Assembly election: ಪಂಚರತ್ನ ರಥಯಾತ್ರೆ ತಡೆಯಲು ಕೊರೊನಾ ಭೂತ ಬಿಡಲಾಗುತ್ತಿದೆ: ಕುಮಾರಸ್ವಾಮಿ

ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನ ನೋಡಿ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ. ಈ ವಿಚಾರವನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಮತ್ತೆ ಇದಕ್ಕೆ ನಿರ್ಬಂಧ ಏರಲು ಕೊರೊನಾ ಭೂತ ಬಿಡುವ ಹುನ್ನಾರ ನಡೆಯುತ್ತಿದೆ.

Corona ghost is being released to prevent Pancharatna Rath Yatra Kumaraswamy sat

ರಾಮನಗರ (ಡಿ.22): ಈಗ ಚೀನಾದಲ್ಲಿ ಕೊರೊನಾ ಹರಡುತ್ತಿರುವ ವಿಚಾರವನ್ನ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕ್ರಮತೆಗೆದುಕೊಳ್ಳುವುದನ್ನ ಒಪ್ಪಿಕೊಳ್ಳುತ್ತೇನೆ. ಆದರೆ, ನನಗೊಂದು ಮಾಹಿತಿ ಇದೆ. ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನ ನೋಡಿ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ. ಈ ವಿಚಾರವನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಮತ್ತೆ ಇದಕ್ಕೆ ನಿರ್ಬಂಧ ಏರಲು ಕೊರೊನಾ ಭೂತ ಬಿಡುವ ಹುನ್ನಾರ ನಡೆಯುತ್ತಿರುವ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೋವಿಡ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ವಿಚಾರವಾಗಿ ನಾನು ಲಘುವಾಗಿ ಮಾತನಾಡುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಸರ್ಕಾರ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ನನ್ನ ಸಹಕಾರ ಇದೆ. ಆದರೇ ಈ ಪಂಚರತ್ನ ಯಾತ್ರೆಯನ್ನ ಹೇಗೆ ನಿಲ್ಲಿಸಬಹುದು ಎಂಬ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ನನಗಿದೆ. ಈ ವಿಚಾರವನ್ನು ಕೇಶವಕೃಪದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಜನರ ದುಡ್ಡಲ್ಲಿ ಬಿಜೆಪಿ ಸರ್ಕಾರ ಮೋಜು: ಕುಮಾರಸ್ವಾಮಿ

ಅಧಿವೇಶನಕ್ಕಿಂತ ಯಾತ್ರೆಯೇ ಮುಖ್ಯ: ಕಳೆದ ಮೂರು ದಿನಗಳಿಂದ ಅಧಿವೇಶನದಲ್ಲಿ ಏನಾಗ್ತಿದೆ ಎಂಬುದು ಗೊತ್ತು. ನಾಡಿನ ಸಮಸ್ಯೆ ಬಗ್ಗೆ ಸಕಾರಾತ್ಮಕವಾಗಿ ಚರ್ಚೆಯಾಗಿಲ್ಲ. ನನಗೆ ಅಧಿವೇಶನಕ್ಕಿಂತ ಪಂಚರತ್ನ ಯಾತ್ರೆಯೆ ಮುಖ್ಯ. ನಾಡಿನಲ್ಲಿ ಪಂಚರತ್ನ ಯೋಜನೆ ಜಾರಿಗೆ ತರಲು ಯಾತ್ರೆ ಮಾಡ್ತಿದ್ದೇನೆ. ರಾಜ್ಯ, ದೇಶದಲ್ಲಿ ಆಗುತ್ತಿರುವ ಅನಾಹುತಗಳಿಗೆ ನ್ಯಾಯ ಓದಗಿಸಲು ಈ ಪಂಚರತ್ನ ಯೋಜನೆ ಜಾರಿಗೆ ತರಲು ಹೊರಟಿದ್ದೇನೆ. ವಿಧಾನಸಭೆಯಲ್ಲಿ ಕೂತು ಅರ್ಧಗಂಟೆ ಮಾತಾಡಿದ್ರೆ ಸರ್ಕಾರ ಸಮಸ್ಯೆ ಬಗೆಹರಿಸುತ್ತಾ.? ಇಷ್ಟು ವರ್ಷ ಮಾತನಾಡಿರುವುದನ್ನ ಸರ್ಕಾರ ಎಷ್ಟು ಜಾರಿಗೆ ತಂದಿದೆ. ಮಾಧ್ಯಮಗಳ ಮುಂದೆ ಸರ್ಕಾರ ಮಾತನಾಡುವುದು ಬೇರೆ, ಇರುವುದೇ ಬೇರೆಯಾಗಿದೆ ಎಂದು ಹೇಳಿದರು.

