Asianet Suvarna News Asianet Suvarna News

ಶಾಲೆಗಳಲ್ಲಿ ಮಕ್ಕಳಿಗೆ ಖಾಸಗಿ ಅಂಗಗಳ ಹೆಸರು ಕೇಳಲಾಗ್ತಿದೆ, ಎಡಪಂಥೀಯರ ಬಗ್ಗೆ ಮೋಹನ್‌ ಭಾಗ್ವತ್‌ ಕಿಡಿ

ಎಡಪಂಥೀಯ ಸಿದ್ಧಾಂತದ ಬಗ್ಗೆ ಮೋಹನ್ ಭಾಗವತ್ ಮಾತನಾಡಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಖಾಸಗಿ ಅಂಗಗಳ ಹೆಸರುಗಳನ್ನು ಕೇಳಲಾಗುತ್ತದೆ, ಅಂತಹ ಜನರು ತಮ್ಮನ್ನು ತಾವು ವಿಜ್ಞಾನಿಗಳು ಎಂದು ಅಂದುಕೊಳ್ಳುತ್ತಿದ್ದಾರೆ ಎಂದರು.
 

RSS Sangh Chief Mohan Bhagwat on Leftist Ideology  and G20 Summit san
Author
First Published Sep 18, 2023, 5:11 PM IST

ನವದೆಹಲಿ (ಸೆ.18):  ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಎಡಪಂಥೀಯ ಸಿದ್ಧಾಂತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾಲೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಖಾಸಗಿ ಅಂಗಗಳ ಹೆಸರುಗಳನ್ನು ಕೇಳುವುದು ಎಡಪಂಥೀಯ ವ್ಯವಸ್ಥೆ ನಮ್ಮ ಮೇಲೆ ಮಾಡಿರುವ ದಾಳಿಯಾಗಿದೆ. ಇಂತಹ ವಿಚಾರಧಾರೆಯುಳ್ಳವರು ತಾವೇ ಶಕ್ತಿವಂತರು, ತಾವೇ ದೇವರು ಎಂದು ಭಾವಿಸುತ್ತಾರೆ. ಅವರು ತಮ್ಮನ್ನು ವಿಜ್ಞಾನಿಗಳು ಎಂದು ಕರೆಯುತ್ತಾರೆ. ಆದರೆ, ನಿಜವಾಗಿ ಅವರೇನೂ ಆಗಿರೋದಿಲ್ಲ ಎಂದಿದ್ದಾರೆ. ಪುಣೆಯಲ್ಲಿ ಮರಾಠಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೋಹನ್ ಭಾಗವತ್‌ ಮಾತನಾಡಿದ್ದು, ನಾನು ಗುಜರಾತ್‌ನ ಶಾಲೆಗೆ ಹೋಗಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ನನಗೆ ಶಿಶುವಿಹಾರ ಶಾಲೆಯಲ್ಲಿ ಪೋಸ್ಟ್ ಮಾಡಿದ ಫಲಕವನ್ನು ತೋರಿಸಿದ/ ಅದರಲ್ಲಿ ಎಲ್‌ಕೆಜಿ ಮಕ್ಕಳಿಗೆ ತಮ್ಮ ಖಾಸಗಿ ಅಂಗಗಳ ಹೆಸರು ಗೊತ್ತಿದೆಯೇ ಎಂದು ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಕೇಳುತ್ತಿದ್ದ. ಎಡಪಂಥೀಯ ಪರಿಸರ ವ್ಯವಸ್ಥೆಯ ದಾಳಿ ಇಲ್ಲಿಯತನಕ ಬಂದು ತಲುಪಿದೆ. ಸಮಾನ ಮನಸ್ಕ ಜನರ ಸಹಾಯವಿಲ್ಲದೆ ಇದು ಸಾಧ್ಯವಿಲ್ಲ. ಎಡಪಂಥೀಯ ಸಿದ್ಧಾಂತ ಪ್ರಪಂಚದಾದ್ಯಂತ ವಿನಾಶವನ್ನು ತಂದಿದೆ. ಎಡಪಂಥೀಯ ಜನರು ಜಗತ್ತಿನಲ್ಲಿ ಸಾಂಸ್ಕೃತಿಕ ಮಾರ್ಕ್ಸ್‌ವಾದವನ್ನು ಪ್ರಾರಂಭಿಸಿದ್ದಾರೆ. ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದಾರೆ. ಮಾರ್ಕ್ಸ್ ವಾದದ ಹೆಸರಿನಲ್ಲಿ ಸಮಾಜಕ್ಕೆ ಹಾನಿಯುಂಟು ಮಾಡುವ ತಪ್ಪು ಆದರ್ಶಗಳು ಮತ್ತು ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

