Asianet Suvarna News Asianet Suvarna News

ಕೋವಿಡ್ ಆತಂಕ, ತಾಜ್‌ಮಹಲ್ ಪ್ರವೇಶಕ್ಕೆ ನೆಗಟೀವ್ ರಿಪೋರ್ಟ್ ಕಡ್ಡಾಯ!

ಕೋವಿಡ್ ಆತಂಕ ಭಾರತದಲ್ಲೂ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಸೇರಿದಂತೆ ಹಲವು ನಿಯಮಗಳು ಜಾರಿಯಾಗುತ್ತಿದೆ. ಇದೀಗ ಪ್ರಮುಖ ಪ್ರವಾಸಿ ತಾಣ ತಾಜ್‌ಮಹಲ್ ಪ್ರವೇಶಕ್ಕೆ ಕಠಿಣ ನಿಮಯ ಜಾರಿ ಮಾಡಲಾಗಿದೆ.

RTPCR negative report must for Taj mahal visitors amid surge of covid virus in china ckm
Author
First Published Dec 22, 2022, 5:10 PM IST

ದೆಹಲಿ(ಡಿ.22): ಕೊರೋನಾ ಆತಂಕ ಮತ್ತೆ ಎದುರಾಗಿದೆ. ಚೀನಾ, ಜಪಾನ್, ಅಮೆರಿಕ, ಬ್ರೆಜಿಲ್ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಶುರುವಾಗಿರುವ ಕೋವಿಡ್ ಅಲೆ ಭಾರತಕ್ಕೆ ಅಪ್ಪಳಿಸದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಪರಿಸ್ಥಿತಿ ಅವಲೋಕಿಸಿದ್ದಾರೆ. ಇತ್ತ ಸಿನಿಮಾ ಮಂದಿರ, ಆಡಿಟೋರಿಯಂ ಸೇರಿದಂತೆ ಒಳಾಂಗಣ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ. ಭಾರತದಲ್ಲಿ ಒಂದೊಂದೆ ನಿಯಮ ಜಾರಿಯಾಗುತ್ತಿದೆ. ಇದೀಗ ತಾಜ್‌ಮಹಲ್ ಪ್ರವಾಸಿ ತಾಣದಲ್ಲಿ ನಿರ್ಬಂಧ ಹೇರಿಕೆ ಮಾಡಲಾಗಿದೆ. ತಾಜ್‌ಮಹಲ್ ಪ್ರವೇಶಿಸಲು ಇದೀಗ ಕೋವಿಡ್ ನೆಗಟೀವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಈ ಮೂಲಕ ಜನ ಸೇರುವ ಒಂದೊಂದೆ ಪ್ರದೇಶಕ್ಕೆ ಬೀಗ ಬೀಳಲು ಆರಂಭವಾಗಿದೆ. 

ತಾಜ್‌ಮಹಲ್ ವೀಕ್ಷಣೆಗೆ ಇನ್ನು ಕೋವಿಡ್ ನೆಗಟೀವ್ ವರದಿ ಕಡ್ಡಾಯ ಮಾಡಲಾಗಿದೆ. ಎರಡು ಡೋಸ್, ಬೂಸ್ಟರ್ ಡೋಸ್  ವರದಿ ಜೊತೆಯಲ್ಲಿ ಕೋವಿಡ್ ನೆಗಟೀವ್ ವರದಿ ಅವಶ್ಯಕವಾಗಿದೆ. ಇಷ್ಟೇ ಅಲ್ಲ ನೆಗಟೀವ್ ವರದಿ ಅವಧಿ 48 ಗಂಟೆ ಮೀರಿರಬಾರದು ಎಂದು ಆಗ್ರಾದ ಆರೋಗ್ಯ ಅಧಿಕಾರಿ ಸೂಚಿಸಿದ್ದಾರೆ.

ರಾಹುಲ್ ಗಾಂಧಿ ಯಾತ್ರೆ ನಿಲ್ಲಿಸಲು ಕೇಂದ್ರ ಸರ್ಕಾರ ಕೋವಿಡ್ ವೈರಸ್ ಬಿಟ್ಟಿದೆ: ಉದ್ಧವ್‌ ಠಾಕ್ರೆ ಬಣ

ತಾಜ್‌ಮಹಲ್‌ಗೆ ದೇಶ ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಇಂತಹ ಪ್ರವಾಸಿ ತಾಣಗಳಲ್ಲಿ ಮುಂಜಾಗ್ರತೆ ಕ್ರಮ ಅಗತ್ಯ. ಭಾರತದಲ್ಲಿ ಕೋವಿಡ್ ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲಾ ಪ್ರವಾಸಿಗರು ಸಹಕರಿಸಬೇಕು ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ.

