ರಷ್ಯಾ ವಿದೇಶಾಂಗ ಸಚಿವರ ಎರಡು ದಿನಗಳ ಭಾರತ ಪ್ರವಾಸ ರಷ್ಯಾದಿಂದ ಭಾರತಕ್ಕೆ ಅತ್ಯುನ್ನತ ಮಟ್ಟದ ಭೇಟಿ ಯುದ್ಧಕ್ಕೆ ಅಂತ್ಯ ಹಾಡುತ್ತಾ ಭಾರತ, ಕುತೂಹಲ ಮೂಡಿಸಿದ ಭೇಟಿ
ನವದೆಹಲಿ(ಮಾ.31): ರಷ್ಯಾದ ವಿದೇಶಾಂಗ ಸಚಿವ ಸೆರ್ಗೈ ಲಾವ್ರೋವ್ ಅವರು ಮಾ.31 ಮತ್ತು ಏ.1ರಂದು 2 ದಿನಗಳ ಕಾಲ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ಹೇಳಿದೆ. ಫೆ.24ರಂದು ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದ ನಂತರ ಇದು ರಷ್ಯಾದಿಂದ ಭಾರತಕ್ಕೆ ಅತ್ಯುನ್ನತ ಮಟ್ಟದ ಭೇಟಿಯಾಗಿದೆ.
2 ದಿನಗಳ ಚೀನಾ ಭೇಟಿಯನ್ನು ಮುಗಿಸಿದ ನಂತರ ಲಾವ್ರೋವ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ‘ರಷ್ಯಾ ಒಕ್ಕೂಟದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಅವರು ಮಾ.31 ಮತ್ತು ಏ.1ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಲಾವ್ರೋವ್ ಅವರಲ್ಲದೇ. ಕಾಕತಾಳೀಯವೆಂಬಂತೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಮತ್ತು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಸಹ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧಕ್ಕೆ ಮೋದಿಯೇ ಕಾರಣ ಎಂದ ದೀದೀ, ನಟ್ಟಿಗರು ಗರಂ!
ಯಶಸ್ವಿ ಸಂಧಾನದತ್ತ ರಷ್ಯಾ-ಉಕ್ರೇನ್ ಹೆಜ್ಜೆ
ಉಕ್ರೇನ್‌ನೊಂದಿಗೆ ನಡೆದಿರುವ ಸಂಧಾನ ಮಾತುಕತೆ ಸಕಾರಾತ್ಮಕ ದಿಕ್ಕಿನತ್ತ ಸಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೋವ್ ಹೇಳಿದ್ದಾರೆ. ಈ ಕುರಿತು ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಲಾವ್ರೋವ, ಇದೀಗ ನಮ್ಮ ಮಾತುಕತೆ ಮುಖ್ಯವಾಗಿ ಉಕ್ರೇನ್‌ಗೆ ತಟಸ್ಥ ದೇಶದ ಸ್ಥಾನಮಾನ ನೀಡುವತ್ತ ಇದೆ. ಇದರಲ್ಲಿ ಉಕ್ರೇನ್‌ಗೆ ಭದ್ರತಾ ಖಾತರಿ ನೀಡುವುದು ಕೂಡಾ ಒಳಗೊಂಡಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಸಂಧಾನ ಮಾತುಕತೆಯಲ್ಲಿ ಭಾಗಿಯಾಗಿದ್ದ ರಷ್ಯಾ ಪರ ಮುಖ್ಯ ಪ್ರತಿನಿಧಿ ವ್ಲಾಡಿಮಿರ್ ಮೆಡಿನ್‌ಸ್ಕೈ ಕೂಡಾ ‘ಭವಿಷ್ಯದ ಉಕ್ರೇನ್‌ಗೆ ಸಣ್ಣ ತಟಸ್ಥ ಸೇನೆ ನಿರ್ಮಾಣದ ಪ್ರಸ್ತಾಪ ಒಳಗೊಂಡಿದೆ. ಈ ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳುವತ್ತ ನಾವು ಹೆಜ್ಜೆ ಇಟ್ಟಿದ್ದೇವೆ’ ಎಂದು ಸುಳಿವು ನೀಡಿದ್ದಾರೆ.
ಅಣ್ವಸ್ತ್ರ ದಾಳಿ ಚಿಂತನೆ ಪಾಶ್ಚಾತ್ಯ ದೇಶದ್ದು, ನಮ್ಮದಲ್ಲ: ರಷ್ಯಾ
ಕೆಲ ದಿನಗಳಿಂದ ಅಮೆರಿಕ ಸೇರಿದಂತೆ ನ್ಯಾಟೋ ದೇಶಗಳಿಗೆ ಹಲವು ಬಾರಿ ಪರಮಾಣು ದಾಳಿಯ ಪರೋಕ್ಷ ಎಚ್ಚರಿಕೆ ನೀಡುತ್ತಲೇ ಬಂದಿದ್ದ ರಷ್ಯಾ, ಇದೀಗ ಪೂರ್ಣ ಉಲ್ಟಾಹೊಡೆದಿದೆ. ‘ಪರಮಾಣು ದಾಳಿಯ ವಿಷಯ ಗಿರಕಿ ಹೊಡೆಯುತ್ತಿರುವುದು ಪಾಶ್ಚಾತ್ಯ ದೇಶಗಳ ತಲೆಯಲ್ಲೇ ಹೊರತೂ ನಮ್ಮಲ್ಲಲ್ಲ’ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಪರಮಾಣು ಯುದ್ಧದ ಭೀತಿಯನ್ನು ಸ್ವಲ್ಪ ತಿಳಿಗೊಳಿಸುವ ಯತ್ನ ಮಾಡಿದೆ.
