಮಾಜದಲ್ಲಿ ದ್ವೇಷದ ವಿಷ ಬೀಜವನ್ನು ಬಿತ್ತುವ ಕೆಲಸ ಮಾಡಲಾಗುತ್ತಿದೆ. ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಾಕಷ್ಟು ಮಾತನಾಡಿರುವ ಖಾದಿಮ್, ಆಕೆಯನ್ನು ಶೂಟ್ ಮಾಡುವ ಬಗ್ಗೆಯೂ ಮಾತನಾಡಿದ್ದಾನೆ. ಎರಡು ಅಥವಾ ನಾಲ್ಕು ದಿನಗಳ ಹಿಂದೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ದರ್ಗಾದ ಖಾದಿಮ್ ಆಗಿದ್ದು, ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಶೀಟ್ ಕೂಡ ತೆರೆಯಲಾಗಿದೆ. ಅವರ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿವೆ. ವೀಡಿಯೋದಲ್ಲಿ ಈ ವ್ಯಕ್ತಿ, ಈಗ ಸಮಯ ಮೊದಲಿನ ಹಾಗಿಲ್ಲ ಇಲ್ಲದಿದ್ದರೆ ನಾನು ಈ ಮೊದಲೇ ಮಾತನಾಡುತ್ತಿದ್ದೆ. ನಾನು ನನ್ನ ತಾಯಿಯ ಮೇಲೆ ನನ್ನ ಮಕ್ಕಳ ಮೇಣೆ ಆಣೆ ಮಾಡಿ ಹೇಳುತ್ತಿದ್ದೇನೆ. ಆಕೆಯನ್ನು ನಾನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲುತ್ತಿದ್ದೆ. ಖಂಡಿತಾ ಆಕೆಯ ಮೇಲೆ ನಾನು ಗುಂಡು ಹಾರಿಸುತ್ತಿದ್ದೆ. ಈಗಲೂ ನಾನು ಎದೆಯುಬ್ಬಿಸಿ ಹೇಳುತ್ತೇನೆ, ನೂಪುರ್ ಶರ್ಮ ತಲೆಯನ್ನು ಯಾರು ತರುತ್ತಾರೋ ಅವರಿಗೆ ನಾನು ನನ್ನ ಮನೆಯನ್ನು ಕೊಡುತ್ತೇನೆ. ಇದು ನಾನು ಕೊಡುವ ವಾಗ್ದಾನ ಎಂದು ಹೇಳಿದ್ದಾನೆ.
ಉದಯ್‌ಪುರ ಬಳಿಕ ಮಹಾದಲ್ಲೂ ಭಯಾನಕ ಕೃತ್ಯ: ನೂಪುರ್ ಬೆಂಬಲಿಸಿದ್ದಕ್ಕೆ ವ್ಯಕ್ತಿಯ ಇರಿದು ಕೊಲೆ
ಬಳಿಕ ಈ ವಿಡಿಯೋದಲ್ಲಿ ತನ್ನನ್ನು ತಾನು ಎಂದು ಸೈನಿಕ ಎಂದು ಖ್ವಾಜಾ ಬಣ್ಣಿಸಿಕೊಂಡಿದ್ದಾರೆ. ಈಗಲೂ ಕೂಡ ಹೋರಾಡುವ ಶಕ್ತಿ ನನ್ನಲ್ಲಿದೆ ಎಂದಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಲ್ಮಾನ್ ಕೂಡ ಮುಸ್ಲಿಮರನ್ನು ಪ್ರಚೋದಿಸುವ ಮಾತುಗಳನ್ನಾಡಿದ್ದಾನೆ. . ಜೂನ್ 17 ರಂದು ಗರೀಬ್ ನವಾಜ್ ದರ್ಗಾದ ಹೊರಗಿನಿಂದ ಹೋದ ಶಾಂತ ಮೆರವಣಿಗೆಯಲ್ಲಿ ದರ್ಗಾದ ಖಾದಿಮ್ ಗೌಹರ್ ಚಿಸ್ತಿ ಕೂಡ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ವೇಳೆ ಗುಸ್ತಖ್-ಎ-ರಸೂಲ್ ಕಿ ಯೇಹಿ ಶಿಕ್ಷೆ, ಸರ್ ತಾನ್ ಸೆ ಜುದಾ, ಸಾರ್ ತನ್ ಸೆ ಜುದಾ" ಎನ್ನುವ ಘೋಷಣೆಯನ್ನು ಕೂಗಲಾಗಿತ್ತು. ಇದೇ ಮಾತನ್ನು ಕನ್ಹಯ್ಯಲಾಲ್ ಹಂತಕರೂ ಹೇಳಿದ್ದರು.
ನೂಪುರ್ ಶರ್ಮಾ ವಿರುದ್ಧದ ಸುಪ್ರೀಂಕೋರ್ಟ್ ಜಡ್ಜ್ ಅಭಿಪ್ರಾಯ ವಾಪಸ್ ಪಡೆಯುವಂತೆ ಸಿಜೆಐಗೆ ಅರ್ಜಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಅಜ್ಮೀರ್ ಹೆಚ್ಚುವರಿ ಎಸ್‌ಪಿ ಸಿಟಿ ವಿಕಾಸ್ ಸಂಗ್ವಾನ್ ತಿಳಿಸಿದ್ದಾರೆ.