ಭಾರತದಲ್ಲಿ ತಿಂಗಳಲ್ಲಿ ಮಾಡೋ ಕ್ಯಾಶ್‌ಲೆಸ್‌ ಪಾವತಿ ಅಮೆರಿಕದಲ್ಲಿ 3 ವರ್ಷಕ್ಕೆ ಸಮ: ಕೇಂದ್ರ ಸಚಿವ ಜೈಶಂಕರ್

3 ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಮಾಡುವ ನಗದು ರಹಿತ ವ್ಯವಹಾರಗಳ ಸಂಖ್ಯೆಯನ್ನು ಭಾರತವು ಒಂದು ತಿಂಗಳಲ್ಲಿ ಮಾಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

s jaishankar says india does cashless transactions in one month as united states does in 3 years ash

ದೆಹಲಿ (ಜನವರಿ 22, 2024): ಭಾರತದಲ್ಲಿ ನಿಜಕ್ಕೂ ಡಿಜಿಟಲ್‌ ಪಾವತಿ ಅಥವಾ ನಗದು ರಹಿತ ಪಾವತಿ ಇತ್ತೀಚಿನ ಕೆಲ ವರ್ಷಗಳಿಂದ ಕ್ರಾಂತಿಯನ್ನೇ ಮಾಡ್ತಿದೆ. ಈ ಬಗ್ಗೆ ನೈಜೀರಿಯಾದಲ್ಲಿ ಭಾರತೀಯ ಸಮುದಾಯದ ಜನರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. 

3 ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಮಾಡುವ ನಗದು ರಹಿತ ವ್ಯವಹಾರಗಳ ಸಂಖ್ಯೆಯನ್ನು ಭಾರತವು ಒಂದು ತಿಂಗಳಲ್ಲಿ ಮಾಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. 
ಪ್ರತಿಯೊಬ್ಬ ಭಾರತೀಯ ನಾಗರಿಕನ ಜೀವನವು ಸುಲಭವಾಗಿದೆ ಮತ್ತು ನಾವು ತಂತ್ರಜ್ಞಾನವನ್ನು ಅತ್ಯಂತ ಆಳವಾದ ರೀತಿಯಲ್ಲಿ ಅಳವಡಿಸಿಕೊಂಡಿದ್ದೇವೆ. ನೀವು ಇದನ್ನು ಪಾವತಿಯಲ್ಲಿ ನೋಡಬಹುದು, ಇಂದು ಕೆಲವೇ ಜನರು ನಗದು ರೂಪದಲ್ಲಿ ಪಾವತಿಸುತ್ತಾರೆ ಮತ್ತು ಕೆಲವೇ ಜನರು ನಗದು ಸ್ವೀಕರಿಸುತ್ತಾರೆ. ನಗದು ರಹಿತ ಪಾವತಿಗಳ ವಿಚಾರದಲ್ಲಿ  3 ವರ್ಷಗಳಲ್ಲಿ ಅಮೆರಿಕ ಮಾಡುವಷ್ಟು ಭಾರತದಲ್ಲಿ ಒಂದು ತಿಂಗಳಲ್ಲಿ ಮಾಡಲಾಗುತ್ತದೆ ಎಂದು ಜೈಶಂಕರ್ ಹೇಳಿದರು.

