ರಷ್ಯಾ-ಉಕ್ರೇನ್ ಯುದ್ಧಕ್ಕೆ ಮೋದಿಯೇ ಕಾರಣ ಎಂದ ದೀದೀ, ನಟ್ಟಿಗರು ಗರಂ!

* ಪಿಎಂ ಮೋದಿ ವಿರುದ್ಧ ಸದಾ ಕಿಡಿ ಕಾರುವ ಮಮತಾ

* ರಷ್ಯಾ- ಉಕ್ರೇನ್ ಯುದ್ಧಕ್ಕೆ ಪಿಎಂ ಮೋದಿಯೇ ಕಾರಣ ಎಂದ ದೀದೀ

* ದೀದೀ ಹೇಳಿಕೆಗೆ ಭಾರೀ ಆಕ್ರೋಶ

PM Modi Is Responsible For Russia Ukraine War Says West Bengal CM Mamata Banerjee pod

ಕೋಲ್ಕತ್ತಾ(ಮಾ.30): ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಪ್ರತಿ ವಿಷಯದಲ್ಲೂ ವಿರೋಧಿಸಿ, ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ನಮ್ಮ ಮಕ್ಕಳು ಮರಳಿ ಬಂದರೆ ಏನು ತಿನ್ನುತ್ತಾರೆ ಎಂದು ಯುದ್ಧ ಆರಂಭಿಸುವ ಮುನ್ನ ನಮ್ಮ ಮಕ್ಕಳು ಮರಳಿ ಬರುವಾಗ ಏನು ತಿನ್ನುತ್ತಾರೆ? ಎಲ್ಲಿಗೆ ಹೋಗಬೇಕು? ಹೇಗೆ ಓದಬೇಕು ಎಂಬ ಬಗ್ಗೆ ಯುದ್ಧ ಆರಂಭಕ್ಕೂ ಮೊದಲು ಯೋಚಿಸಬಾರದಿತ್ತಾ? ಮಮತಾ ಸ್ಪಷ್ಟವಾಗಿ ಹೇಳಿದ್ದಾರೆ.  ಮಮತಾ ಅವರ ಈ ವಿಡಿಯೋಗೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಜಗತ್ತಿನಾದ್ಯಂತ ಭಾರತಕ್ಕೆ ನಾಚಿಕೆಗೇಡಿನ ಸಂಗತಿ ಎಂದೂ ಬಿಜೆಪಿ ಹೇಳಿದೆ.

ನನಗೆ ನಾಚಿಕೆಯಾಗುತ್ತಿದೆ ಎಂದ ಸುವೆಂದು ಅಧಿಕಾರಿ

ಮಮತಾ ಅವರ ಈ ಭಾಷಣದ ವೀಡಿಯೊವನ್ನು ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಗೌರವಾನ್ವಿತ ವಿದೇಶಾಂಗ ಸಚಿವ ಎಸ್ ಜೈಶಂಕರ್ ದಯವಿಟ್ಟು ಈ ವೀಡಿಯೊವನ್ನು ವೀಕ್ಷಿಸಿ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿ. ನಮ್ಮ ಮುಖ್ಯಮಂತ್ರಿಯ ತಪ್ಪಿನಿಂದಾಗಿ ನೀವು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಪಡಬೇಕಾಗಬಹುದು ಎಂದಿದ್ದಾರೆ.

ಈ ವಿಡಿಯೋ ಮಂಗಳವಾರ ಮಾಡಿದ ಭಾಷಣದ್ದು ಎಂದು ಹೇಳಲಾಗುತ್ತಿದೆ. ಅಲ್ಲದೇ ಸುವೆಂದುಈ ವಿಡಿಯೋ ಶೇರ್ ಮಾಡುತ್ತಾ ನಮ್ಮ ಮುಖ್ಯಮಂತ್ರಿ ನಿನ್ನೆ ತನ್ನ ಮಿತಿಯನ್ನು ಮೀರಿದ್ದಾರೆ ಮತ್ತು ಕೇಂದ್ರ ಸರ್ಕಾರವು ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು. ಈ ಪದಗಳನ್ನು ಭಾರತದ ವಿರುದ್ಧ ರಾಜತಾಂತ್ರಿಕವಾಗಿ ಬಳಸಬಹುದೆಂದು ಅವರಿಗೆ ತಿಳಿದಿಲ್ಲವೇ? ನಮ್ಮ ವಿದೇಶಾಂಗ ನೀತಿ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ.

