Asianet Suvarna News Asianet Suvarna News

ಬ್ಯಾಂಕುಗಳಲ್ಲಿ ಕಾರ್ಡ್ ಟೋಕನೈಸೇಷನ್ ಪರಿಚಯಿಸಿದ RBI

ಕಾರ್ಡ್ ಆನ್ ಟೋಕನ್ (ಸಿಒಎಫ್) ಸೌಲಭ್ಯವನ್ನು ಬ್ಯಾಂಕ್ ಹಾಗೂ ಇತರ ಸಂಸ್ಥೆಗಳಲ್ಲಿ ಆರ್ ಬಿಐ ಬುಧವಾರ ಪರಿಚಯಿಸಿದೆ. ಟೋಕನೈಸೇಷನ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸೋದು ಇದರ ಉದ್ದೇಶ.

RBI Introduces Card Tokenization Facility At Bank Level anu
Author
First Published Dec 22, 2023, 3:47 PM IST

Business Desk: ಬ್ಯಾಂಕ್ ಹಾಗೂ ಇತರ ಸಂಸ್ಥೆಗಳಲ್ಲಿ ಕಾರ್ಡ್ ಆನ್ ಟೋಕನ್ (ಸಿಒಎಫ್) ಸೌಲಭ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬುಧವಾರ ಪರಿಚಯಿಸಿದೆ. ಕಾರ್ಡ್ ದಾರರಿಗೆ ಟೋಕನ್ ಗಳನ್ನು ಪಡೆಯಲು ಹಾಗೂ ವಿವಿಧ ಇ-ಕಾಮರ್ಸ್ ತಾಣಗಳಲ್ಲಿರುವ ತಮ್ಮ ಖಾತೆಗಳಿಗೆ ಲಿಂಕ್ ಮಾಡಲು ನೆರವು ನೀಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ಸಿಒಎಫ್ ಟೋಕನ್ ಅನ್ನು ಮರ್ಚೆಂಟ್ ಅಪ್ಲಿಕೇಷನ್ ಅಥವಾ ವೆಬ್ ಪೇಜ್ ಮೂಲಕ ಮಾತ್ರ ಪಡೆಯಲು ಅವಕಾಶವಿದೆ. ಟೋಕನ್ 16 ವಿಶೇಷ ಅಂಕೆಗಳನ್ನು ಹೊಂದಿದ್ದು, ಇದು ಕಾರ್ಡ್, ಟೋಕನ್ ಮನಿ ಹಾಗೂ ಮರ್ಚೆಂಟ್ ಈ ಮೂರರ ಮಿಶ್ರಣವಾಗಿದೆ. ಕಾರ್ಡ್ ಆನ್ ಫೈಲ್ ಟೋಕನೈಸೇಷನ್‌ (ಸಿಒಎಫ್ ಟಿ) ವ್ಯವಸ್ಥೆಯನ್ನು ಆರ್ ಬಿಐ  2021ರ ಸೆಪ್ಟೆಂಬರ್ ನಲ್ಲಿ ಪರಿಚಯಿಸಿತ್ತು. ಆದರೆ, ಇದು ಅನುಷ್ಠಾನಕ್ಕೆ ಬರಲು ಪ್ರಾರಂಭವಾಗಿದ್ದು 2022ರ ಅಕ್ಟೋಬರ್ 1ರಿಂದ. ಇನ್ನು ಕಾರ್ಡ್ ದಾರರು ಯಾವುದೇ ಸಮಯದಲ್ಲಿ ತಮ್ಮ ಕಾರ್ಡ್ ಟೋಕನೈಸೇಷನ್ ಮಾಡಬಹುದು.

ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚಾದಂತೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2019 ರಲ್ಲಿ ಕಾರ್ಡ್ ವಹಿವಾಟುಗಳ ಸುರಕ್ಷತೆಯನ್ನು ಸುಧಾರಿಸಲು ಕಾರ್ಡ್ ವಹಿವಾಟುಗಳನ್ನು ಟೋಕನೈಸ್ ಮಾಡಲು ಕಾರ್ಡ್ ನೆಟ್‌ವರ್ಕ್‌ಗಳಿಗೆ ಅವಕಾಶ ಮಾಡಿಕೊಟ್ಟಿತು. 

