ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದಾರೆ
ನವದೆಹಲಿ: ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದಾರೆ. ಈ ವಿಷಯವನ್ನು ಸ್ವತಃ ಸೈನಾ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಕಶ್ಯಪ್‌ರಿಂದ ದೂರವಾಗುತ್ತಿರುವುದಾಗಿ ಸೈನಾ ಹೇಳಿಕೊಂಡಿದ್ದಾರೆ.
2012 ಲಂಡನ್ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ, ಮಾಜಿ ವಿಶ್ವ ನಂ.6 ಶಟ್ಲರ್ ಕಶ್ಯಪ್‌ರನ್ನು 2018ರಲ್ಲಿ ವಿವಾಹವಾಗಿದ್ದರು.
No Fault Divorce ಅಂದ್ರೇನು? ಕಾರಣ ಇಲ್ಲದೇಯೂ ಗಂಡ-ಹೆಂಡ್ತಿ ಬೇರೆ ಆಗ್ಬಹುದಾ?
ನೋ ಫಾಲ್ಟ್ ಡಿವೋರ್ಸ್ ಬಗ್ಗೆ ನೀವು ಕೇಳಿದ್ದೀರಾ? ಇಬ್ಬರ ನಡುವೆ ಡಿವೋರ್ಸ್ ನೀಡಲು ಯಾವುದೇ ಬಲವಾದ ಕಾರಣ ಇಲ್ಲದೇ ಇದ್ದರೂ ಸಹ ಡಿವೋರ್ಸ್ ನೀಡಬಹುದು. ಇದರ ಬಗ್ಗೆ ತಿಳಿಯೋಣ.
ಹೆಚ್ಚಿನ ದೇಶಗಳಲ್ಲಿ, ವಿಚ್ಛೇದನವು ಫಾಲ್ಟ್ ಥಿಯರಿಯನ್ನು (fault theory) ಆಧರಿಸಿದೆ. ಪತಿ ಅಥವಾ ಪತ್ನಿ ಯಾರಾದರೂ ಒಬ್ಬರು ತಪ್ಪು, ಮೋಸ ಅಥವಾ ಮಾನಸಿಕ-ದೈಹಿಕ ಹಿಂಸೆಯನ್ನು ನೀಡಿದ್ರೆ ಡಿವೋರ್ಸ್ ನೀಡಬಹುದು. ಆದರೆ ಅನೇಕ ದೇಶಗಳು ಈಗ ದೋಷರಹಿತ ವಿಚ್ಛೇದನಗಳನ್ನು ಅಳವಡಿಸಿಕೊಳ್ಳುತ್ತಿವೆ ಅಂದರೆ ನೋ ಫಾಲ್ಟ್ ಡಿವೋರ್ಸ್. ಇದರಲ್ಲಿ, ಪತಿ -ಪತ್ನಿ ನಡುವೆ ಯಾವುದೇ ಬಲವಾದ ಕಾರಣವಿಲ್ಲದೆಯೂ ಡಿವೋರ್ಸ್ ನೀಡಬಹುದು.
ಪ್ರಪಂಚದಾದ್ಯಂತ ವಿಚ್ಛೇದನದ (divorce) ಪ್ರಮಾಣ ತುಂಬಾ ಹೆಚ್ಚಾಗಿದೆ. ಅಮೆರಿಕದಲ್ಲಿಯೇ ವರ್ಷದಲ್ಲಿ ಸುಮಾರು 4.5 ಮಿಲಿಯನ್ ಮದುವೆಗಳಾಗುತ್ತವೆ, ಅದರಲ್ಲಿ 50 ಪ್ರತಿಶತದಷ್ಟು ವಿಚ್ಛೇದನದ ಕೊನೆಗೊಳ್ಳುತ್ತೆ. ವಿಚ್ಛೇದನದ ಈ ಪ್ರಕ್ರಿಯೆ ಬಹಳ ದೀರ್ಘವಾಗಿದೆ. ಕೆಲವೊಮ್ಮೆ ಒಬ್ಬರನ್ನೊಬ್ಬರನ್ನು ಹಲವು ವಿಷಯಗಳಿಗೆ ಧೂಷಿಸುತ್ತಾ, ಡಿವೋರ್ಸ್ ನಿಡುತ್ತಾರೆ. ಇದೀಗ ಕೆಲವು ದೇಶಗಳಲ್ಲಿ ನೋ ಫಾಲ್ಟ್ ಡಿವೋರ್ಸ್ (no fault theory) ಚಾಲ್ತಿಯಲ್ಲಿದೆ. ಇದರಲ್ಲಿ, ಯಾರೂ ಯಾರ ಮೇಲೂ ದೋಷಾರೋಪ ಮಾಡುವಂತಿಲ್ಲ. ಕೇಸ್ ಬೇಗನೆ ಕೊನೆಗೊಳ್ಳುತ್ತೆ.