ಪಂಚರತ್ನ ಯಾತ್ರೆಗೆ ಜನರ ಬೆಂಬಲ ಹೆಚ್ಚಾಗ್ತಿದೆ: ಪ್ರತಿನಿತ್ಯ ಪಂಚರತ್ನ ಯಾತ್ರೆಗೆ ಜನ ಬೆಂಬಲ ಹೆಚ್ಚಾಗುತ್ತಿದೆ. ರಾಜ್ಯದ ಸಮಸ್ಯೆ ಬಗೆಹರಿಸಲು ಜೆಡಿಎಸ್ ಅನಿವಾರ್ಯ ಎಂಬುದು ಜನರ ಅಭಿಪ್ರಾಯ. ಎಲ್ಲಾ ಸಮಾಜಗಳು ಮೀಸಲಾತಿ ಹೋರಾಟ ಪ್ರಾರಂಭಿಸಿವೆ. ನಿಯಮಾವಳಿಗಳ ಆದಾರದ ಮೇಲೆ ಮೀಸಲಾತಿ ನೀಡಬೇಕು. ಸಮುದಾಯದ ಸಮಸ್ಯೆಗಳಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಸರ್ಕಾರ ತಾತ್ಕಾಲಿಕ ಪರಿಹಾರ ನೀಡಿ ಸಾರ್ವಜನಿಕವಾಗಿ ಯಾರನ್ನು ದಾರಿ ತಪ್ಪಿಸಬೇಡಿ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ಬೇಡ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಪಾರದರ್ಶಕ ಮೆರಯಬೇಕು. ಮೀಸಲಾತಿ ವಿಚಾರದಲ್ಲಿ ಹೇಳಿಕೆ ಕೊಡುವ ಬದಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಸಮುದಾಯದ ಆರ್ಥಿಕತೆ, ಬಡತನ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಕುಮಾರಸ್ವಾಮಿ ಹೇಳಿದರು.

Mandya: ಡಿ.24ಕ್ಕೆ ಮೇಲುಕೋಟೆಗೆ ಪಂಚರತ್ನ ರಥಯಾತ್ರೆ: ಶಾಸಕ ಸಿ.ಎಸ್‌.ಪುಟ್ಟರಾಜು

ಕೊಬ್ಬರಿ ಬೆಲ್ಲದ ವಿಶೇಷ ಹಾರ:  ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಂಚರತ್ನ‌ ಯಾತ್ರೆ ಕಾಲಿಡುತ್ತಿದ್ದಂತೆಯೇ ಭರ್ಜರಿ ಸ್ವಾತ ಸಿಕ್ಕಿದೆ. ಮಂಡ್ಯದ ಶಾಸಕ ಎಂ. ಶ್ರೀನಿವಾಸ್‌ ಅವರ ತವರೂರಾದ ಹನಕೆರೆಯಲ್ಲಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಇನ್ನು ಕೊಬ್ಬರಿ-ಬೆಲ್ಲದ ಹಾರ ಹಾಕಿ ಸ್ವಾಗತಿಸಲಾಯಿತು. ಜೆಡಿಎಸ್ ಕಾರ್ಯಕರ್ತರ ಸಂಭ್ರಮ ಮಾಡಿತ್ತು. ಕ್ರೈನ್ ಮೂಲಕ ಕೊಬ್ಬರಿ ಬೆಲ್ಲದ ಹಾರ ಹಾಕಿದ ಜೆಡಿಎಸ್ ಕಾರ್ಯಕರ್ತರು. ಶಾಸಕ ಎಂ.ಶ್ರೀನಿವಾಸ್, ಮನ್ಮುಲ್ ಅಧ್ಯಕ್ಷ ರಾಮಚಂದ್ರು, ಯೋಗೇಶ್, ಸೇರಿ ಹಲವರು ಸಾಥ್ ನೀಡಿದರು.

Latest Videos
Follow Us:
Download App:
  • android
  • ios