ಬ್ಯಾಂಕುಗಳಲ್ಲಿ ಕಾರ್ಡ್ ಟೋಕನೈಸೇಷನ್ ಪರಿಚಯಿಸಿದ RBI

ಕಳೆದ ದಶಕದಲ್ಲಿ ಭಾರತದ ಪರಿವರ್ತನೆಯನ್ನು ಪ್ರದರ್ಶಿಸುವ ಐದು ಪ್ರಮುಖ ಉದಾಹರಣೆಗಳನ್ನು ಸಹ ವಿದೇಶಾಂಗ ವ್ಯವಹಾರಗಳ ಸಚಿವ ವಿವರಿಸಿದ್ದಾರೆ. ನನ್ನ ಮಟ್ಟಿಗೆ, ಒಂದು ದೇಶವು ಸವಾಲನ್ನು ಹೇಗೆ ಎದುರಿಸುತ್ತದೆ, ಸವಾಲಿನಿಂದ ಚೇತರಿಸಿಕೊಳ್ಳುತ್ತದೆ ಮತ್ತು ಅಂತಹ ಬಲವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ, ಒಬ್ಬ ಸಾಮಾನ್ಯ ನಾಗರಿಕನ ಜೀವನವು ಹೇಗೆ ಉತ್ತಮಗೊಳ್ಳುತ್ತದೆ, ನಾವು ಪ್ರಪಂಚದ ಕಲ್ಪನೆಯನ್ನು ಸೆರೆಹಿಡಿಯುವ ಏನನ್ನಾದರೂ ಮಾಡಲು ಹೇಗೆ ಸಮರ್ಥರಾಗಿದ್ದೇವೆ. ಮತ್ತು ದೇಶದ ಹೊರಗಿನ ನಮ್ಮ ಜನರನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬುದು. ಕಳೆದ ದಶಕದಲ್ಲಿ ಭಾರತದಲ್ಲಿ ಏನು ಬದಲಾಗಿದೆ ಎಂಬುದಕ್ಕೆ ಇವು ಐದು ನಿಜವಾದ ಉದಾಹರಣೆಗಳಾಗಿವೆ ಎಂದೂ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದ್ದಾರೆ.

ಅಲ್ಲದೆ, ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಒತ್ತಿ ಹೇಳಿದ ಜೈಶಂಕರ್, ನವದೆಹಲಿಯ ವ್ಯವಹಾರ ಮನೋಭಾವವು ಸುಧಾರಿಸಿದೆ ಮತ್ತು ಇದರ ಪರಿಣಾಮವಾಗಿ ದೇಶಕ್ಕೆ ಹೂಡಿಕೆಯ ಹರಿವು ಅತ್ಯಧಿಕ ಮಟ್ಟಕ್ಕೆ ತಲುಪಿದೆ ಎಂದೂ ಹೇಳಿದರು. 

ಭಾರತದಲ್ಲಿ UPI ಎಟಿಎಂ ಕ್ರಾಂತಿ, ಡೆಬಿಟ್ ಕಾರ್ಡ್ ಇಲ್ಲದೆ ಸ್ಕ್ಯಾನ್ ಮೂಲಕ ಹಣ ವಿಥ್‌ಡ್ರಾ ಮಾಡಿ!

ಇಂದು, ಆರ್ಥಿಕತೆಯಲ್ಲಿ ಏನಾಗುತ್ತಿದೆ, ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ, ಆದರೆ ಅದು ಅದಕ್ಕಿಂತ ಹೆಚ್ಚು. ಇಂದು, ನೀವು ಭಾರತದಲ್ಲಿ ಆರ್ಥಿಕ ಚಟುವಟಿಕೆಯನ್ನು ನೋಡಿದರೆ, ನೀವು ಎಲ್ಲಿಗೆ ಹೋದರೂ, ಏನಾದರೊಂದು ನಿರ್ಮಾಣವಾಗುತ್ತಿದೆ. ಮೆಟ್ರೋ ನಿರ್ಮಾಣವಾಗುತ್ತಿದೆ, ರಸ್ತೆ ನಿರ್ಮಾಣವಾಗುತ್ತಿದೆ, ಹೊಸ ವಿಮಾನ ನಿಲ್ದಾಣಗಳು ಬರುತ್ತಿವೆ, ಹೊಸ ರೈಲುಗಳು ಬರುತ್ತಿವೆ, ರೈಲು ನಿಲ್ದಾಣಗಳು ಬರುತ್ತಿವೆ, ನಿಮ್ಮ ಹಳ್ಳಿಗೆ ಹೋದರೆ ಪೈಪ್‌ ನೀರು ಬರುತ್ತಿದೆ, ವಿದ್ಯುತ್ ಸಂಪರ್ಕ ಬರುತ್ತಿದೆ ಎಂದೂ ಜೈಶಂಕರ್ ಭಾರತ ಬದಲಾಗುತ್ತಿರುವ ಬಗ್ಗೆ ಹೇಳಿದ್ದಾರೆ.

ಇನ್ನೊಂದೆಡೆ, ಈ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವರು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಭಾರತ ವ್ಯವಹರಿಸಿದ ರೀತಿಯನ್ನು ಶ್ಲಾಘಿಸಿದರು. ಉಗಾಂಡಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ವಿದೇಶಾಂಗ ಸಚಿವರು ನೈಜೀರಿಯಾಕ್ಕೆ ಹೋಗಿದ್ದರು.

Latest Videos
Follow Us:
Download App:
  • android
  • ios