ಸೋವಿಯತ್ ಯೂನಿಯನ್ ಅಂದರೆ ರಷ್ಯಾದಲ್ಲಿ ಆರಂಭ
ನೋ ಫಾಲ್ಟ್ ಡಿವೋರ್ಸ್ ಜಗತ್ತಿಗೆ ಹೊಸದಾಗಿರಬಹುದು, ಆದರೆ ಇದು ರಷ್ಯಾದಲ್ಲಿ 100 ವರ್ಷಗಳಿಗಿಂತ ಚಾಲ್ತಿಯಲ್ಲಿದೆ. ಬೋಲ್ಷೆವಿಕ್ ಕ್ರಾಂತಿಯು 1917 ರಲ್ಲಿ ನಡೆಯಿತು. ವ್ಲಾಡಿಮಿರ್ ಲೆನಿನ್ ಅದರ ನಾಯಕರಾಗಿದ್ದರು, ಅವರು ದೇಶವನ್ನು ಆಧುನೀಕರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಅದಕ್ಕೂ ಮೊದಲು, ರಷ್ಯಾದ ಆರ್ಥೊಡಾಕ್ಸ್ ಚರ್ಚ್ ಮದುವೆ ಮತ್ತು ಡಿವೋರ್ಸ್ ನೋಡಿಕೊಳ್ಳುತ್ತಿತ್ತು. ಆ ಸಂದರ್ಭದಲ್ಲಿ ವಿಚ್ಛೇದನ ನೀಡಲೇಬಾರದು ಎಂದು ಹೇಳಲಾಗುತ್ತಿತ್ತು, ದಂಪತಿ ತುಂಬಾ ಅಸಂತುಷ್ಟರಾಗಿದ್ದರೂ ಡಿವೋರ್ಸ್ ನೀಡುವಂತಿರಲಿಲ್ಲ. ದೈಹಿಕ ಹಿಂಸೆ (physical abuse), ಹಲ್ಲೆ, ಮೋಸದಂತಹ ಗಂಭೀರ ಸಂದರ್ಭದಲ್ಲಿ ಮಾತ್ರ ಡಿವೋರ್ಸ್ ನೀಡಲಾಗುತ್ತಿತ್ತು.
ಬೋಲ್ಷೆವಿಕ್ ಕ್ರಾಂತಿಯ ನಂತರ, ಮದುವೆಯ ಧಾರ್ಮಿಕ ಪರದೆ ತೆಗೆದುಹಾಕಲಾಯಿತು. ಆಗಲೂ ಮದುವೆ ಅನ್ನೋದು ತುಂಬಾನೆ ಪವಿತ್ರವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಷ್ಟವಿಲ್ಲದಿದ್ದರೂ ಸಂಗಾತಿ ಜೊತೆ ಉಳಿಯಬೇಕು ಎಂದು ಯಾರೂ ಹೇಳುತ್ತಿರಲಿಲ್ಲ. ದಂಪತಿ ರಷ್ಯಾದ ನೋಂದಣಿ ಕಚೇರಿಗೆ (registrar office) ಹೋಗಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸುತ್ತಿದ್ದರು. ಮೂರು ದಿನಗಳಲ್ಲಿ, ಇನ್ನೊಂದು ಪಾರ್ಟಿಗೆ ನೋಟಿಸ್ ಕಳುಹಿಸಲಾಗುತ್ತಿತ್ತು, ಜೊತೆಗೆ ತ್ವರಿತ ನಿರ್ಧಾರ ಸಹ ತೆಗೆದುಕೊಳ್ಳಲಾಗುತ್ತಿತ್ತು.
