Asianet Suvarna News Asianet Suvarna News

ಭಾರತದಲ್ಲಿ UPI ಎಟಿಎಂ ಕ್ರಾಂತಿ, ಡೆಬಿಟ್ ಕಾರ್ಡ್ ಇಲ್ಲದೆ ಸ್ಕ್ಯಾನ್ ಮೂಲಕ ಹಣ ವಿಥ್‌ಡ್ರಾ ಮಾಡಿ!

ಡಿಜಿಟಲ್ ಇಂಡಿಯಾ ಮೂಲಕ ಭಾರತ ವಿಶ್ವದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ. ಇದೀಗ ಮತ್ತೊಂದು ಕ್ರಾಂತಿ ಮಾಡಿದೆ. ಡೆಬಿಡ್ ಕಾರ್ಡ್ ಸೇರಿದಂತೆ ಯಾವುದೇ ಕಾರ್ಡ್ ಅವಶ್ಯಕತೆ ಇಲ್ಲ. ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ಸಾಧ್ಯ. ಇದಕ್ಕಾಗಿ UPI ATM ಲಭ್ಯವಿದೆ.

Digital Revolution In India UPI ATM machine introduced for cash withdraw without debit card ckm
Author
First Published Sep 6, 2023, 4:30 PM IST

ನವದೆಹಲಿ(ಸೆ.06) ಡಿಜಿಟಲ್ ಇಂಡಿಯಾ ಮೂಲಕ ಭಾರತ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಈಗಾಗಲೇ ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ಅಗ್ರಗಣ್ಯ ದೇಶಗಳನ್ನು ಹಿಂದಿಕ್ಕಿದೆ.  ಇದೀಗ ಭಾರತ ಮತ್ತೊಂದು ಕ್ರಾಂತಿ ಮಾಡಿದೆ. ಯುಪಿಐ ಬಳಕೆ ಹೆಚ್ಚಾದ ಬಳಿಕ ಹಲವರು ಎಟಿಎಂ ಕಾರ್ಡ್ ಬಳಕೆ ಕಡಿಮೆ ಮಾಡಿದ್ದಾರೆ. ಇನ್ನು ಡೆಬಿಡ್ ಕಾರ್ಡ್ ಬಳಕೆಯಲ್ಲಿ ವಂಚನೆ ನಡೆಯುವ ಸಾಧ್ಯತೆಗಳೂ ಇದೆ. ಆದರೆ ಹಲವು ಬಾರಿ ನಗದು ಹಣದ ಅವಶ್ಯಕತೆ ಬಂದಾಗ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಲ್ಲದೆ ತಡಬಡಿಸುವುದು ಸಹಜ. ಈ ಸಮಸ್ಯೆಗೆ ಉತ್ತರವಾಗಿ ಇದೀಗ ಭಾರತದಲ್ಲಿ UPI ATM ಸೇವೆ ಲಭ್ಯವಿದೆ. ಇಲ್ಲಿ ಹಣ ಪಡೆಯಲು ಯಾವುದೇ ಕಾರ್ಡ್ ಅವಶ್ಯಕತೆ ಇಲ್ಲ. ನೀವು ಎಂದಿನಂತೆ ಯುಪಿಐ ಸ್ಕ್ಯಾನ್ ಮಾಡಿ ಎಟಿಎಂನಿಂದ ಸುಲಭವಾಗಿ ಹಣ ಪಡೆದುಕೊಳ್ಳಲು ಸಾಧ್ಯ.

ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಹಿಟಾಚಿ ಪೇಮೆಂಟ್ ಸರ್ವೀಸ್ ಜಂಟಿಯಾಗಿ UPI ATM ಅಭಿವೃದ್ಧಿಪಡಿಸಿದೆ. UPI  ಪೇಮೆಂಟ್ ಬಳಕೆ ಮಾಡುತ್ತಿರುವ ಗ್ರಾಹಕರು ಯಾವುದೇ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂನಿಂದ ಸುಲಭವಾಗಿ ಹಣ ಪಡೆದುಕೊಳ್ಳಬಹುದು. UPI ATM ಮಶಿನ್ ಬಳಿ ತೆರಳಿ ಹಣ ವಿತ್‌ಡ್ರಾ ಆಯ್ಕೆ ಕ್ಲಿಕ್ ಮಾಡಬೇಕು. ಈ ವೇಳೆ ವಿತ್‌ಡ್ರಾ ಮಾಡಬೇಕಿರುವ ಹಣ ಎಷ್ಟು ಅನ್ನೋದನ್ನು ಮಶಿನ್ ಕೇಳಲಿದೆ. ಇದರ ಜೊತೆಗೆ ಆಯ್ಕೆಯನ್ನೂ ನೀಡಲಿದೆ. 500, 1000, 2000 ರೂಪಾಯಿ ಆಯ್ಕೆ ನೀಡಲಿದೆ. ಈ ಆಯ್ಕೆಯಲ್ಲಿ ಪಡೆಯಬೇಕಾಗಿರುವ ಹಣ ಕ್ಲಿಕ್ ಮಾಡಿದಾಗ ಸ್ಕ್ಯಾನ್ ಕೋಡ್ ತೆರೆದುಕೊಳ್ಳಲಿದೆ.