ಎರಡನೆಯ ಮಹಾಯುದ್ಧವೂ ಮೋದಿಯವರಿಂದ ಸಂಭವಿಸಿತು, ದೀದೀ ಹೇಳಿಕೆ ಟ್ರೋಲ್

ಸುವೇಂದು ಅಧಿಕಾರಿಯ ಈ ಟ್ವೀಟ್‌ನಲ್ಲಿ ಮಮತಾ ಅವರ ಈ ಹೇಳಿಕೆಗೆ ಜನರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಮಲ್ ಸಿಂಗ್ ಎಂಬ ಬಳಕೆದಾರರು ಮೂದಲಿಸುವ ರೀತಿಯಲ್ಲಿ ಎರಡನೇ ವಿಶ್ವ ಮಹಾಯುದ್ಧ ಕೂಡ ಮೋದಿ ಜಿ ಮತ್ತು ಬಿಜೆಪಿಯ ಕಾರಣದಿಂದಾಗಿ ಸಂಭವಿಸಿತು ಎಂದಿದ್ದಾರೆ. ಗಿರಿಜಾ ಶಂಕರ್ ಎಂಬಾಕೆ ವೆರಿ ಗುಡ್ ಬೆಂಗಾಲ್... ನೀವು ಉತ್ತಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದೀರಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಬೆಂಗಾಲಿಗಳು ಒಬ್ಬ ಹುಚ್ಚ ಮಹಿಳೆಯನ್ನು ಆರಿಸಿ ನಂತರ ಕೆಲಸಕ್ಕಾಗಿ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಗೆ ಹೋಗುತ್ತಾರೆ ಎಂದಿದ್ದಾರೆ. ಸೌರಭ್ ಪ್ರಯಾಗ್ರಾಜ್ ಎಂಬ ಬಳಕೆದಾರರು ಮಮತಾ 'ಮಾನಸಿಕವಾಗಿ ಅಸ್ಥಿರ' ಎಂದು ಕರೆದಿದ್ದಾರೆ. ಒಬ್ಬ ಬಳಕೆದಾರರು ಮಮತಾ ಅವರಿಗೆ ಸಲಹೆ ನೀಡುತ್ತಾ ಹಲೋ ಮಮತಾ ಜೀ, ಮೊದಲು ಮೋದಿ ಜೀ ನಿಮ್ಮ ದೇಶದಲ್ಲಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲಿ. ಪಶ್ಚಿಮ ಬಂಗಾಳ ಎಂಬ ರಾಜ್ಯ ಸದಾ ಹೊತ್ತಿ ಉರಿಯುತ್ತಿದೆ. ಇಲ್ಲಿ ಪದವೀಧರರಿಗೆ 'ಸ್ಮಶಾನ ಭೂಮಿ'ಯಲ್ಲಿ ಕೆಲಸ ನೀಡಲಾಗುತ್ತದೆ ಎಂದಿದ್ದಾರೆ.

ಶಾಂತಿ ಸ್ಥಾಪನೆಗೆ ಭಾರತ ಒತ್ತು

ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಭಾರತ ಹಲವು ಬಾರಿ ಶಾಂತಿ ಸ್ಥಾಪನೆಗೆ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಹಿಂಸಾಚಾರ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಇಸ್ರೇಲ್ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವೆ ಒಪ್ಪಂದ ಮಾಡಿಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ ಎಂಬ ವರದಿಗಳಿವೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊಲ್ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಈ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಭೇಟಿಗಳನ್ನು ಶಾಂತಿ ಒಪ್ಪಂದಕ್ಕೆ ಸೂತ್ರ ಸಿದ್ಧಪಡಿಸುವ ಕಸರತ್ತು ಎಂದು ಪರಿಗಣಿಸಲಾಗಿದೆ. ಉಕ್ರೇನ್‌ನ ಸಹಾಯಕ ರಾಷ್ಟ್ರ ಮತ್ತು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ಪ್ರಧಾನಿ ಅವರು ಎರಡೂ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಾರೆ ಮತ್ತು ನಂತರ ಯುಎಸ್‌ನೊಂದಿಗೆ ಮಾತನಾಡುತ್ತಾರೆ.

Latest Videos
Follow Us:
Download App:
  • android
  • ios