ಮಣಿ​ಪು​ರ​ದಲ್ಲಿ ಶಾಂತಿ ಕಾಪಾ​ಡಿ: ಆರೆ​ಸ್ಸೆಸ್‌ ಮನ​ವಿ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌​) ಮಣಿಪುರದಲ್ಲಿ ಜನಾಂಗೀ​ಯ ಹಿಂಸಾಚಾರವನ್ನು ಖಂಡಿಸಿದೆ ಸರ್ಕಾರವು ತಕ್ಷ​ಣವೇ ಶಾಂತಿಯ ಮರುಸ್ಥಾಪ​ನೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

RSS condemned the communal violence in Manipur and appealed to the government to take all possible steps to restore peace immediately akb

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌​) ಮಣಿಪುರದಲ್ಲಿ ಜನಾಂಗೀ​ಯ ಹಿಂಸಾಚಾರವನ್ನು ಖಂಡಿಸಿದೆ ಮತ್ತು ಸ್ಥಳೀಯ ಆಡಳಿತ, ಪೊಲೀ​ಸ​ರು, ಭದ್ರತಾ ಪಡೆಗಳು ಮತ್ತು ಕೇಂದ್ರೀಯ ಏಜೆನ್ಸಿಗಳು ಸೇರಿದಂತೆ ಸರ್ಕಾರವು ತಕ್ಷ​ಣವೇ ಶಾಂತಿಯ ಮರುಸ್ಥಾಪ​ನೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ಆರ್‌ಎಸ್‌ಎಸ್‌ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಭಾನು​ವಾರ ಸಂಜೆ ಈ ಹೇಳಿಕೆ ನೀಡಿ, ‘ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯ ಕ್ರಮಗಳ ಜೊತೆಗೆ ಹಿಂಸೆಯಿಂದ ನಿರಾಶ್ರಿತರಾದವರಿಗೆ ಪರಿಹಾರ ಸಾಮಗ್ರಿಗಳ ತಡೆರಹಿತ ಪೂರೈಕೆ ಆಗು​ವಂತೆ ಸರ್ಕಾರ ನೋಡಿ​ಕೊ​ಳ್ಳ​ಬೇ​ಕು’ ಎಂದು ಆಗ್ರ​ಹಿ​ಸಿ​ದ್ದಾ​ರೆ. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷ ಮತ್ತು ಹಿಂಸೆಗೆ ಸ್ಥಳವಿಲ್ಲ. ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾದ ವಿಶ್ವಾಸ ಕೊರತೆಯನ್ನು ಎರಡೂ ಕಡೆಯವರು ನಿವಾರಿಸಬೇಕು ಮತ್ತು ಶಾಂತಿ (Peace) ಮರುಸ್ಥಾಪಿಸಲು ಮಾತು​ಕ​ತೆ ಪ್ರಾರಂಭಿಸಬೇಕು. ಹಿಂಸೆ​ಯಿಂದ ನಿರಾ​ಶ್ರಿ​ತ​ರಾದ 50 ಸಾವಿರ ಜನರ ನೆರ​ವಿಗೆ ಆರೆ​ಸ್ಸೆಸ್‌ ನಿಲ್ಲ​ಲಿ​ದೆ ಎಂದು ಒತ್ತಿ ಹೇಳಿ​ದ್ದಾ​ರೆ.

ಮಣಿಪುರ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿ; 1200 ಜನರ ಗುಂಪಿನಿಂದ ದುಷ್ಕೃತ್ಯ

ಕಳೆದ 45 ದಿನಗಳ ನಿರಂತರ ಹಿಂಸೆ ಅತ್ಯಂತ ಕಳ​ವ​ಳ​ಕಾ​ರಿ. ವಿಷಾ​ದ​ನೀ​ಯ. ಸ್ಥಿತಿ ತಿಳಿ​ಗೊ​ಳಿ​ಸಲು ಮತ್ತು ಜನರ ಜೀವ ಉಳಿ​ಸ​ಲು ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ಮಣಿಪುರದ ನಾಗರಿಕ ಸಮಾಜ, ರಾಜಕೀಯ ಗುಂಪುಗಳು ಮತ್ತು ಸಾರ್ವಜನಿಕರಿಗೆ ಆರ್‌ಎಸ್‌ಎಸ್‌ ಮನವಿ ಮಾಡುತ್ತದೆ ಎಂದಿ​ದ್ದಾ​ರೆ.  ಮಣಿಪುರದಲ್ಲಿ ಒಂದೂವ​ರೆ ತಿಂಗಳ ಹಿಂದೆ ಭುಗಿಲೆದ್ದ ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸೆ​ಯ​ಲ್ಲಿ (Racial violence) 110ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 11 ಜಿಲ್ಲೆಗಳಲ್ಲಿ ಕರ್ಫ್ಯೂ (curfew) ವಿಧಿಸಲಾ​ಗಿ​ದೆ ಮತ್ತು ಇಂಟರ್ನೆಟ್‌ ಸೇವೆ (Internet Service)ಸ್ತಬ್ಧ​ಗೊಂಡಿ​ದೆ.

ಕಾಂಗ್ರೆಸ್‌ ವ್ಯಂಗ್ಯ:

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌, ಆ​ರೆ​ಸ್ಸೆ​ಸ್‌ಗೆ ಪ್ರತಿ​ಕ್ರಿ​ಯಿ​ಸಲು 45 ದಿನ ಬೇಕಾ​ಯಿತು. ಇನ್ನು ಪ್ರಧಾನಿ ನರೇಂದ್ರ ಮೋದಿ ಮೌನ ಮುರಿ​ಯ​ಬೇಕು. ಆರೆಸ್ಸೆಸ್‌ ಮೂಲಕ ಮಾತಾ​ಡಿ​ಸು​ವು​ದನ್ನು ನಿಲ್ಲಿ​ಸ​ಬೇ​ಕು ಎಂದಿ​ದ್ದಾ​ರೆ.

ಮಣಿಪುರ ರಾಜ​ಧಾ​ನಿ​ಯಲ್ಲಿ ಮತ್ತೆ ಹಿಂಸೆ: ಮನೆಗಳಿಗೆ ಬೆಂಕಿ: ಪೊಲೀಸರ ಜತೆ ಉದ್ರಿ​ಕ್ತ​ರ ಘರ್ಷಣೆ

Latest Videos
Follow Us:
Download App:
  • android
  • ios