 

ಡಿಜಿಟಲ್ ಇಂಡಿಯಾ: ಒಂದೇ ತಿಂಗಳಲ್ಲಿ 10 ಕೋಟಿ ಯುಪಿಐ ವಹಿವಾಟು ದಾಖಲೆ

ಈ ವೇಳೆ ನಿಮ್ಮ ಮೊಬೈಲ್‌ನಲ್ಲಿರುವ ಯುಪಿಐ ಸ್ಕ್ಯಾನರ್ ಒಪನ್ ಮಾಡಿ ಸ್ಕ್ಯಾನ್ ಮಾಡಬೇಕು. ಇದು ಮರ್ಚೆಂಟ್ ಸ್ಕ್ಯಾನ್ ರೀತಿ ಇರುವುದಿಲ್ಲ. UPI ATM ಸ್ಕ್ಯಾನ್ ಕೋಡ್ ಸ್ಕ್ಯಾನ್ ಮಾಡಿದ ಬೆನ್ನಲ್ಲೇ ನೀವು ನಗದು ಹಣ ಪಡೆಯುತ್ತಿದ್ದೀರಿ ಅನ್ನೋನೋಟಿಫಿಕೇಶನ್ ನಿಮಗೆ ಕಾಣಲಿದೆ. ನೀವು UPI ATM ಮಶಿನ್‌ನಲ್ಲಿ ಎಷ್ಟುರೂಪಾಯಿ ಬೇಕೆಂದು ಕ್ಲಿಕ್ ಮಾಡಿದ್ದೀರೋ, ಅಷ್ಟು ಹಣವನ್ನು ನಮೂದಿಸಿ. ಬಳಿಕ UPI ಪಿನ್ ಕೋಡ್ ಹಾಕಿದರೆ ನಿಮ್ಮ ಹಣ UPI ATM ಮಶಿನ್‌ಗೆ ವರ್ಗಾವಣೆಯಾಗಲಿದೆ. ಕ್ಷಣಾರ್ಧದಲ್ಲೇ UPI ATM  ಮಶಿನ್‌ ನಿಮಗೆ ಹಣ ನೀಡಲಿದೆ.

 

 

ಈ UPI ATM ಮಶಿನ್ ಹಾಗೂ ಡಿಜಿಟಲ್ ಹಣ ವಿತ್‌ಡ್ರಾನಿಂದ ಹಲವು ವಂಚನೆಗಳು ತಡೆಯಲಿದೆ. ಪ್ರಮುಖವಾಗಿ ಎಟಿಎಂ ಮಶಿನ್‌ನಲ್ಲಿ ವಂಚಕರು ಡಿವೈಸ್ ಅಳವಡಿಸಿ ನಿಮ್ಮ ಎಟಿಎಂ ಕಾರ್ಡ್ ನಂಬರ್, ಪಿನ್‌ಕೋಡ್ ಸೇರಿದಂತೆ ಇತರ ಗೌಪ್ಯ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ. ಆದರೆ ಇಲ್ಲಿ ಸ್ಕ್ಯಾನರ್ ಮೂಲಕ ಹಣ ಪಡೆಯುವುದರಿಂದ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಾಗಿದೆ. ಹೀಗಾಗಿ ಈ ಪದ್ಧತಿಯಲ್ಲಿ ವಂಚನೆ ಸಾಧ್ಯತೆಗಳು ಕಡಿಮೆ. 

UPI Payment: ತರಕಾರಿ ಮಾರ್ಕೆಟ್‌ನಲ್ಲಿ QR Code ಸ್ಕ್ಯಾನ್‌ ಮಾಡಿ ಹಣ ಪಾವತಿಸಿದ ಜರ್ಮನಿ ಸಚಿವ!

 ಇದೀಗ UPI ATM ಮಶಿನ್‌ಗಳು ದೇಶದ ವಿವಿಧ ಭಾಗಗಲ್ಲಿ ಸ್ಥಾಪಿಸಲಾಗುತ್ತಿದೆ.  ಸದ್ಯ ಮುಂಬೈ ಸೇರಿದಂತೆ ಕೆಲ ನಗರದಲ್ಲಿ ಈ UPI ATM ಮಶಿನ್‌ಗಳಿವೆ. 
 

Follow Us:
Download App:
  • android
  • ios