"ಯುಎಸ್‌ನಲ್ಲಿ ಹೊಸ ಸರ್ಕಾರ ರಚನೆಯಾದ ನಂತರದ ಮೊದಲ ಆದೇಶ (ಡೊನಾಲ್ಡ್ ಟ್ರಂಪ್ ನಂತರ) ಶಾಲೆಗೆ ಸಂಬಂಧಿಸಿದಂತೆ ಆಗಿತ್ತು. ಅಲ್ಲಿ ಶಿಕ್ಷಕರಿಗೆ ಮಕ್ಕಳ ಲಿಂಗದ ಬಗ್ಗೆ ಮಾತನಾಡದಂತೆ ಸೂಚನೆ ನೀಡಲಾಗಿತ್ತು. ವಿದ್ಯಾರ್ಥಿಗಳು ಸ್ವಂತವಾಗಿ ಮುಂದೊಂದು ದಿನ ನಿರ್ಧರಿಸಲು ಸಾಧ್ಯವಾಗುತ್ತದೆ. ಒಬ್ಬ ಹುಡುಗ ತಾನು ಈಗ ಹುಡುಗಿಯಾಗಿದ್ದೇನೆ ಎಂದು ಹೇಳಿದರೆ, ಹುಡುಗನಿಗೆ ಹೆಣ್ಣುಮಕ್ಕಳಿಗೆ ಮೀಸಲಾದ ಶೌಚಾಲಯವನ್ನು ಬಳಸಲು ಅವಕಾಶ ನೀಡಬೇಕು ಎಂದು ಭಾಗವತ್ ಹೇಳಿದರು. ಇವು ಸಮಾಜ ಮಾತ್ರವಲ್ಲದೆ ನಮ್ಮ ಮನೆ, ಕುಟುಂಬದ ಮೇಲೂ ಪರಿಣಾಮ ಬೀರುತ್ತಿವೆ. ಸಮಾಜ ಬಾಂಧವರಾದ ನಾವೆಲ್ಲರೂ ಈ ಬಿಕ್ಕಟ್ಟಿನ ಬಗ್ಗೆ ಜಾಗೃತರಾಗಿರಬೇಕು. ಈ ಬಿಕ್ಕಟ್ಟಿನಿಂದ ಜಗತ್ತನ್ನು ಮುಕ್ತಗೊಳಿಸುವ ಜವಾಬ್ದಾರಿ ಭಾರತದ ಮೇಲೆ ಬೀಳಲಿದೆ.

ಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಮೋಹನ್ ಭಾಗವತ್ ತಿರುಗೇಟು ನೀಡಿದ್ದಾರೆ. ಸನಾತನ ಧರ್ಮವನ್ನು ತನ್ನ ಸರಿಯಾದ ಸ್ಥಾನಕ್ಕೆ ತರಲು ರಾಕ್ಷಸರೊಂದಿಗೆ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ದೇವ ಸಂಸ್ಕೃತಿಯ ಪರವಾಗಿ ನಾವೆಲ್ಲರೂ ಒಟ್ಟಾಗಿ ನಿಂತು ಜಗತ್ತನ್ನು ಕತ್ತಲೆಯಿಂದ ಹೊರತರಬೇಕಾಗಿದೆ ಎಂದು ಹೇಳಿದರು.

ಕಾಶಿ, ಮಥುರಾ ವಿವಾದ ಬಗೆಹರಿಸಲು ಆರೆಸ್ಸೆಸ್‌ ಪ್ಲ್ಯಾನ್‌, ಮುಗಿಯುತ್ತಾ ದಶಕಗಳ ವಿವಾದ?

ದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿರುವ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥರು ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು. ಭಾರತ, ಆತಿಥೇಯ ರಾಷ್ಟ್ರವಾಗಿ, ಶೃಂಗಸಭೆಯ ಮೊದಲ ದಿನವೇ ಆಫ್ರಿಕನ್ ಯೂನಿಯನ್ ಅನ್ನು G20 ಸದಸ್ಯರನ್ನಾಗಿ ಮಾಡಿದೆ. ಜಿ 20 ಇತಿಹಾಸದಲ್ಲಿ ಇದು ಎಂದಿಗೂ ಸಂಭವಿಸಿಲ್ಲ. ಇದು ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದರು.

ನಾವು ಒಗ್ಗಟ್ಟಾಗಿರಬೇಕು, ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಅಪಾಯವಿಲ್ಲ: ಮೋಹನ್‌ ಭಾಗ್ವ

Follow Us:
Download App:
  • android
  • ios