ಚೀನಾದಲ್ಲಿ ಕೋವಿಡ್ ಸ್ಫೋಟಕ್ಕೆ ಕಾರಣವಾಗಿರುವ ಒಮಿಕ್ರಾನ್ BF.7 ಉಪತಳಿ ಇದೀಗ ಭಾರತದಲ್ಲಿ ಪತ್ತೆಯಾಗಿದೆ. ಇದು ಆತಂಕ ಹೆಚ್ಚಿಸಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ವರದಿ ತರಿಸಿಕೊಂಡು ಮಹತ್ವದ ಸಭೆ ನಡೆಸಿದ್ದಾರೆ. ಕೋವಿಡ್ ಆತಂಕ ಹೆಚ್ಚಾಗುವ ಮುನ್ನವೇ ಭಾರತದಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಮೋದಿ ಸೂಚಿಸಿದ್ದಾರೆ. ಆಸ್ಪತ್ರೆ, ಬೆಡ್, ಆಕ್ಸಿಜನ್, ಆ್ಯಂಬುಲೆನ್ಸ್ ಸೇರಿದಂತೆ ಎಲ್ಲಾ ವ್ಯವಸ್ಥೆ ಸಮಪರ್ಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

 

Assembly election: ಪಂಚರತ್ನ ರಥಯಾತ್ರೆ ತಡೆಯಲು ಕೊರೊನಾ ಭೂತ ಬಿಡಲಾಗುತ್ತಿದೆ: ಕುಮಾರಸ್ವಾಮಿ

ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಬೂಸ್ಟರ್ ಡೋಸ್ ಪಡುಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಮೋದಿ ಸೂಚಿಸಿದ್ದಾರೆ. ಇದೀಗ ಆಯಾ ರಾಜ್ಯಗಳು ಮಾಸ್ಕ್ ಕಡ್ಡಾಯ ಮಾಡಲು ಮುಂದಾಗಿದೆ. ಇತ್ತ ಅಂತಾರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆಗೆ ಸೂಚನೆ ನೀಡಲಾಗಿದೆ. 

ಚೀನಾ ಮಾತ್ರವಲ್ಲ, 5 ವಿದೇಶಗಳಲ್ಲಿ ಮತ್ತೆ ಕೋವಿಡ್‌ ಪ್ರಕರಣ ಹಾಗೂ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜಪಾನ್‌, ದಕ್ಷಿಣ ಕೊರಿಯಾ, ಫ್ರಾನ್ಸ್‌, ಬ್ರೆಜಿಲ್‌, ಅಮೆರಿಕ ಅತಿ ಹೆಚ್ಚು ದೈನಂದಿನ ಕೇಸುಗಳು ವರದಿಯಾಗುತ್ತಿರುವ ಟಾಪ್‌ 5 ದೇಶಗಳು ಎನಿಸಿಕೊಂಡಿವೆ.   ಜಪಾನ್‌ನಲ್ಲಿ ನ.14ರಿಂದ 20ರವರೆಗಿನ ವಾರದ ಸರಾಸರಿ ಕೋವಿಡ್‌ ಕೇಸು 84,725ರಷ್ಟಿದ್ದು, ಡಿಸೆಂಬರ್‌ನಲ್ಲಿ ಇದು 1.52 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ರೀತಿ ನವೆಂಬರ್‌ನಲ್ಲಿ 100ರಷ್ಟಿದ್ದ ಸರಾಸರಿ ಸಾವಿನ ಪ್ರಮಾಣ ಡಿಸೆಂಬರ್‌ನಲ್ಲಿ 241ಕ್ಕೆ ಏರಿಕೆಯಾಗಿದೆ. ಆದರೆ ಅಮೆರಿಕದಲ್ಲಿ ಕೋವಿಡ್‌ ಅಬ್ಬರ ಕೊಂಚ ತಗ್ಗಿದೆ. ನವೆಂಬರ್‌ನಲ್ಲಿ ಸರಾಸರಿ 42,550 ಕೇಸುಗಳು ವರದಿಯಾಗಿದ್ದರೆ, ಡಿಸೆಂಬರ್‌ನಲ್ಲಿ ಅವುಗಳ ಪ್ರಮಾಣ 34,923ಕ್ಕೆ ಇಳಿದಿದೆ. ಇದೇ ರೀತಿ ಸಾವಿನ ಸಂಖ್ಯೆಯೂ 362 ರಿಂದ 214 ಕ್ಕೆ ಕುಸಿದಿದೆ.

Follow Us:
Download App:
  • android
  • ios