Ukraine Crisis 34 ದಿನಗಳ ಯುದ್ಧದ ಬಳಿಕ ಮಹತ್ವದ ತಿರುವು, ದಾಳಿ ಕಡಿತಕ್ಕೆ ರಷ್ಯಾ ಒಪ್ಪಿಗೆ!
ಗುರುವಾರ ದೇಶಿ ಮತ್ತು ವಿದೇಶಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೋವ್, ‘ಒಂದಂದೂ ಸತ್ಯ, ಮೂರನೇ ಮಹಾಯುದ್ಧವೇನಾದರೂ ಆದರೆ ಪರಮಾಣು ಅಸ್ತ್ರಗಳನ್ನೇ ಒಳಗೊಂಡಿರಲಿದೆ. ಆದರೆ ಪರಮಾಣು ದಾಳಿಯ ವಿಷಯ ಹಲವು ದಿನಗಳಿಂದ ಗಿರಕಿ ಹೊಡೆಯುತ್ತಿರುವುದು ಪಾಶ್ಚಾತ್ಯ ದೇಶಗಳ ತಲೆಯಲ್ಲೇ ಹೊರತೂ ರಷ್ಯಾ ತಲೆಯಲ್ಲಲ್ಲ. ಆದರೂ ಒಂದು ವಿಷಯ ಖಚಿತಪಡಿಸುತ್ತೇನೆ. ಈ ವಲಯದಲ್ಲಿ ಸಮತೋಲನವನ್ನು ಹದಗೆಡಿಸುವ ಯಾವುದೇ ಪ್ರಚೋದನೆಗಳಿಗೆ ನಾವು ಅವಕಾಶ ನೀಡುವುದಿಲ್ಲ’ ಎಂದರು. ಈ ಮೂಲಕ ಉಕ್ರೇನ್‌ಗೆ ನ್ಯಾಟೋ ಸೇರಿದಂತೆ ಯಾವುದೇ ದೇಶಗಳು ಪರಮಾಣು ಅಸ್ತ್ರವನ್ನು ನೀಡಿದರೆ ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸಿದರು.
ರಷ್ಯಾ ವಿದೇಶಾಂಗ ಸಚಿವರ ಭಾಷಣದ 100 ರಾಯಭಾರಿಗಳ ಸಭಾತ್ಯಾಗ
ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೀ ಲಾವ್ರೋವ್ ಭಾಷಣ ಆರಂಭಿಸುತ್ತಿದ್ದಂತೆ 40 ದೇಶಗಳ ನೂರಕ್ಕೂ ಹೆಚ್ಚು ರಾಯಭಾರಿಗಳು ಸಭೆಯಿಂದ ಹೊರನಡೆದಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ವಿರೋಧ ತೋರಿಸಲು ಈ ರೀತಿ ನಡೆದುಕೊಂಡಿದ್ದಾರೆ. ಐರೋಪ್ಯ ಒಕ್ಕೂಟ, ಅಮೆರಿಕ, ಬ್ರಿಟನ್, ಜಪಾನ್ ಸೇರಿದಂತೆ ಹಲವು ಪ್ರಮುಖ ದೇಶಗಳ ರಾಯಭಾರಿಗಳು ಸಭೆಯನ್ನು ತೊರೆದರು. ಸಿರಿಯಾ, ಚೀನಾ ಮತ್ತು ವೆನಿಜುವೆಲಾದ ರಾಯಭಾರಿಗಳು ಮಾತ್ರ ಸಭೆಯಲ್ಲಿ ಭಾಗವಹಿಸಿದರು.
ಉಕ್ರೇನ್‌ಗೆ ಬೆಂಬಲ ಸೂಚಿಸಿದ ಎಲ್ಲಾ ದೇಶಗಳಿಗೂ ಉಕ್ರೇನ್‌ನ ರಾಯಭಾರಿ ಯೆವ್ಹೆನಿಯಾ ಫಿಲಿಪೆಂಕೋ ಧನ್ಯವಾದ ಅರ್ಪಿಸಿದ್ದಾರೆ. ‘ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಉಕ್ರೇನ್‌ಗೆ ಈ ಮಟ್ಟಿಗಿನ ಬೆಂಬಲ ಸೂಚಿಸಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಐರೋಪ್ಯ ಒಕ್ಕೂಟ ರಷ್ಯಾದ ವಿಮಾನಗಳಿಗೆ ನಿಷೇಧ ಹೇರಿರುವುದರಿಂದ ಲಾವ್ರೋವ್ ರಿಮೋಟ್ ಮೂಲಕ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದೊಂದಿಗೆ ಮಾತನಾಡಿದರು.