NPS ಹೂಡಿಕೆ ಈಗ ಇನ್ನಷ್ಟು ಸರಳ; ಕ್ಯುಆರ್ ಕೋಡ್ ಬಳಸಿ ಕೊಡುಗೆಗೆ ಅವಕಾಶ

ಟೋಕನೈಸೇಷನ್ ಅಂದ್ರೇನು ?
ಕ್ರೆಡಿಟ್ (Credit) ಅಥವಾ ಡೆಬಿಟ್ (Debit) ಕಾರ್ಡ್ ಮಾಹಿತಿಗಳನ್ನು ಟೋಕನ್ (Token) ಎಂಬ ಪರ್ಯಾಯ ಕೋಡ್ ಗೆ ಬದಲಾಯಿಸೋ ಪ್ರಕ್ರಿಯೆಯನ್ನು ಟೋಕನೈಸೇಷನ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಡ್ ಮಾಹಿತಿಗಳನ್ನು 'ಟೋಕನ್' ಎಂಬ ವಿಶಿಷ್ಟ ಪರ್ಯಾಯ ಕೋಡ್ ಗೆ ಬದಲಾಯಿಸಲಾಗುತ್ತದೆ. ಪ್ರತಿ ಕಾರ್ಡ್, ಸಾಧನ ಹಾಗೂ ಟೋಕನ್ ಮನವಿದಾರರನ್ನು ಪರಿಗಣಿಸಿ  ಹೊಸ ಟೋಕನ್ ನೀಡಲಾಗುತ್ತದೆ. ಈ ಟೋಕನ್ ವ್ಯವಸ್ಥೆಯಿಂದಾಗಿ ಗ್ರಾಹಕರ ಕಾರ್ಡ್ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ವ್ಯಾಪಾರಿಗೆ ತಿಳಿಯೋದಿಲ್ಲ.  

ಡೆಬಿಟ್ (Debit) ಅಥವಾ ಕ್ರೆಡಿಟ್ ಕಾರ್ಡ್ (Credit card) ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ಹಿಂದೆ  ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇದ್ರಿಂದ ತಕ್ಷಣವೇ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿತ್ತು. ಇದು ವರ್ತಕ ಹಾಗೂ ಗ್ರಾಹಕ ಇಬ್ಬರಿಗೂ ಸಮಯ ಉಳಿತಾಯ ಮಾಡುತ್ತಿತ್ತು. 

ಟೋಕನೈಸೇಷನ್ ಜಾರಿ ಬಳಿಕ ವ್ಯಾಪಾರಿಗಳು, ಪಾವತಿ ಸಂಗ್ರಾಹಕರು ಮತ್ತು ಪಾವತಿ ಗೇಟ್‌ವೇಗಳು ಇನ್ನು ಮುಂದೆ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳನ್ನು ತಡೆಗಟ್ಟುವುದು ಟೋಕನೈಸೇಷನ್ ವ್ಯವಸ್ಥೆಯನ್ನು ಜಾರಿಗೊಳಿಸುವ ಉದ್ದೇಶವಾಗಿದೆ. ಟೋಕನೈಸೇಷನ್ ಕಡ್ಡಾಯವಲ್ಲ, ಆದರೆ ಅದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಪುನರಾವರ್ತಿತ ಖರೀದಿಗಳನ್ನು ಮಾಡಲು ಇದು ಸುಲಭಗೊಳಿಸುತ್ತದೆ.

ಆಧಾರ್ ಕಾರ್ಡ್ ಪಡೆಯಲು ಹೊಸ ನಿಯಮ, ಪಾಸ್‌ಪೋರ್ಟ್ ರೀತಿ ವೆರಿಫಿಕೇಶನ್ ಕಡ್ಡಾಯ!

ಅಂದಹಾಗೇ ಟೋಕನೈಸೇಶನ್ ಕಡ್ಡಾಯವಲ್ಲ, ಆದರೆ ಅದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಪುನರಾವರ್ತಿತ ಖರೀದಿಗಳನ್ನು ಮಾಡಲು ಇದು ಸುಲಭಗೊಳಿಸುತ್ತದೆ. ಇನ್ನು ಸಿಒಎಫ್ ಟಿಯನ್ನು ಸಂಬಂಧಪಟ್ಟ ಗ್ರಾಹಕನ ಅನುಮತಿ ಪಡೆದ ಬಳಿಕವಷ್ಟೇ ಸೃಷ್ಟಿಸಬೇಕು. ಇನ್ನು ಕಾರ್ಡ್ ದಾರರು ಕಾರ್ಡ್ ಅನ್ನು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಯಾವಾಗ ಬೇಕಾದರೂ ಟೋಕನೈಸೇಷನ್ ಮಾಡಬಹುದು. ಹೊಸ ಕಾರ್ಡ್ ಪಡೆದುಕೊಳ್ಳುವಾಗ ಅಥವಾ ಆ ಬಳಿಕ ಕೂಡ ಇದನ್ನು ಮಾಡಬಹುದು. 

Follow Us:
Download App:
  • android
  • ios